ETV Bharat / state

ಮಂಗಳೂರು ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರು, ಬಂದರಿಗೆ ಅಬ್ಬಕ್ಕ ಹೆಸರಿಡಿ: ಖಾದರ್ ಒತ್ತಾಯ - MLA UT Khader Speech in Session

ನಾರಾಯಣ ಗುರುಗಳು ಕೇರಳದಿಂದ ಮಂಗಳೂರಿಗೆ ಮೊದಲು ಬಂದಿಳಿದದ್ದು ಈಗಿನ ರೈಲ್ವೆ ನಿಲ್ದಾಣ ಇರುವ ಜಾಗದಲ್ಲಾಗಿದೆ. ಹೀಗಾಗಿ ನಾರಾಯಣ ಗುರುಗಳ ಹೆಸರನ್ನು ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡುವುದು ಸೂಕ್ತ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

UT Khadar Urges to name the Narayana Guru for Mangalore Railway station
ಮಂಗಳೂರು ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರು ಹೆಸಡಿಲು ಆಗ್ರಹ
author img

By

Published : Feb 2, 2021, 5:33 PM IST

ಬೆಂಗಳೂರು: ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಹೆಸರನ್ನು ನಾಮಕರಣ ಮಾಡುವಂತೆ ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ವಿಧಾನಸಭೆಯಲ್ಲಿ ಒತ್ತಾಯಿಸಿದರು.

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಬ್ರಹ್ಮಶ್ರೀ ನಾರಾಯಣ ಗುರುಗಳು ದಕ್ಷಿಣ ಕನ್ನಡಕ್ಕೆ ಮಾತ್ರವಲ್ಲ, ಇಡೀ ನಾಡಿಗೆ ದೊಡ್ಡ ಆಧ್ಯಾತ್ಮಿಕ ಗುರು‌. ನಾರಾಯಣ ಗುರುಗಳು ಕೇರಳದಿಂದ ಮಂಗಳೂರಿಗೆ ಮೊದಲು ಬಂದಿಳಿದದ್ದು ಈಗಿನ ರೈಲ್ವೆ ನಿಲ್ದಾಣ ಇರುವ ಜಾಗದಲ್ಲಾಗಿದೆ. ಹೀಗಾಗಿ ನಾರಾಯಣ ಗುರುಗಳ ಹೆಸರನ್ನು ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡುವುದು ಸೂಕ್ತ ಎಂದರು.

ಓದಿ : ಎಸ್‍ಸಿಪಿ ಹಾಗೂ ಟಿಎಸ್‍ಪಿ ಯೋಜನೆ ಅನುದಾನ ಬಿಡುಗಡೆಗೆ ತಡೆ: ಡಿಸಿಎಂ ಗೋವಿಂದ ಕಾರಜೋಳ

ಅದೇ ರೀತಿ ಮಂಗಳೂರು ವಿಶ್ವವಿದ್ಯಾಲಯಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಮತ್ತು ಮಂಗಳೂರು ಬಂದರಿಗೆ ವೀರರಾಣಿ ಅಬ್ಬಕ್ಕ ಹೆಸರಿಡಬೇಕೆಂದು ಖಾದರ್ ಆಗ್ರಹಿಸಿದರು. ಈ ವಿಷಯವನ್ನು ಸಂಬಂಧಿಸಿದವರ ಗಮನಕ್ಕೆ ತಂದು ಸರ್ಕಾರದ ಮಟ್ಟದಲ್ಲಿ ಪರಿಶೀಲಿಸುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸದನಕ್ಕೆ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.