ETV Bharat / state

ಸಂಪುಟದಿಂದ ಕೈಬಿಟ್ಟರೂ ಸಂತೋಷ, ಟಿಕೆಟ್ ಕೊಡದಿದ್ದರೂ ಬೇಸರವಿಲ್ಲ: ಸಚಿವ ಸೋಮಣ್ಣ - ಸಂಪುಟ ವಿಸ್ತರಣೆ ಬಗ್ಗೆ ಸಚಿವ ವಿ ಸೋಮಣ್ಣ ಪ್ರತಿಕ್ರಿಯೆ

ನನಗೀಗ 71 ವರ್ಷ. ಎಪ್ಪತ್ತೆರಡು ವರ್ಷಕ್ಕೆ ಚುನಾವಣೆ ಬರುತ್ತದೆ. ಪಕ್ಷ ಏನು ಸೂಚಿಸಿದರೂ ಪಾಲಿಸಲು ಸಿದ್ಧ. ನಾವೆಲ್ಲಾ ಪಾದರಸ ಇದ್ದಂಗೆ. ನಿಂತ ನೀರಲ್ಲ. ಎಷ್ಟೋ ಸಲ ಬೇರೆಯವರು ಆಗಲ್ಲ ಅಂತಾ ಕೈಬಿಟ್ಟ ‌ಕೆಲಸಗಳನ್ನು ಪಕ್ಷ ನನಗೆ ವಹಿಸಿದಾಗ ನಾನು ಹೋಗಿ ಮಾಡಿಕೊಂಡು ಬಂದಿದ್ದೇನೆ ಎಂದು ವಸತಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ವಸತಿ ಸಚಿವ ವಿ. ಸೋಮಣ್ಣ
ವಸತಿ ಸಚಿವ ವಿ. ಸೋಮಣ್ಣ
author img

By

Published : Apr 8, 2022, 8:05 PM IST

ಬೆಂಗಳೂರು: ಹಿರಿಯರ ಮಾರ್ಗದರ್ಶನ ಬೇಕು ಎಂದು ಸಂಪುಟದಿಂದ ಕೈಬಿಟ್ಟು ಸಂಘಟನೆಗೆ ಬಳಸಿಕೊಂಡರೂ ಸಂತೋಷ. ಮುಂದಿನ ಚುನಾವಣೆಯಲ್ಲಿ ವಯೋಮಿತಿ ಆಧಾರದಲ್ಲಿ ಟಿಕೆಟ್ ನೀಡದಿದ್ದರೂ ಬೇಸರವಿಲ್ಲ. ನಾನು ಹ್ಯಾಪಿಯಸ್ಟ್ ಮ್ಯಾನ್. ಗೂಟದ ಕಾರು, ಇನ್ನೋವಾ ಕಾರು ಬೇರೆ ಏನಲ್ಲ. ಪಕ್ಷ ಏನೇ ನಿರ್ಧಾರ ಕೈಗೊಂಡರೂ ಸ್ವಾಗತ ಎಂದು ವಸತಿ ಸಚಿವ ವಿ. ಸೋಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನನಗೀಗ ಎಪ್ಪತ್ತೊಂದು ವರ್ಷ. ಎಪ್ಪತ್ತೆರಡು ವರ್ಷಕ್ಕೆ ಚುನಾವಣೆ ಬರುತ್ತದೆ. ಪಕ್ಷ ಏನೂ ಸೂಚಿಸಿದರೂ ಪಾಲಿಸಲು ಸಿದ್ಧ. ನಾವೆಲ್ಲಾ ಪಾದರಸ ಇದ್ದಂಗೆ. ನಿಂತ ನೀರಲ್ಲ. ಎಷ್ಟೋ ಸಲ ಬೇರೆಯವರು ಆಗಲ್ಲ ಅಂತಾ ಕೈಬಿಟ್ಟ ‌ಕೆಲಸಗಳನ್ನು ಪಕ್ಷ ನನಗೆ ವಹಿಸಿದಾಗ ನಾನು ಹೋಗಿ ಮಾಡಿಕೊಂಡು ಬಂದಿದ್ದೇನೆ. ನನ್ನ ಅನುಭವ ಪಕ್ಷಕ್ಕೆ ಬೇಕೆಂದು ನಿರ್ಧರಿಸಿದರೆ ಎಲ್ಲದಕ್ಕೂ ನಾನು ಬದ್ದನಿದ್ದೇನೆ ಎಂದರು.

