ETV Bharat / state

ಜೂನ್​ 21ರಿಂದ ಅನ್​ಲಾಕ್ 2.0: ಬಸ್​, ಮೆಟ್ರೋ ಒಡಾಟಕ್ಕೆ ಸಿಗುತ್ತಾ ಅವಕಾಶ?

ರಾಜ್ಯದಲ್ಲಿ ಎರಡನೇ ಹಂತದ ಅನ್​ಲಾಕ್ ಜಾರಿಗೊಳಿಸುವ ಬಗ್ಗೆ ಇಂದು ಸರ್ಕಾರ ನಿರ್ಧರಿಸುವ ಸಾಧ್ಯತೆಯಿದೆ. ಅನ್​ಲಾಕ್ 2.0 ಜಾರಿಯಾದರೆ ಜೂನ್​ 21ರಿಂದ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ಗಳು ಮತ್ತು ಬೆಂಗಳೂರು ಮೆಟ್ರೋ ಓಡಾಟಕ್ಕೆ ಷರತ್ತುಬದ್ಧ ಅನುಮತಿ ಸಿಗಬಹುದು.

Unlock 2.0 From 21st in Karnataka
ಎರಡನೇ ಹಂತಹ ಅನ್​ಲಾಕ್
author img

By

Published : Jun 19, 2021, 12:28 PM IST

Updated : Jun 19, 2021, 1:47 PM IST

ಬೆಂಗಳೂರು: ಕೋವಿಡ್ ಪ್ರಕರಣಗಳು ಇನ್ನಷ್ಟು ಕಡಿಮೆಯಾದ ಹಿನ್ನೆಲೆ ಸೋಮವಾರದಿಂದ ಎರಡನೇ ಹಂತದ ಅನ್​ಲಾಕ್​ (Unlock 2.0) ಮಾಡಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಇಂದು ಸಂಜೆ 5.30 ಕ್ಕೆ ಸಿಎಂ ನಿವಾಸ ಕಾವೇರಿಯಲ್ಲಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಯಲಿದೆ‌.

ಜೂನ್ 21 ರಿಂದ ಅನ್​ಲಾಕ್ 2.O ಜಾರಿಗೆ ತಾಂತ್ರಿಕ ಸಲಹಾ ಸಮಿತಿ ಅನುಮತಿ ನೀಡಿದೆ. ಎರಡನೇ ಹಂತದ ಅನ್​​ಲಾಕ್​ ಜಾರಿಯಾದರೆ ಮಾಲ್, ಹೋಟೆಲ್, ಚಿಕ್ಕ‌ ಮಾರುಕಟ್ಟೆ, ಸಲೂನ್, ಮದುವೆ ಸಮಾರಂಭಗಳಿಗೆ 50 ಜನ ಪಾಲ್ಗೊಳ್ಳಲು ಅವಕಾಶ ನೀಡುವ ಸಾಧ್ಯತೆ ಇದೆ.

ವಾಣಿಜ್ಯ ಮಳಿಗೆಗಳು ಓಪನ್:

ಬಟ್ಟೆ ಅಂಗಡಿ, ಚಿನ್ನದಂಗಡಿ ಸೇರಿದಂತೆ ಎಲ್ಲಾ ಬಗೆಯ ವಾಣಿಜ್ಯ ಮಳಿಗೆಗಳು ಕೂಡ ಜೂನ್ 21 ರಿಂದ ಆರಂಭಿಸಲು ಅನುಮತಿ ಸಿಗುವ ನಿರೀಕ್ಷೆ ಇದೆ. ದಿನಕ್ಕೆ 8 ಗಂಟೆಗಳ ಕಾಲ ವ್ಯಾಪಾರ ವಹಿವಾಟು ಮಾಡಲು ಅವಕಾಶ ಸಿಗಲಿದೆ. ಹೋಟೆಲ್ ಮತ್ತು ರೆಸ್ಟೋರೆಂಟ್​ಗಳಲ್ಲಿ ಶೇ.50 ರಷ್ಟು ಗ್ರಾಹಕರಿಗೆ ಅವಕಾಶ ನೀಡುವ ಕುರಿತು ಸಭೆಯಲ್ಲಿ ಚರ್ಚಿಸಲಾಗುತ್ತದೆ ಎನ್ನಲಾಗಿದೆ.

