ETV Bharat / state

ಅಮೆರಿಕಾದ ಪೈ ಸ್ಕ್ವೇರ್ ಸಂಸ್ಥೆಯ ಟೆಕ್ ಕಚೇರಿ ಬೆಂಗಳೂರಲ್ಲಿ ಉದ್ಘಾಟನೆ

ಪೈ ಸ್ಕ್ವೇರ್ ಟೆಕ್ನಾಲಜೀಸ್ ತನ್ನ ಆಟೋಮೋಟಿವ್ ಟೆಕ್ ಸೆಂಟರ್ ಅನ್ನು ಬೆಂಗಳೂರಿನಲ್ಲಿ ತೆರೆಯುತ್ತಿರುವುದಕ್ಕೆ ಸಂತೋಷವಾಗಿದೆ. ಕಾರುಗಳು ಹೆಚ್ಚು ಸಾಫ್ಟ್‌ವೇರ್ ಚಾಲಿತವಾಗುವುದರ ಜತೆ, ಮುಂದಿನ ವರ್ಷಗಳಲ್ಲಿ ಜಾಗತಿಕ ವಾಹನ ಉದ್ಯಮದಲ್ಲಿ ಭಾರತದ ಸಿಲಿಕಾನ್ ವ್ಯಾಲಿ ಪ್ರಮುಖ ಪಾತ್ರ ವಹಿಸಲಿದೆ - ಸಚಿವ ಡಾ.ಸಿ.ಎನ್ ಅಶ್ವತ್ಥ ನಾರಾಯಣ.

Pi Square opens India tech centre in Bengaluru
ಪೈ ಸ್ಕ್ವೇರ್ ಟೆಕ್ನಾಲಜೀಸ್​​ನ ಬೆಂಗಳೂರು ಕಚೇರಿ ಉದ್ಘಾಟನೆ
author img

By

Published : Oct 16, 2022, 11:07 AM IST

ಬೆಂಗಳೂರು: ಅಮೆರಿಕಾದ ಡೆಟ್ರಾಯಿಟ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಆಟೋಮೋಟಿವ್ ಟೆಕ್ನಾಲಜೀಸ್ ಸಂಸ್ಥೆಯಾದ ಪೈ ಸ್ಕ್ವೇರ್ ಟೆಕ್ನಾಲಜೀಸ್​​ನ ಇಂಡಿಯಾ ಟೆಕ್ ಸೆಂಟರ್ ಅನ್ನು ಬೆಂಗಳೂರಲ್ಲಿ ಐಟಿ ಬಿಟಿ ಸಚಿವ ಡಾ.ಸಿ.ಎನ್ ಅಶ್ವತ್ಥ ನಾರಾಯಣ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಸಚಿವರು, ಬೆಂಗಳೂರು ಉತ್ತರದ ಕಾರ್ಲೆ ಟೌನ್ ಸೆಂಟರ್ ಎಸ್ಸಿಜಡ್​​ನಲ್ಲಿ ಈ ಟೆಕ್ ಸೆಂಟರ್ ತನ್ನ ಕಚೇರಿಯನ್ನು ಹೊಂದಿದೆ. ಪೈ ಸ್ಕ್ವೇರ್ ಟೆಕ್ನಾಲಜೀಸ್‌ನ ಇಂಡಿಯಾ ಟೆಕ್ ಸೆಂಟರ್, ಫಾರ್ಚೂನ್ 500 ಕಂಪನಿಗಳು ಸೇರಿದಂತೆ ಜಾಗತಿಕವಾಗಿ ಆಟೋಮೋಟಿವ್ ಮತ್ತು ಒಇಎಂ ಪರಿಣತರ ಹಾಗೂ ನವೀನ ಉತ್ಪನ್ನ ಅಭಿವೃದ್ಧಿ ಮತ್ತು ಎಂಬೆಡೆಡ್ ಎಂಜಿನಿಯರಿಂಗ್ ಸೇವೆಗಳತ್ತ ಗಮನ ನೀಡುತ್ತಿರುವುದು ಹರ್ಷದಾಯಕ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಂಗಳೂರು, ಇನ್-ವೆಹಿಕಲ್ ಇನ್ಫೋಟೈನ್‌ಮೆಂಟ್, ಕನೆಕ್ಟೆಡ್ ವೆಹಿಕಲ್ಸ್, ಅಡ್ವಾನ್ಸ್ಡ್ ಡ್ರೈವರ್-ಅಸಿಸ್ಟೆನ್ಸ್ ಸಿಸ್ಟ್ಂ (ADAS) ಆಟೋನೋಮಸ್‌ ಡ್ರೈವಿಂಗ್, ಬ್ಯಾಟರಿ ಮ್ಯಾನೇಜ್‌ಮೆಂಟ್ ಸಿಸ್ಟಮ್ಸ್, ಸಾಫ್ಟ್‌ವೇರ್-ಓವರ್-ದಿ-ಏರ್ (SOTA) ಅಪ್‌ಡೇಟ್, ಸೈಬರ್ ಸೆಕ್ಯುರಿಟಿ, ಇತರ ಕ್ರಿಯಾತ್ಮಕ ಸುರಕ್ಷತಾ ವಲಯಗಳಂತಹ ಆಟೋಮೋಟಿವ್ ತಂತ್ರಜ್ಞಾನಗಳ ಬೆಳವಣಿಗೆಯ ಕ್ಷೇತ್ರವಾಗಿದೆ ಎಂದು ಅವರು ಹೇಳಿದರು.