ಹಿಂದಿ ಕಲಿಕೆ ಬಗ್ಗೆ ಏನಂದ್ರು?: ಅಮಿತ್ ಶಾ ಹಿಂದಿ ಕಲಿಕೆ ಬಗ್ಗೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ನಾನು ಹಳ್ಳಿಯಲ್ಲಿ ಓದಿದ್ದು. ನಾನು ದೆಹಲಿಗೆ ಹೋದಾಗ ಮಾತಾಡಲು ಎಷ್ಟು ಕಷ್ಟವಾಗುತ್ತದೆ ಅಂತಾ ಗೊತ್ತು. ಬೇರೆ ಭಾಷೆ ಕಲಿಯೋದು ಅವರವರಿಗೆ ಬಿಟ್ಟಿದ್ದು. ಮಾತೃಭಾಷೆ ಕಲಿಕೆ ಕಡ್ಡಾಯ ಇರಲಿ. ಅದಕ್ಕೆ ಅಪಚಾರ ಆಗದಂತೆ ನೋಡಿಕೊಳ್ಳಬೇಕು. ಆದರೆ, ಇತರೆ ಭಾಷೆ ಕಲಿಕೆಯಿಂದ ಎಷ್ಟು ಉಪಯೋಗವಾಗಲಿದೆ ಅನ್ನೋದನ್ನು ಗಮನಿಸಬೇಕು. ಕಲಿಕೆಯಲ್ಲಿ ವಿಶಾಲ ಮನೋಭಾವ ಇರಬೇಕು. ಅದನ್ನು ನಿರ್ಣಯ ಮಾಡಲು ನಿಮಗೆ ಬಿಡುತ್ತೇನೆ ಎಂದು ಪರೋಕ್ಷವಾಗಿ ಅಮಿತ್ ಶಾ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ವಸತಿ ಇಲಾಖೆ ಯೋಜನೆ ವಿವರ: ಪ್ರಧಾನಿ ಮೋದಿಯವರ ಕನಸಾಗಿರೋ ಎಲ್ಲರಿಗೂ ಸೂರು ಕೊಡುವ ಪ್ರಧಾನಮಂತ್ರಿ ಆವಾಜ್ ಯೋಜನೆ ತಲುಪಿಸೋ ಕೆಲಸ ಆಗುತ್ತಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಯೋಜನೆ ರೂಪುಗೊಂಡರೂ ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ಕಾರ್ಯರೂಪಕ್ಕೆ ತರಲಾಗಿದೆ. 2015ರಲ್ಲಿ ಪ್ರಾರಂಭ ಆದರೂ, 2019ರಲ್ಲಿ ಯೋಜನೆ ಜಾರಿಗೆ ಬಂದಿದೆ. ನಗರ ಪ್ರದೇಶದಲ್ಲಿ 8.6ಲಕ್ಷ ಮನೆಗಳನ್ನ ನೀಡಲಾಗಿದೆ. ಅವರು ಒಂದೂವರೆ ಲಕ್ಷ ಕೊಡುವುದರ ಜೊತೆಯಲ್ಲಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಪಾಲು ಹಾಕಿ ಮನೆ ನೀಡಲಾಗುತ್ತಿದೆ ಎಂದರು.

ಇದನ್ನೂ ಓದಿ: 'ಬೊಮ್ಮಾಯಿ ಒಳ್ಳೆಯ ಕೆಲಸ ಮಾಡ್ತಿದ್ದಾರೆ, ಸಿಎಂ ಸ್ಥಾನದಿಂದ ಬದಲಾವಣೆ ಇಲ್ಲ'

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.