ಸಿನಿಮಾ ಥಿಯೇಟರ್, ಪಬ್, ಬಾರ್, ಜಿಮ್, ಸ್ವಿಮ್ಮಿಂಗ್ ಪೂಲ್, ಕ್ರೀಡಾಂಗಣಗಳಿಗೆ ಅನುಮತಿ ಸಿಗುವುದು ಕಷ್ಟ. ರಾಜ್ಯದಲ್ಲಿ ಮತ್ತಷ್ಟು ಕೊರೊನಾ ಸೋಂಕು ಕಡಿಮೆಯಾದರೆ ಅವುಗಳಿಗೆ ಅನುಮತಿ ನೀಡಬಹುದು ಎಂಬ ಮಾಹಿತಿಯಿದೆ.

ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ಗಳು ಮತ್ತು ಮೆಟ್ರೋ ಸಂಚಾರ ಪುನಾರಂಭವಾಗುವುದು ಬಹುತೇಕ ಖಚಿತವಾಗಿದೆ. ಸಾರಿಗೆ ಸೇವೆಗಳ ಪುನಾರಂಭಕ್ಕೆ ಸರ್ಕಾರ ಷರತ್ತುಬದ್ಧ ಅನುಮತಿ ನೀಡುವ ಸಾಧ್ಯತೆಯಿದೆ.

ಶೇ. 50ರಷ್ಟು ಬಸ್​ಗಳ ಸಂಚಾರ:

ಅನ್​ಲಾಕ್ 2.0 ಜಾರಿಯಾದರೆ ಶೇ. 50ರಷ್ಟು ಬಸ್​, ಮೆಟ್ರೋ ಓಡಾಟಕ್ಕೆ ಅವಕಾಶ ಸಿಗಬಹುದು. ಬೆಂಗಳೂರಿನಲ್ಲಿ 6,400 ಬಿಎಂಟಿಸಿ ಬಸ್​ಗಳ ಪೈಕಿ 1,500ರಿಂದ 2000 ಬಸ್​ಗಳು ರಸ್ತೆಗಿಳಿಯುವ ಸಾಧ್ಯತೆಯಿದೆ. ಸುರಕ್ಷತೆಯ ದೃಷ್ಟಿಯಿಂದ ಓಲ್ವೋ ಬಸ್​ಗಳು ಅನುಮತಿ ನೀಡುವುದರ ಬಗ್ಗೆ ಇನ್ನೂ ಯಾವುದೇ ಖಚಿತ ಮಾಹಿತಿ ತಿಳಿದು ಬಂದಿಲ್ಲ.

ಎರಡೂ ಡೋಸ್ ಲಸಿಕೆ ಪಡೆಯುವುದು ಕಡ್ಡಾಯ:

ಬಿಎಂಟಿಸಿ ಚಾಲಕರು ಮತ್ತು ನಿರ್ವಾಹಕರು ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳಬೇಕಿದೆ. ಎರಡೂ ಡೋಸ್​ಗಳನ್ನು ಪಡೆದ ಚಾಲಕ, ನಿರ್ವಾಹಕರಿಗೆ ಮಾತ್ರ ಕರ್ತವ್ಯಕ್ಕೆ ಕೆಲಸಕ್ಕೆ ಹಾಜರಾಗಲು ಅವಕಾಶ ಸಿಗಲಿದೆ. ಬಸ್​ಗಳಲ್ಲಿ ಪ್ರಯಾಣಿಕರು ನಿಂತುಕೊಂಡು ಪ್ರಯಾಣಿಸಲು ಅವಕಾಶ ಇರುವುದಿಲ್ಲ.

