ಬೆಂಗಳೂರು: ಸ್ಯಾಂಡಲ್ವುಡ್ಗೆ ಡ್ರಗ್ಸ್ ನಂಟು ಆರೋಪ ಪ್ರಕರಣ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರ ವಶದಲ್ಲಿರುವ ವೈಭವ್ ಜೈನ್, ಪಾರ್ಟಿ ಮಾಡುವುದಕ್ಕಾಗಿಯೇ ನಗರದಲ್ಲಿ ಫ್ಲ್ಯಾಟ್ ಖರೀದಿಸಿದ್ದ ಎಂಬ ಅಂಶ ಬೆಳಕಿಗೆ ಬಂದಿದೆ.
ಹೆಣ್ಣೂರಿನ ಅಪಾರ್ಟ್ಮೆಂಟ್ನಲ್ಲಿ ಪಾರ್ಟಿ ಮಾಡುವುದಕ್ಕಾಗಿಯೇ ದುಬಾರಿ ಮೌಲ್ಯದ ಫ್ಲ್ಯಾಟ್ ಖರೀದಿಸಿದ್ದ. ಎರಡು ಬೆಡ್ ರೂಮಿನ ವಿಶಾಲವಾದ ಹಾಲ್ ಹೊಂದಿರುವ ಫ್ಲ್ಯಾಟ್ ನಲ್ಲಿ ವಿಕೇಂಡ್ ಪಾರ್ಟಿ ನಡೆಯುತಿತ್ತು. ಮೋಜು ಮಸ್ತಿ ನಡೆಸಲು ನೀಲಿ ಹಾಗೂ ಕಂದು ಬಣ್ಣದ ಲೈಟಿಂಗ್ ಮಾಡಿಸಿದ್ದ. ವಾರಾಂತ್ಯದಲ್ಲಿ ಗಣ್ಯರ, ಪ್ರಭಾವಿಗಳ ಮಕ್ಕಳು ಹಾಗೂ ನಟ-ನಟಿಯರು ಪಾರ್ಟಿಯಲ್ಲಿ ಭಾಗಿಯಾಗುತ್ತಿದ್ದರು. ಈ ಪಾರ್ಟಿಯಲ್ಲಿ ಭಾಗಿಯಾಗಲು ನೆರೆಯ ತೆಲಂಗಾಣ ರಾಜಕಾರಣಿಗಳ ಮಕ್ಕಳು ಭಾಗಿಯಾಗುತ್ತಿದ್ದರು ಎನ್ನಲಾಗುತ್ತಿದೆ.
ವೈಯಾಲಿ ಕಾವಲ್ ನಲ್ಲಿ ಜ್ಯೂವೆಲ್ಲರಿ ವ್ಯಾಪಾರ ಮಾಡುತ್ತಿದ್ದ ವೈಭವ್ ಜೈನ್, ಡ್ರಗ್ ಪ್ರಕರಣದಲ್ಲಿ ಬಂಧಿತರಾಗಿರುವ ವಿರೇನ್ ಖನ್ನಾ ಸೂಚನೆಯಂತೆ ಪಾರ್ಟಿಗಳಲ್ಲಿ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಆಪಾದನೆ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಬಂಧಿಸಿ ತ್ರೀವ ವಿಚಾರಣೆಗೊಳಪಡಿಸಿದ್ದಾರೆ.