ETV Bharat / state

ವಾಲ್ಮೀಕಿ ಸ್ವಾಮೀಜಿಯಂತೆ ತಾಳ್ಮೆಯಿಂದ ನಾವು ಮೀಸಲಾತಿ ಪಡೆಯುತ್ತೇವೆ: ವಚನಾನಂದ ಸ್ವಾಮೀಜಿ

ಕೆಲವೇ ತಿಂಗಳಲ್ಲಿ ಸಿಎಂ‌ ಬೊಮ್ಮಾಯಿ ಪಂಚಮಸಾಲಿ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕೊಟ್ಟೇ ಕೊಡುತ್ತಾರೆ ಎಂದು ವಚನಾನಂದ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.

Vachanananda Swamiji
ವಚನಾನಂದ ಸ್ವಾಮೀಜಿ
author img

By

Published : Oct 9, 2022, 9:49 AM IST

ಬೆಂಗಳೂರು: ವಾಲ್ಮೀಕಿ ಸ್ವಾಮೀಜಿಯವರಂತೆ ನಾವು ತಾಳ್ಮೆಯಿಂದ ಮೀಸಲಾತಿ ಪಡೆದೇ ಪಡೆಯುತ್ತೇವೆ ಎಂದು ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ವಿಶ್ವಾಸ ವ್ಯಕ್ತಪಡಿಸಿದರು.

ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಬೊಮ್ಮಾಯಿ ಭೇಟಿ ಬಳಿಕ ಮಾತನಾಡಿದ ಅವರು, ಕಳೆದ 28 ವರ್ಷಗಳಿಂದ ವೀರಶೈವ ಪಂಚಮಸಾಲಿ ಮೀಸಲಾತಿಗಾಗಿ ಹೋರಾಟ ಮಾಡಲಾಗುತ್ತಿದೆ. ಈ ಸಂಬಂಧ ಹಿಂದುಳಿದ ವರ್ಗಗಳ ಆಯೋಗ ಸಮೀಕ್ಷೆ ನಡೆಸುತ್ತಿದೆ. ಆ ವರದಿಯನ್ನು ತಕ್ಷಣ ತರಿಸಿ ಹೇಗೆ ಕ್ಲಿಷ್ಟಕರ ಎಸ್​​ಸಿ, ಎಸ್​ಟಿ ಮೀಸಲಾತಿ ಹೆಚ್ಚಿಸಿ ಸಮಸ್ಯೆ ಬಗೆಹರಿಸಿತೋ ಮುಂದಿನ ಹೆಜ್ಜೆಯಾಗಿ ಪಂಚಮಸಾಲಿ ಸಮುದಾಯಕ್ಕೆ ಕೂಡ ಸಿಎಂ ಬೊಮ್ಮಾಯಿ ಬದ್ಧತೆಯೊಂದಿಗೆ ಸಂಪೂರ್ಣ ಭದ್ರತೆಯನ್ನು ಕೊಡುತ್ತಾರೆ ಎಂಬ ವಿಶ್ವಾಸ ಇದೆ ಎಂದರು.

ವಚನಾನಂದ ಸ್ವಾಮೀಜಿ ಪ್ರತಿಕ್ರಿಯೆ

ಸರ್ಕಾರವನ್ನು ಮಕಾಡೆ ಮಲಗಿಸ್ತೀನಿ ಎಂಬ ಮೃತ್ಯುಂಜಯ ಸ್ವಾಮೀಜಿಯ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಅವರು ಕೂಡ ಹೋರಾಟ ಮಾಡುತ್ತಿದ್ದಾರೆ. ಅವರ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.‌ ಒಬ್ಬ ತಾಯಿ ತನ್ನ ಮಗುವಿಗೆ ತಪ್ಪು ಮಾಡಿದಾಗ ಹೇಗೆ ಸಂತೈಸುತ್ತಾರೆ? ಆ ರೀತಿ ಮಾತನಾಡಿದ್ದಾರೆ ವಿನಃ ಬೇರೆ ಏನೂ ಇಲ್ಲ. ಅವರು ಮತ್ತು ನಮ್ಮ ಉದ್ದೇಶ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಸಿಗಬೇಕು ಎಂಬುದಾಗಿದೆ. ಅವರ ಹೋರಾಟಕ್ಕೂ ನಮ್ಮ ಹೋರಾಟಕ್ಕೂ ವ್ಯತ್ಯಾಸ ಇಲ್ಲ ಎಂದು ಸಮಜಾಯಿಷಿ ನೀಡಿದರು.

ಇದನ್ನೂ ಓದಿ: ಶೆಡ್ಯೂಲ್ 9ಗೆ ಮೀಸಲಾತಿ ಸೇರಿಸುವ ಸಂಬಂಧ ಕಾನೂನು ಆಯೋಗ, ತಜ್ಞರ ಜೊತೆ ಚರ್ಚಿಸಿ ಕೇಂದ್ರಕ್ಕೆ ಶಿಫಾರಸು: ಸಿಎಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.