ಸದ್ಯಕ್ಕಿಲ್ಲ ಎಸಿ ಬಸ್​:

ಕೆಎಸ್​ಆರ್​ಟಿಸಿಯಲ್ಲಿ ಒಟ್ಟು 8 ಸಾವಿರ ಬಸ್​ಗಳಿವೆ. ಈ ಪೈಕಿ 2,500ರಿಂದ 3,000 ಬಸ್​ಗಳನ್ನು ರಸ್ತೆಗಿಳಿಸಲು ಸರ್ಕಾರ ಚಿಂತನೆ ನಡೆಸಿದೆ. ಅತಿ ಹೆಚ್ಚು ಸೋಂಕು ಇರುವ ಹೊರ ರಾಜ್ಯಗಳಿಗೆ ಬಸ್​ ಸಂಚಾರ ಇರುವುದಿಲ್ಲ. ಎಸಿ, ಸ್ಲೀಪರ್ ಬಸ್​ಗಳ ಓಡಾಟ ಸದ್ಯಕ್ಕೆ ಇಲ್ಲ ಎನ್ನಲಾಗಿದೆ. ಕೆಎಸ್​ಆರ್​ಟಿಸಿಯಲ್ಲೂ ಶೇ. 50ರಷ್ಟು ಪ್ರಯಾಣಿಕರಿಗೆ ಅವಕಾಶ ಇರಲಿದೆ. ಮೂರು ಸೀಟ್‌ನಲ್ಲಿ ಇಬ್ಬರು ಮತ್ತು ಎರಡು ಸೀಟ್​ನಲ್ಲಿ ಒಬ್ಬ ಪ್ರಯಾಣಿಕ ಕುಳಿತುಕೊಳ್ಳಬಹುದಾಗಿದೆ.

ಸ್ಯಾನಿಟೈಸ್ ಮಾಡುವುದು ಕಡ್ಡಾಯ:

ಡಿಪೋಗಳಿಂದ ಹೊರಗೆ ಬರುವ ಬಸ್‌ಗಳಿಗೆ ಸ್ಯಾನಿಟೈಸ್ ಮಾಡುವುದು ಕಡ್ಡಾಯ ಎಂಬ ಆದೇಶ ಹೊರಡಿಸಲಾಗಿದೆ. ಕೆಎಸ್​ಆರ್​ಟಿಸಿಯ ಚಾಲಕ- ನಿರ್ವಾಹಕರು ಕೂಡ ಎರಡೂ ಡೋಸ್​ ಕೋವಿಡ್ ಲಸಿಕೆ ಪಡೆದಿರಬೇಕು. ಲಸಿಕೆ ಪಡೆದ ಸಿಬ್ಬಂದಿಗೆ ಮೊದಲ ಆದ್ಯತೆ ನೀಡಲಾಗ್ತದೆ.

ಮೆಟ್ರೋ ಸಂಚಾರದ ಬಗ್ಗೆ ಇಂದು ನಿರ್ಧಾರ:

ಮೆಟ್ರೋ ಸಂಚಾರದ ಬಗ್ಗೆ ಇಂದು ಸರ್ಕಾರದ ನಿರ್ಧಾರ ಪ್ರಕಟಿಸುವ ಸಾಧ್ಯತೆಯಿದೆ. ಮೆಟ್ರೋ ಸಂಚಾರಕ್ಕೂ ಷರತ್ತುಬದ್ಧ ಅನುಮತಿ ನೀಡುವ ಸಾಧ್ಯತೆಯಿದೆ. ಬೆಳಗ್ಗೆ 7 ಗಂಟೆಯಿಂದ 11 ಗಂಟೆ ಮತ್ತು ಸಂಜೆ 4 ಗಂಟೆಯಿಂದ 6 ಗಂಟೆಯವರಿಗೆ ಮೆಟ್ರೋ ಓಡಾಟ ಇರಲಿದೆ ಎಂದು ತಿಳಿದು ಬಂದಿದೆ. ಒಂದು ರೈಲಿನಲ್ಲಿ 400 ಜನರ ಸಂಚಾರಕ್ಕೆ ಮಾತ್ರ ಅನುಮತಿ ನೀಡುವ ಸಾಧ್ಯತೆಯಿದೆ.

ಓದಿ : ರಾಜ್ಯದಲ್ಲಿ ಎರಡನೇ ಅನ್​ಲಾಕ್​ಗೆ ಸರ್ಕಾರದ ಸಿದ್ಧತೆ ಏನು?

Last Updated : Jun 19, 2021, 1:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.