ETV Bharat / state

ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಸಭಾಧ್ಯಕ್ಷ ಖಾದರ್‌-ಸೋನಿಯಾ ಗಾಂಧಿ ಭೇಟಿ ವಿಚಾರ - ಬೆಂಗಳೂರಿನಲ್ಲಿ ವಿಪಕ್ಷಗಳ ಸಭೆ

ಸಭಾಧ್ಯಕ್ಷ ಯು.ಟಿ.ಖಾದರ್‌ ಅವರು ಸೋನಿಯಾ ಗಾಂಧಿಯನ್ನು ಭೇಟಿಯಾದ ವಿಚಾರ ಇಂದು ವಿಧಾನಸಭೆ ಕಲಾಪದಲ್ಲಿ ಚರ್ಚೆಗೆ ಬಂತು.

assembly
ವಿಧಾನಸಭೆ
author img

By

Published : Jul 18, 2023, 1:30 PM IST

ವಿಧಾನಸಭೆ ಕಲಾಪ

ಬೆಂಗಳೂರು: ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ವಿಷಯ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಇಂದು ಸದನ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ ವಿಷಯ ಪ್ರಸ್ತಾಪಿಸಿ, "ಪಕ್ಷಕ್ಕೆ ಸೀಮಿತರಲ್ಲದ ನೀವು ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲು ಹೋಗಿದ್ದು ನಿಜವೇ? ಅಥವಾ ಇದು ಮಾಧ್ಯಮಗಳ ಸೃಷ್ಟಿಯೇ?, ನೀವೇ ಸ್ಪಷ್ಟನೆ ನೀಡಿ" ಎಂದು ಕೇಳಿದರು.

ಇದಕ್ಕೆ ಉತ್ತರಿಸಿದ ಸಭಾಧ್ಯಕ್ಷರು, "ಮುಖ್ಯಮಂತ್ರಿಗಳು ಔತಣಕೂಟಕ್ಕೆ ಕರೆದಿದ್ದರು. ಅದಕ್ಕೆ ಹೋಗಿದ್ದೆ. ಔತಣಕೂಟಕ್ಕೆ ಹೋಗುವುದು ತಪ್ಪಲ್ಲವಲ್ಲ. ನಾಳೆ ನೀವು (ವಿಪಕ್ಷ) ಕರೆದರೂ ಔತಣಕೂಟಕ್ಕೆ ಬರುವೆ. ಸಭಾಧ್ಯಕ್ಷರಾಗಿದ್ದರೂ ಮನುಷ್ಯನೇ ಅಲ್ಲವೇ?" ಎಂದರು.

ಇದಕ್ಕೂ ಮುನ್ನ ಬಿಜೆಪಿಯ ಶಾಸಕ ಸುರೇಶ್ ಕುಮಾರ್ ಮಾತನಾಡಿ, "ಆಡಳಿತ ಪಕ್ಷದ ಮೊದಲ ಸಾಲಿನಲ್ಲಿ 9 ಸಚಿವರು ಇಲ್ಲ. ಎಲ್ಲರೂ ತಾರಾ ಹೋಟೆಲ್‍ನಲ್ಲಿ ಇದ್ದಂತೆ ಕಾಣುತ್ತದೆ. ಈ ಹಿನ್ನೆಲೆಯಲ್ಲಿ ಒಂದು ದಿನದ ಮಟ್ಟಿಗಾದರೂ ಅಧಿವೇಶನವನ್ನು ತಾರಾ ಹೋಟೆಲ್​ಗೆ ಸ್ಥಳಾಂತರಿಸಿ ಬಿಡಿ" ಎಂದು ಹೇಳುವ ಮೂಲಕ ಸದನದಲ್ಲಿ ನಗೆಯುಕ್ಕಿಸಿದರು. ಇದಕ್ಕೆ ಮಧ್ಯಪ್ರವೇಶಿಸಿದ ಸಭಾಧ್ಯಕ್ಷರು, ನೀವು ಸಲಹೆ ಕೊಟ್ಟಿದ್ದೀರಿ. ಆದರೆ, ನಿಯಮಾವಳಿಯಲ್ಲಿ ಅವಕಾಶವಿಲ್ಲ ಎಂದು ಅಷ್ಟೇ ತೀಕ್ಷ್ಣವಾಗಿ ಉತ್ತರಿಸಿದರು.

