ETV Bharat / state

ಬಿಎಸ್​ವೈ ನಮ್ಮ ಪ್ರಶ್ನಾತೀತ ನಾಯಕ, ಗೊಂದಲ ಪರಿಹಾರವಾಗಿದೆ: ಸಚಿವ ಸೋಮಣ್ಣ - Etv Bharat Kannada

ನಾನು ಜೆಹೆಚ್ ಪಟೇಲ್, ದೇವೇಗೌಡ, ರಾಮಕೃಷ್ಣ ಹೆಗಡೆ ಗರಡಿಯಲ್ಲಿ ಪಳಗಿದವನು. ನಮ್ಮದೇ ಆದ ರಾಜಕೀಯ ಅನುಭವ ಇದೆ ಎಂದು ಸಚಿವ ವಿ. ಸೋಮಣ್ಣ ಹೇಳಿದರು.

ಸಚಿವ ಸೋಮಣ್ಣ
ಸಚಿವ ಸೋಮಣ್ಣ
author img

By

Published : Mar 16, 2023, 1:24 PM IST

ಬೆಂಗಳೂರು: ಯಡಿಯೂರಪ್ಪ ನಮಗೆಲ್ಲ ಪ್ರಶ್ನಾತೀತ ನಾಯಕರು, ನಮ್ಮಲ್ಲಿನ ಗೊಂದಲವನ್ನು ಪಕ್ಷದ ವರಿಷ್ಠರು ನಿವಾರಿಸಿದ್ದಾರೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆ ಬಗ್ಗೆ ನಾನು ಏನನ್ನೂ ಹೇಳಲ್ಲ. ಆದರೆ ಅವರಿನ್ನು ಯುವಕ, ಬೆಳೆಯಬೇಕಾದವರು. ಅವರು ಕಂಡ ಕನಸ್ಸಿನತ್ತ ಗಮನ ಹರಿಸಿದರೆ ಒಳ್ಳೆಯದು ಎಂದು ಪರೋಕ್ಷವಾಗಿ ವಿಜಯೇಂದ್ರಗೆ ವಸತಿ ಸಚಿವ ವಿ. ಸೋಮಣ್ಣ ಟಾಂಗ್ ನೀಡಿದ್ದಾರೆ.

ಗೋವಿಂದರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮಗೆ ಏನೇನ್​ ಆಗಬೇಕೋ ಅದೆಲ್ಲವೂ ಆಗಿದೆ. ಚುನಾವಣೆ ಇರುವ ಕಾರಣ ಗೊಂದಲ ನಿವಾರಣೆ ಮಾಡಿದ್ದಾರೆ, ಎಲ್ಲವೂ ಸುಖಾಂತ್ಯವಾಗಿದೆ. ವಿಜಯೇಂದ್ರ ಮಾತನಾಡಿರೋದಕ್ಕೂ ನನಗೆ ಸಂಬಂಧ ಇಲ್ಲದೆ ಇರೋದು, ಯಡಿಯೂರಪ್ಪ ಈ ರಾಜ್ಯದ ನಾಯಕರು ಗಣ್ಯರ ಸಾಲಿನಲ್ಲಿ ಅವರು ಕೂಡ ಒಬ್ಬರು, ನಾನು ಕೂಡ ಅವರ ಗರಡಿಯಲ್ಲಿ ಬೆಳೆದಿದ್ದೇನೆ. ನಾನು ಯಡಿಯೂರಪ್ಪ ಜೊತೆ ಕಳೆದ ಸಮಯ ಕಡಿಮೆ, ಸ್ವಲ್ಪ ದಿನ ಅವರ ಗರಡಿಯಲ್ಲಿ ಇದ್ದೆ. ಆದರೆ, ನಾನು ಜೆ ಹೆಚ್ ಪಟೇಲ್, ಹೆಚ್​ ಡಿ ದೇವೇಗೌಡ, ರಾಮಕೃಷ್ಣ ಹೆಗಡೆ ಅವರ ಗರಡಿಯಲ್ಲಿ ಪಳಗಿದವನು ಎಂದು ತಮ್ಮದೇ ಆದ ರಾಜಕೀಯ ಅನುಭವ ಇದೆ ಎನ್ನುವುದನ್ನು ಸೂಚ್ಯವಾಗಿ ತಿಳಿಸಿದರು.

ಸೋಮಣ್ಣಗೆ ಸೋಮಣ್ಣನೇ ಸರಿಸಾಟಿ: ನಾನು ಏನು ಮಾಡಬೇಕೋ ಅದರ ಕಡೆ ಅಷ್ಟೇ ಗಮನ ಕೊಟ್ಟಿದ್ದೇನೆ. ವಿಜಯೇಂದ್ರ ಕೂಡ ಏನು ಮಾಡಬೇಕೋ ಅದರ ಕಡೆ ಗಮನ ಕೊಡಲಿ. ನಾನು ಅವರಿಗೆ ಏನು ಹೇಳೋಕೆ ತಯಾರಿಲ್ಲ, ಯಡಿಯೂರಪ್ಪ ನಿಮಗೆ ಒಬ್ಬರಿಗೆ ನಾಯಕರಲ್ಲ, ನಮಗೂ ನಾಯಕರು, ಅವರು ನನಗೆ ತಂದೆ ಸಮಾನರು. ವಿಜಯೇಂದ್ರ ಅವರು ಬೆಳೆಯೋದಕ್ಕೆ ಅವಕಾಶ ಇದೆ. ಅದರ ಕಡೆ ಅವರು ಗಮನ ಕೊಟ್ಟರೆ ಅವರು ಬೆಳೆಯಬಹುದು, ಯಡಿಯೂರಪ್ಪಗೆ ಸರಿಸಾಟಿ ಯಡಿಯೂರಪ್ಪನವರೇ. ಅದೇ ರೀತಿ ಸೋಮಣ್ಣಗೆ ಸರಿಸಾಟಿ ಸೋಮಣ್ಣನೇ ಎಂದರು.

