ETV Bharat / state

ಡಿಕೆಶಿ ಭೇಟಿ ಮಾಡಿದ ವಚನಾನಂದ ಶ್ರೀ : ಮೀಸಲಾತಿ ಪರ ದನಿ ಎತ್ತುವಂತೆ ಮನವಿ - ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ

ಸರ್ಕಾರ ಕೊಡಲ್ಲ, ಹೋರಾಟಗಾರರು ಬಿಡಲ್ಲ ಅನ್ನುವ ಸ್ಥಿತಿ ಸದ್ಯ ನಿರ್ಮಾಣವಾಗಿದೆ. ಇದೇ ನಿಟ್ಟಿನಲ್ಲಿ ಇಂದು ಗುರೂಜಿ ಡಿಕೆಶಿಗೆ ಮನವಿ ಮಾಡಿದ್ದಾರೆ. ಈ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ಸಿಗಲಿದೆ ಎಂದು ಡಿಕೆಶಿ ಅವರು ಶ್ರೀಗಳಿಗೆ ಭರವಸೆ ನೀಡಿದ್ದಾರೆ..

Vachanananda Guruji Meets KPCC President D.K. Shivakumar
ಡಿಕೆಶಿ ಭೇಟಿ ಮಾಡಿದ ವಚನಾನಂದ ಗುರೂಜಿ
author img

By

Published : Mar 1, 2021, 7:25 AM IST

ಬೆಂಗಳೂರು : ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಭಾನುವಾರ ಸಂಜೆ ಭೇಟಿ ಮಾಡಿ, ಸಮಾಲೋಚಿಸಿದರು.

ಪಂಚಮಸಾಲಿ ಸಮುದಾಯವನ್ನು 2ಎ ವ್ಯಾಪ್ತಿಗೆ ತರಬೇಕೆಂದು ಆಗ್ರಹಿಸಿ ರಾಜ್ಯದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ವಚನಾನಂದ ಗುರೂಜಿ ಸಹ ಕೈಜೋಡಿಸಿದ್ದಾರೆ. ಜಯ ಮೃತ್ಯುಂಜ ಸ್ವಾಮೀಜಿ ಆರಂಭಿಸಿದ ಹೋರಾಟಕ್ಕೆ ವಚನಾನಂದ ಗುರೂಜಿ ಹರಪನಹಳ್ಳಿಯಲ್ಲಿ ಬೆಂಬಲಿಸಿದ್ದರು. ನಂತರ ಅವರ ಜತೆ ಬೆಂಗಳೂರಿನವರೆಗೂ ಪಾದಯಾತ್ರೆಯಲ್ಲಿ ಆಗಮಿಸಿದ್ದರು.

ಬೆಂಗಳೂರಲ್ಲಿ ಸಮಾವೇಶದ ಬಳಿಕ ಧರಣಿ ಸತ್ಯಾಗ್ರಹ ಇತ್ಯಾದಿಗಳಿಗೆ ಮುಂದಾದರೆ ಅದರಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದರು. ಅದರಂತೆಯೇ ನಡೆದುಕೊಂಡಿದ್ದಾರೆ. ಆದರೆ, ರಾಜ್ಯ ಸರ್ಕಾರ ಪಂಚಮಸಾಲಿಗಳ ಹೋರಾಟಕ್ಕೆ ಬೆಲೆ ಕೊಡುತ್ತಿಲ್ಲ. ಇದರಿಂದ ಪ್ರಮುಖ ಪ್ರತಿಪಕ್ಷವಾಗಿ ಈ ಬಾರಿ ಅಧಿವೇಶನದಲ್ಲಿ ತಮ್ಮ ಪರ ಹಾಗೂ ಮೀಸಲಾತಿ ಪರ ದನಿ ಎತ್ತುವಂತೆ ಗುರೂಜಿ ಡಿಕೆಶಿಗೆ ಮನವಿ ಮಾಡಿದ್ದಾರೆ ಎನ್ನಲಾಗ್ತಿದೆ.

ಲಿಂಗಾಯಿತ ಸಮುದಾಯದಲ್ಲಿ ಅತಿದೊಡ್ಡ ಪಾತ್ರ ಹೊಂದಿರುವ ಪಂಚಮಸಾಲಿಗಳಲ್ಲಿ ಸಾಕಷ್ಟು ಬಡವರು, ಹಿಂದುಳಿದವರು ಇದ್ದಾರೆ. ಮೀಸಲಾತಿ ನೀಡುವುದರಿಂದ ನಾವೂ ಮುಖ್ಯ ವಾಹಿನಿಗೆ ಬರಲು ಸಾಧ್ಯ ಎಂದು ಹೋರಾಟ ನಡೆಯುತ್ತಿದೆ. ಆದರೆ, ಈಗ ಇವರಿಗೆ ಮೀಸಲಾತಿ ಘೋಷಿಸಿದರೆ ಇದರಂತೆ ಇರುವ ಇನ್ನಷ್ಟು ಸಮುದಾಯಗಳು ಬೇಡಿಕೆ ಮುಂದಿಡಲಿವೆ.

ಸರ್ಕಾರ ಕೊಡಲ್ಲ, ಹೋರಾಟಗಾರರು ಬಿಡಲ್ಲ ಅನ್ನುವ ಸ್ಥಿತಿ ಸದ್ಯ ನಿರ್ಮಾಣವಾಗಿದೆ. ಇದೇ ನಿಟ್ಟಿನಲ್ಲಿ ಇಂದು ಗುರೂಜಿ ಡಿಕೆಶಿಗೆ ಮನವಿ ಮಾಡಿದ್ದಾರೆ. ಈ ಹೋರಾಟಕ್ಕೆ ಕಾಂಗ್ರೆಸ್ ಬೆಂಬಲ ಸಿಗಲಿದೆ ಎಂದು ಡಿಕೆಶಿ ಅವರು ಶ್ರೀಗಳಿಗೆ ಭರವಸೆ ನೀಡಿದ್ದಾರೆ.

ಓದಿ: ಸಮಾಜದ ಹಿತಾಸಕ್ತಿಗೇ ಮೊದಲ ಆದ್ಯತೆ, ಜನನಾಯಕರ ಹಿತಾಸಕ್ತಿಗೆ ಸೊಪ್ಪು ಹಾಕುವುದಿಲ್ಲ: ವಚನಾನಂದ ಶ್ರೀ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.