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, "ಮೊದಲ ಸಾಲಿನ ಪ್ರಮುಖ ಖಾತೆಗಳನ್ನು ನಿರ್ವಹಿಸುವ ಒಂಬತ್ತು ಸಚಿವರು ಗೈರು ಹಾಜರಾಗಿದ್ದಾರೆ. ಸದನದ ಕಾರ್ಯಕಲಾಪಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ" ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‍ ಗುಂಡೂರಾವ್‍, "ನಾನು ಸೇರಿದಂತೆ ಮೂವರು ಸಚಿವರು ಸದನದಲ್ಲಿ ಇದ್ದೇವೆ. ನೀವು ಹೇಳುವ ವಿಚಾರವನ್ನು ನಾವು ದಾಖಲಿಸಿಕೊಂಡು ಸಂಬಂಧಪಟ್ಟ ಸಚಿವರ ಗಮನಕ್ಕೆ ತರುತ್ತೇವೆ" ಎಂದು ಸಮಜಾಯಿಷಿ ನೀಡಿದರು.

ತಾರಾ ಹೋಟೆಲಿನಲ್ಲಿ ನಡೆಯುತ್ತಿರುವ ಮಹಾಘಟಬಂಧನ್ ಸಭೆಗೆ ಮುಖ್ಯಮಂತ್ರಿ ಸೇರಿದಂತೆ ಪ್ರಮುಖರೆಲ್ಲ ಹೋಗಿದ್ದರಿಂದ ಸದನದಲ್ಲಿ ಪ್ರಮುಖ ಸಚಿವರು ಇರಲಿಲ್ಲ. ಸುರೇಶ್ ಕುಮಾರ್ ಟೀಕೆಗೆ ಇದು ಕಾರಣವಾಗಿತ್ತು.

ಇದನ್ನು ಓದಿ: ಸದನಕ್ಕೆ ಸಕಾಲಕ್ಕೆ ಸಚಿವರು ಆಗಮಿಸಬೇಕು.. ಸಭಾಧ್ಯಕ್ಷ ಯು ಟಿ ಖಾದರ್ ಸೂಚನೆ

ಬೆಂಗಳೂರಿನಲ್ಲಿ ವಿಪಕ್ಷಗಳ ಸಭೆ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸಲು ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳ 2ನೇ ಸಭೆ ಬೆಂಗಳೂರಿನಲ್ಲಿ ನಡೆಯುತ್ತಿದೆ. ಕಾಂಗ್ರೆಸ್​ ಅಧ್ಯಕ್ಷ ಮಲ್ಲಿಕಾರ್ಜುನ್​ ಖರ್ಗೆ, ಕಾಂಗ್ರೆಸ್​ ನಾಯಕಿ ಸೋನಿಯಾ ಗಾಂಧಿ, ಮಾಜಿ ಸಂಸದ ರಾಹುಲ್​ ಗಾಂಧಿ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ನ್ಯಾಷನಲ್​ ಕಾನ್ಫ್​ರೆನ್ಸ್​ ಪಕ್ಷದ ಫಾರೂಖ್ ಅಬ್ದುಲ್ಲಾ, ದೆಹಲಿ ಸಿಎಂ, ಆಪ್​ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ನಾಯಕರು ಬೆಂಗಳೂರಿಗೆ ಆಗಮಿಸಿದ್ದಾರೆ.

ಇದನ್ನೂ ಓದಿ: ವಿಪಕ್ಷಗಳ ಸಭೆ: ಬೆಂಗಳೂರಿಗೆ ಬಂದಿಳಿದ ಸೋನಿಯಾ, ರಾಹುಲ್​, ಅಖಿಲೇಶ್​, ಮಮತಾ ಸೇರಿ ಇನ್ನೂ ಹಲವು ಗಣ್ಯರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.