ಕನಸ್ಸಿನಂತೆ ವಿಜಯೇಂದ್ರ ಹೆಜ್ಜೆ ಹಾಕಲಿ: ಯಡಿಯೂರಪ್ಪ ಬಗ್ಗೆ ನಾವು ಎಲ್ಲಿಯೂ ಒಂದು ಮಾತು ಆಡೋರಲ್ಲ. ನಾನು ಮುಂದೆ ಏನು ಮಾಡಬೇಕೋ‌ ಅದರ ಕಡೆ ಗಮನ ಕೊಡುತ್ತೇನೆ. ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿಯವರು ದೇಶ ಕಂಡಂತಹ ಅಪ್ರತಿಮ ಪ್ರಧಾನಿ, ರಾಜ್ಯದಲ್ಲೂ ಕೂಡ ಯಡಿಯೂರಪ್ಪ ಅದೇ ರೀತಿ. ವಿಜಯೇಂದ್ರ ಯಾರಿಗೆ ಎಚ್ಚರಿಕೆ ಕೊಟ್ಟಿದ್ದಾರೋ ಗೊತ್ತಿಲ್ಲ. ಅವರು ಕೊಟ್ಟಿರುವ ಎಚ್ಚರಿಕೆ ನನ್ನ ತಲೆಯಲ್ಲೂ ಇಲ್ಲ. ಅವರಿಗೆ ನಾನು ಏನು ಹೇಳುವುದಿಲ್ಲ ಯಡಿಯೂರಪ್ಪನವರ ಬಗ್ಗೆ ಮಾತನಾಡುವುದು ಎಂದರೆ ಆಗಸದತ್ತ ಮುಖಮಾಡಿ ಉಗಿದರೆ ಅದು ಉಗಿದವರ ಮುಖದ ಮೇಲೆಯೇ ಬೀಳುವಂತೆ ಎಂಬ ಭಾವನೆ ನನಗೆ ಇದೆ. ಯಡಿಯೂರಪ್ಪ ಮೇಲೆ ನಿಮ್ಮ ಒಬ್ಬರಿಗೆ ಅಲ್ಲ, ಗೌರವ ಇರೋದು ರಾಜ್ಯದ 6.5 ಕೋಟಿ ಜನರಿಂದಲೂ ಗೌರವ ಇದೆ. ಯಡಿಯೂರಪ್ಪ ನಮಗೆಲ್ಲ ಪ್ರಶ್ನಾತೀತ ನಾಯಕರು ಎಂದರು.

ನಾನೊಬ್ಬ ಎಲೆಕ್ಷನ್ ಸ್ಟ್ರಾಟಜಿ ಮಾಸ್ಟರ್: ನಾನು ಒಬ್ಬ ಚುನಾವಣಾ ಸ್ಟ್ರಾಟಜಿ ಮಾಸ್ಟರ್, ಬೈ ಎಲೆಕ್ಸನ್ ನಾನು ಹೇಗೆ ಕೆಲಸ ಮಾಡುತ್ತೇನೆ ಅಂತಾ ಎಲ್ಲ ಪಾರ್ಟಿಯವರಿಗೂ ಗೊತ್ತು. ನಾನು ಯಾವ ಕೆಲಸ ವಹಿಸಿಕೊಳ್ಳುತ್ತೇನೋ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ನಾನು ಒಂದು ಪಾರ್ಟಿಯಲ್ಲಿದ್ದಾಗ ಅಲ್ಲಿ ಮುಜುಗರ ತರುವ ಕೆಲಸ ನಾನು ಮಾಡಿದವನಲ್ಲ. ನಾನು ಮೂರು ಪಾರ್ಟಿ ನೋಡಿದ್ದೇನೆ. ಹೀಗಾಗಿ ಇದಕ್ಕೆಲ್ಲ ತಿಲಾಂಜಲಿ ಹಾಡೋಣ, ಒಳ್ಳೆಯ ಕೆಲಸ ಮಾಡೋಣ, ಯಡಿಯೂರಪ್ಪ ನನ್ನ ನಾಯಕರು ಯಾವಾಗ ಕರೆದರೂ ಅವರ ಭೇಟಿಗೆ ಹೋಗುತ್ತೇನೆ ಎಂದರು.

ಇದನ್ನೂ ಓದಿ: ವಿ.ಸೋಮಣ್ಣರ ಮುನಿಸಿಗೆ ಮುಲಾಮು: ಚಾಮರಾಜನಗರ ಸಾರಥ್ಯ ಕೊಟ್ಟ ಬಿಜೆಪಿ ಹೈಕಮಾಂಡ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.