Pi Square opens India tech centre in Bengaluru
ಪೈ ಸ್ಕ್ವೇರ್ ಟೆಕ್ನಾಲಜೀಸ್​​ನ ಬೆಂಗಳೂರು ಕಚೇರಿ ಉದ್ಘಾಟನೆ

ವಿವಿಧ ತಂತ್ರಜ್ಞಾನಗಳಿಗೆ ಸಂಬಂಧಪಟ್ಟಂತೆ 400ಕ್ಕೂ ಹೆಚ್ಚು ಕೇಂದ್ರಗಳು ಬೆಂಗಳೂರಿನಲ್ಲಿವೆ. ಪೈ ಸ್ಕ್ವೇರ್ ಟೆಕ್ನಾಲಜೀಸ್ ತನ್ನ ಆಟೋಮೋಟಿವ್ ಟೆಕ್ ಸೆಂಟರ್ ಅನ್ನು ಬೆಂಗಳೂರಿನಲ್ಲಿ ತೆರೆಯುತ್ತಿರುವುದಕ್ಕೆ ಸಂತೋಷವಾಗಿದೆ. ಕಾರುಗಳು ಹೆಚ್ಚು ಸಾಫ್ಟ್‌ವೇರ್ ಚಾಲಿತವಾಗುವುದರ ಜತೆ, ಮುಂದಿನ ವರ್ಷಗಳಲ್ಲಿ ಜಾಗತಿಕ ವಾಹನ ಉದ್ಯಮದಲ್ಲಿ ಭಾರತದ ಸಿಲಿಕಾನ್ ವ್ಯಾಲಿ ಪ್ರಮುಖ ಪಾತ್ರ ವಹಿಸಲಿದೆ ಎಂದು ಸಚಿವರು ಹೇಳಿದರು.

"ಅತ್ಯಾಧುನಿಕ ಆಟೋಮೇಟಿವ್ ಪ್ರಯೋಗಾಲಯ ಹಾಗೂ ಆಟೋಮೋಟಿವ್ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರಗಳ ಸೌಲಭ್ಯಗಳನ್ನು ಬೆಂಗಳೂರಿನಲ್ಲಿ ಕಲ್ಪಿಸಲಾಗುತ್ತಿದೆ. ಆರಂಭದಲ್ಲಿ, 120ಕ್ಕೂ ಹೆಚ್ಚು ಇಂಜಿನಿಯರ್‌ಗಳು ಟೆಕ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಾರೆ ಮತ್ತು ಮುಂದಿನ ಎರಡು ವರ್ಷಗಳಲ್ಲಿ ಸಂಖ್ಯೆಗಳನ್ನು 1,000 ಕ್ಕೆ ಹೆಚ್ಚಿಸಲಾಗುತ್ತದೆ" ಎಂದು ಪೈ ಸ್ಕ್ವೇರ್ ಇಂಡಿಯಾ ಸಿಇಒ ಶ್ರೀನಿವಾಸ್ ರಾಜು ಹೇಳಿದರು.

"ಬೆಂಗಳೂರಿನ ಇಂಡಿಯಾ ಟೆಕ್ ಸೆಂಟರ್ ನಮ್ಮ ಬೆಳವಣಿಗೆಯ ಕಾರ್ಯತಂತ್ರದ ಪ್ರಮುಖ ಭಾಗವಾಗಿದೆ. ಜಗತ್ತಿಗೆ ಹಸಿರು, ಸುರಕ್ಷಿತ, ನವೀನ ಮತ್ತು ಪರಿಣಾಮಕಾರಿ ಚಲನಶೀಲ ಪರಿಹಾರಗಳನ್ನು ಕಲ್ಪಿಸಲು ನಾವು ಜಾಗತಿಕ ಆಟೋಮೋಟಿವ್ ಪ್ರಮುಖರೊಂದಿಗೆ ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುತ್ತಿದ್ದೇವೆ. ಜಾಗತಿಕ ಉದ್ಯಮವಾಗಿ, ಭವಿಷ್ಯಾತ್ಮಕ ಆಟೋಮೋಟಿವ್ ತಂತ್ರಜ್ಞಾನಗಳಲ್ಲಿ ನಾವು ಮುಂಚೂಣಿಯಲ್ಲಿರಲು ಬಯಸುತ್ತೇವೆ " ಎಂದು ಪೈ ಸ್ಕ್ವೇರ್ ಗ್ರೂಪ್ ಅಧ್ಯಕ್ಷ ಶರತ್ ಕೊತಪಲ್ಲಿ ಹೇಳಿದರು.

ಇದನ್ನೂ ಓದಿ: ಸಿಎಂ ಭೇಟಿ ಮಾಡಿದ ಉದ್ಯಮಿ ಮೋಹನ್ ದಾಸ್ ಪೈ: ಬ್ರಾಂಡ್ ಬೆಂಗಳೂರು ಕುರಿತು ಚರ್ಚೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.