ಬೆಂಗಳೂರು : ಕುಡಿದ ಅಮಲಿನಲ್ಲಿ ಅಪರಿಚಿತ ವ್ಯಕ್ತಿವೋರ್ವನನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಕೆ.ಆರ್. ಸರ್ಕಲ್ನ ಮುಖ್ಯ ಇಂಜಿನಿಯರ್ಸ್ ಕಚೇರಿ ಗೇಟ್ ಬಳಿ ನಡೆದಿದೆ.
ಅಪರಿಚಿತ ವ್ಯಕ್ತಿಯ ಎದೆ ಹಾಗೂ ಪಕ್ಕೆಲುಬಿನ ಜಾಗಕ್ಕೆ ದುಷ್ಕರ್ಮಿಗಳು ಡ್ರ್ಯಾಗರ್ನಿಂದ ಇರಿದು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ತಡರಾತ್ರಿ ಬಾರ್ನಲ್ಲಿ ಕುಡಿದು ಕಿರಿಕ್ ಮಾಡ್ಕೊಂಡು ಗೇಟ್ ಬಳಿಯೇ ಡ್ರ್ಯಾಗರ್ನಿಂದ ವ್ಯಕ್ತಿಗೆ ಇರಿದು ಹಂತಕರು ಎಸ್ಕೇಪ್ ಆಗಿದ್ದಾರೆ. ತೀವ್ರ ರಕ್ತಸ್ರಾವವಾಗಿದ್ದ ವ್ಯಕ್ತಿ ಗೇಟ್ ಬಳಿಯೇ ಸಾವನ್ನಪ್ಪಿದ್ದಾನೆ.
ಈ ವ್ಯಕ್ತಿಯ ಮೃತದೇಹವನ್ನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಮೃತ ವ್ಯಕ್ತಿ ಯಾರು ಮತ್ತು ಕೊಲೆ ಮಾಡಿರುವವರು ಯಾರೆಂಬುದು ತನಿಖೆಯಿಂದ ತಿಳಿದುಬರಲಿದೆ.