ಬೆಂಗಳೂರು: ಕೆಆರ್ ಮಾರುಕಟ್ಟೆಯನ್ನು ವಲಸೆ ಕಾರ್ಮಿಕರು, ಹೊರರಾಜ್ಯಕ್ಕೆ ಹೋಗಲು ಸಿದ್ಧವಿರುವವರಿಗೆ ತಾತ್ಕಾಲಿಕ ಕ್ವಾರಂಟೈನ್ ಸೆಂಟರ್ ಆಗಿ ಬಿಬಿಎಂಪಿ ಬಳಸಿಕೊಳ್ತಿದೆ. ಈ ನಡುವೆ ಜೂನ್ 8ಕ್ಕೆ ಕೆ.ಆರ್. ಮಾರುಕಟ್ಟೆ ಆರಂಭದ ಬಗ್ಗೆಯೂ ಮಾತುಕತೆ ನಡೆದಿದೆ.
ರಾಜಸ್ಥಾನ, ಬಿಹಾರ ಸೇರಿದಂತೆ ಹೊರರಾಜ್ಯಕ್ಕೆ ಹೋಗಲು ಸಿದ್ಧ ಇರುವವರಿಗೆ ರೈಲು ಟಿಕೆಟ್ ಸಿಗುವವರೆಗೆ ತಂಗಲು ಇಲ್ಲಿ ಅವಕಾಶ ಮಾಡಿಕೊಡಲಾಗಿದೆ. ಪ್ರಯಾಣಿಕರ ಮಾಹಿತಿ, ಆರೋಗ್ಯ ಪರೀಕ್ಷೆಗೆ ಕೆ.ಆರ್ ಮಾರುಕಟ್ಟೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ.
1,500 ವಲಸೆ ಕಾರ್ಮಿಕರನ್ನು ಇಲ್ಲಿಂದಲೇ ಕಳಿಸಿಕೊಡಲು ಪೊಲೀಸ್ ಇಲಾಖೆ ಹಾಗೂ ಬಿಬಿಎಂಪಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ನಡುವೆಯೂ ನಾಳೆಯಿಂದ ಕೆ. ಆರ್. ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಆರಂಭವಾಗುತ್ತಾ ಎಂಬ ಕುತೂಹಲ ಮೂಡಿದೆ. ಸದ್ಯ ತವರಿಗೆ ತೆರಳುವ ವಲಸೆ ಕಾರ್ಮಿಕರ ಸಂಖ್ಯೆಯೂ ಕಡಿಮೆಯಾಗಿದೆ ಎನ್ನಲಾಗ್ತಿದೆ.