ETV Bharat / state

ಮಹಾಮಳೆಗೆ ಉತ್ತರ ತತ್ತರ, ಕಷ್ಟ ಆಲಿಸಲು ಉಸ್ತುವಾರಿಗಳು ಬರ್ತಾರಾ?

ಕಳೆದ ಒಂದು ವಾರದಿಂದ ಭಾರಿ ಮಳೆಗೆ ಉತ್ತರ ಕರ್ನಾಟಕ ತತ್ತರಿಸಿದ್ದು, ಊರಿಗೆ ಊರೇ ಮುಳುಗಿದರು ಉಸ್ತುವಾರಿ ಸಚಿವರಗಳು ನಾಪತ್ತೆಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪ್ರವಾಹ ಪೀಡಿತ ಜಿಲ್ಲೆಗಳ ಉಸ್ತುವಾರಿ ಸಚಿವರು ಜನರ ಕಷ್ಟ ಆಲಿಸಲು ಆ ಕಡೆ ಸುಳಿಯಲೇ ಇಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.

uttara-karnataka-heavy-rain-minister-in-charge-not-visit-news
ಮಹಾಮಳೆಗೆ ತತ್ತರಿಸಿದ ಉತ್ತರ ಕರ್ನಾಟಕ, ಕಷ್ಟ ಆಲಿಸದ ಉಸ್ತುವಾರಿ ಸಚಿವರುಗಳು ನಾಪತ್ತೆ ಆರೋಪ...
author img

By

Published : Oct 17, 2020, 7:29 PM IST

Updated : Oct 17, 2020, 9:11 PM IST

ಬೆಂಗಳೂರು: ಪ್ರವಾಹಕ್ಕೆ ಉತ್ತರ ಕರ್ನಾಟಕ ತತ್ತರಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವರುಗಳು ಮಾತ್ರ ನಾಪತ್ತೆಯಾಗಿದ್ದಾರೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬಂದಿದೆ.

uttara-karnataka-heavy-rain-minister-in-charge-not-visit-news
ಮಹಾಮಳೆಗೆ ತತ್ತರಿಸಿದ ಉತ್ತರ ಕರ್ನಾಟಕ, ಕಷ್ಟ ಆಲಿಸದ ಉಸ್ತುವಾರಿ ಸಚಿವರುಗಳು ನಾಪತ್ತೆ ಆರೋಪ...

ಕಳೆದ ಒಂದು ವಾರದಿಂದ ಭಾರಿ ಮಳೆಗೆ ಉತ್ತರ ಕರ್ನಾಟಕ ತತ್ತರಿಸಿದ್ದು, ಊರಿಗೆ ಊರೇ ಮುಳುಗಿದರು ಉಸ್ತುವಾರಿ ಸಚಿವರಗಳು ನಾಪತ್ತೆಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪ್ರವಾಹ ಪೀಡಿತ ಜಿಲ್ಲೆಗಳ ಉಸ್ತುವಾರಿ ಸಚಿವರು ಜನರ ಕಷ್ಟ ಆಲಿಸಲು ಆ ಕಡೆ ಸುಳಿಯಲೇ ಇಲ್ಲ ಎಂಬ ಆಕ್ರೋಶ ವ್ಯಕ್ತವಾಗಿದೆ.

ಯಾವ ಸಚಿವರು ಎಲ್ಲಿದ್ದಾರೆ?:

ಪ್ರಭು ಚೌವಾಣ್ - ಬೀದರ್ ಹಾಗೂ ಯಾದಗರಿ ಜಿಲ್ಲೆ ಉಸ್ತುವಾರಿ. ಅ.14 ರಂದು ಈಶಾನ್ಯ ಪದವೀದರ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ಈಶ್ವರಪ್ಪ ಭೇಟಿ ವೇಳೆ ಕಾಣಿಸಿಕೊಂಡಿದ್ದರು. ವಾರದಿಂದ ಎರಡೂ ಜಿಲ್ಲೆಗಳಲ್ಲಿ ಪ್ರವಾಹ ಎದುರಾಗಿದ್ದರೂ ನಿನ್ನೆಯಿಂದ ಬೀದರ್ ಜಿಲ್ಲೆಯ ಕೆಲ ನೆರೆ ಪ್ರದೇಶಕ್ಕೆ ಭೇಟಿ ನೀಡಿದ್ದು, ಯಾದಗಿರಿ ಜಿಲ್ಲೆಗೆ ಇನ್ನೂ ಭೇಟಿ ಕೊಟ್ಟಿಲ್ಲ.

ಶಶಿಕಲಾ ಜೊಲ್ಲೆ - ವಿಜಯಪುರ ಉಸ್ತುವಾರಿ ಸಚಿವೆ. ಅ.16 ರಂದು ನಿಪ್ಪಾಣಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ನೂತನ ಪದಾಧಿಕಾರಿಗಳ ಪರಿಚಯ ಮತ್ತು ಪದಗ್ರಹಣ ಸಮಾರಂಭ ಸಭೆಯಲ್ಲಿ ಭಾಗಿಯಾಗಿದ್ದರು. ಇನ್ನೂ ನೆರೆ ಪೀಡಿತ ಜಿಲ್ಲೆಗೆ ಭೇಟಿ ‌ನೀಡಿಲ್ಲ.

ರಮೇಶ್ ಜಾರಕಿಹೊಳಿ - ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ. ಗೋಕಾಕ್‌ನ ಮನೆಯಲ್ಲೇ ವಾಸವಾಗಿದ್ದು, ಇಂದು ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.

ಲಕ್ಷ್ಮಣ್ ಸವದಿ- ರಾಯಚೂರು ಉಸ್ತುವಾರಿ ಸಚಿವ. ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆ ಅಥಣಿಯಲ್ಲೇ ಇದ್ದಾರೆ.

ಬಿಸಿ ಪಾಟೀಲ್- ಕೃಷಿ ಸಚಿವ, ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ. ಅ.16 ರಂದು ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದರು. ಇಂದು ಮೈಸೂರಿನಲ್ಲಿ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಗೋವಿಂದ ಕಾರಜೋಳ- ಬಾಗಲಕೋಟೆ ಮತ್ತು ಕಲಬುರ್ಗಿ ಉಸ್ತುವಾರಿ. ಕೊರೊನಾ ಹಿನ್ನೆಲೆ ಪ್ರವಾಹ ಪೀಡಿತ ಜಿಲ್ಲೆಗೆ ಭೇಟಿ ನೀಡಿಲ್ಲ. ಶಿರಾ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡರ ನಾಮಪತ್ರ ಸಲ್ಲಿಕೆ ವೇಳೆ ಭಾಗಿಯಾಗಿದ್ದರು. ಸದ್ಯ ಬೆಂಗಳೂರಿನಲ್ಲೇ ಇದ್ದಾರೆ.

Last Updated : Oct 17, 2020, 9:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.