ETV Bharat / state

ಖಾಸಗಿ ಆಸ್ಪತ್ರೆಗೆ ₹9 ಲಕ್ಷ ಮೌಲ್ಯದ ವೈದ್ಯಕೀಯ ಪರಿಕರಗಳನ್ನು ನೀಡಿದ್ರೂ ಹೆಸರು ಹೇಳದ ಪುಣ್ಯಾತ್ಮ.. - ಗಂಗಾವತಿ ನಗರ

ನಗರದ ಬಸ್ ನಿಲ್ದಾಣದ ರಸ್ತೆಯಲ್ಲಿರುವ ಸಂಜೀವಿನಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಈ ಎಲ್ಲಾ ಪರಿಕರಗಳನ್ನು ನೀಡಲಾಗಿದೆ. ಇವುಗಳನ್ನು ಬಳಸಿಕೊಂಡು ಬಡವರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು..

Medical equipment donation
ವೈದ್ಯಕೀಯ ಪರಿಕರ ದಾನ
author img

By

Published : Jun 1, 2021, 11:07 AM IST

ಗಂಗಾವತಿ : ಬಡವರಿಗೆ ಕೈಗೆಟಕುವ ಬೆಲೆಯಲ್ಲಿ ಚಿಕಿತ್ಸೆ ನೀಡುತ್ತಿರುವ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ಸುಮಾರು 9 ಲಕ್ಷ ರೂಪಾಯಿ ಮೌಲ್ಯದ ಕೋವಿಡ್ ಚಿಕಿತ್ಸಾ ಪರಿಕರಗಳನ್ನು ದಾನಿಯೊಬ್ಬರು ಗುಪ್ತವಾಗಿ ನೀಡಿದ್ದಾರೆ.

ಲಕ್ಷಾಂತರ ಮೌಲ್ಯದ ವೈದ್ಯಕೀಯ ಪರಿಕರಗಳನ್ನು ನೀಡಿದ ದಾನಿ ಯಾರು ಎಂಬುವುದರ ಬಗ್ಗೆ ಆಸ್ಪತ್ರೆ ಕಡೆಯಿಂದ ಮಾಹಿತಿ ಸಿಕ್ಕಿಲ್ಲ. ದಾನಿ ನೀಡಿದ ಮೆಡಿಕಲ್ ಕಿಟ್ ಐದು ಜಂಬೋ ಆಕ್ಸಿಜನ್ ಸಿಲಿಂಡರ್, ಐದು ಆಕ್ಸಿಜನ್ ಸಾಂಧ್ರಕಗಳು, 30 ಫಲ್ಸ್ ಆಕ್ಸಿಮೀಟರ್, ಫೇಸ್ ಮಾಸ್ಕ್ , ಪಿಪಿಇ ಕಿಟ್ ಸೇರಿದಂತೆ ನಾನಾ ವಸ್ತುಗಳನ್ನು ಒಳಗೊಂಡಿವೆ.

ಲಕ್ಷಾಂತರ ಮೌಲ್ಯದ ವೈದ್ಯಕೀಯ ಪರಿಕರ ದಾನ ನೀಡಿದ ವ್ಯಕ್ತಿ..

ನಗರದ ಬಸ್ ನಿಲ್ದಾಣದ ರಸ್ತೆಯಲ್ಲಿರುವ ಸಂಜೀವಿನಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಈ ಎಲ್ಲಾ ಪರಿಕರಗಳನ್ನು ನೀಡಲಾಗಿದೆ. ಇವುಗಳನ್ನು ಬಳಸಿಕೊಂಡು ಬಡವರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಓದಿ : ನೋಂದಾಯಿಸಲ್ಪಟ್ಟ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಉಚಿತ ಚಿಕಿತ್ಸೆ: ಡಿಸಿಎಂ ಕಾರಜೋಳ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.