ಬೆಂಗಳೂರು : ನಗರದ ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ನೋ ವ್ಯಾಕ್ಸಿನ್’ ಬೋರ್ಡ್ ಬಿದ್ದಿದೆ. ಲಸಿಕೆ ಕೊರತೆ ಪರಿಣಾಮ ವಯೋವೃದ್ದರು ತಂತ್ರಜ್ಞಾನದ ಬಗ್ಗೆ ಗೊತ್ತಿಲ್ಲದ ಹಿನ್ನೆಲೆ ಪಿಹೆಚ್ಸಿ ಮುಂದೆ ಕಾದು ಕಾದು ಮನೆಗೆ ತೆರಳುವ ಪರಿಸ್ಥಿತಿ ಎದುರಾಗಿದೆ.
ಪ್ಯಾಲೇಸ್ ಗುಟ್ಟಹಳ್ಳಿಯ ಪಿಹೆಚ್ಸಿ ಮುಂದೆ ಇಂದು ಒಟ್ಟು ಮೂರು ಬಾರಿ 65 ವರ್ಷದ ವಯೋವೃದ್ಧೆ ಲಕ್ಷ್ಮಮ್ಮ ಬಂದು ಲಸಿಕೆ ಬಗ್ಗೆ ವಿಚಾರಿಸಿದ್ದಾರೆ. ಸೂಕ್ತ ಸ್ಪಂದನೆ ಸಿಗದ ಕಾರಣ ಅಲ್ಲೇ ಕಾದು ಕುಳಿತ್ತಿದ್ದರು.
ಮೂರು ಬಾರಿ ಬಂದಿದ್ದೀನಿ, ನಮಗೆ 2ನೇ ಡೋಸ್ ಲಸಿಕೆ ಹಾಕಿಸಿಕೊಳ್ಳಲೂ ದಿನಾಂಕ ಮುಗಿಯುತ್ತಾ ಬಂದಿದೆ. ಇಲ್ಲಿ ಬಂದರೆ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.
ಇಂದು ಪಾಲಿಕೆ ಆಯುಕ್ತ ಗೌರವ್ ಗುಪ್ತಾ ಹಾಗೂ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಲಸಿಕೆ ದಾಸ್ತಾನು ಖಾಲಿಯಾಗಿವೆ ಎಂದು ಮಾಹಿತಿ ನೀಡಿದ್ದಾರೆಯೇ ಹೊರತು ಎಷ್ಟು ದಿನ ಹಾಗೂ ಎಷ್ಟು ಲಸಿಕಾ ಕೇಂದ್ರ ಸ್ಥಗಿತಗೊಳಿಸಲಾಗುವುದು ಎಂದು ಮಾಹಿತಿ ನೀಡಿಲ್ಲ.
ಇದನ್ನೂ ಓದಿ: ವ್ಯಾಕ್ಸಿನ್ ಸರಬರಾಜಿನಲ್ಲಿ ವ್ಯತ್ಯಯವಾಗುತ್ತಿದೆ, ಲಸಿಕೆಗಾಗಿ ಗುಂಪು ಸೇರಿಕೊಂಡು ನಿಲ್ಲಬೇಡಿ: ಬೊಮ್ಮಾಯಿ