ETV Bharat / state

ಎದೆಗಾರಿಕೆ ಇದ್ದರೆ ವಿಶೇಷ ಅಧಿವೇಶನ‌ ಕರೆದು ಒಳ ಮೀಸಲಾತಿ ಜಾರಿ ಮಾಡಿ: ಕೇಂದ್ರ ಸಚಿವ ನಾರಾಯಣಸ್ವಾಮಿ ಸವಾಲು

ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಅಧಿವೇಶನ‌ ಕರೆದು ಒಳ ಮೀಸಲಾತಿ ಜಾರಿ ಮಾಡಲಿ ಎಂದು ಕೇಂದ್ರ ಸಚಿವ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.

union minister narayanaswamy
ಕೇಂದ್ರ ಸಚಿವ ನಾರಾಯಣಸ್ವಾಮಿ ಸವಾಲು
author img

By

Published : Jul 29, 2023, 2:27 PM IST

ಬೆಂಗಳೂರು : ನಿಮಗೆ ನಿಜವಾಗಿಯೂ ಬದ್ಧತೆ ಹಾಗೂ ಎದೆಗಾರಿಕೆ ಇದ್ದರೆ ವಿಶೇಷ ಅಧಿವೇಶನ ಕರೆದು ಒಳ ಮೀಸಲಾತಿ ನಿರ್ಣಯ ಮಾಡಿ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ.

ಬಿಜೆಪಿ ಕಚೇರಿಯಲ್ಲಿಂದು ಮಾಜಿ ಸಚಿವ ಗೋವಿಂದ ಕಾರಜೋಳ, ಪರಿಷತ್ ಸದಸ್ಯ ಛಲವಾದಿ ನಾರಯಣಸ್ವಾಮಿ ಹಾಗೂ ಮಾಜಿ ಸಚಿವ ಹಾಲಪ್ಪ ಆಚಾರ್ ಜೊತೆಗೂಡಿ ಜಂಟಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, "ಸಿದ್ದರಾಮಯ್ಯನವರು ಚುನಾವಣಾ ಪೂರ್ವದ ಸಭೆಯಲ್ಲಿ ನಾವು ಒಳ ಮೀಸಲಾತಿಯನ್ನ ಮಾಡಿಯೇ ತೀರುತ್ತೇವೆ ಎಂದಿದ್ರು. ನಂತರ ಒಳ ಮೀಸಲಾತಿ ಮಾಡಲ್ಲ, ಹಿಂದೆಯೂ ಮಾಡಿಲ್ಲ ಅಂದಿದ್ದಾರೆ. ಬೇಗ ಕಾಂತರಾಜ್ ಆಯೋಗದ ವರದಿ ಜಾರಿ ಮಾಡಿ ಒಳ ಮೀಸಲಾತಿ ನಿರ್ಣಯ ಮಾಡಿ ಎಂದು ಟೀಕಿಸಿದರು.

ಸಂಸತ್​ನಲ್ಲಿ ಚರ್ಚೆ ಆಗುವಾಗ ಒಬ್ಬ ಮಂತ್ರಿಯಾಗಿ ಏನು ಉತ್ತರ ಕೊಡಬೇಕೋ ಅದನ್ನು ಅಲ್ಲಿ ಕೊಟ್ಟಿದ್ದೇನೆ. ನರಸಿಂಹರಾಜು ಎಂಬ ಲೋಕಸಭೆ ಸದಸ್ಯರು ಒಳ ಮೀಸಲಾತಿ ಬಗ್ಗೆ ಪ್ರಶ್ನೆ ಕೇಳಿದ್ರು. ಅದಕ್ಕೆ ಸಂವಿಧಾನ ಏನು ಹೇಳುತ್ತದೆ ಎಂಬುದಕ್ಕೆ ನಾನು ಉತ್ತರ ಕೊಟ್ಟಿದ್ದೇನೆ. ಸಂವಿಧಾನವನ್ನು ತಿರುಚಿ ಹೇಳುವ ಹಾಗಿಲ್ಲ. ಈವಾಗಿನ 341 ಆರ್ಟಿಕಲ್ ಏನು ಹೇಳುತ್ತೆ ಎಂದು ಆ ಸದಸ್ಯರಿಗೆ ಉತ್ತರ ಕೊಟ್ಟಿದ್ದೇನೆ. ಬೊಮ್ಮಾಯಿ ಅವರು ಸಿಎಂ ಆಗಿದ್ದಾಗ ಸದಾಶಿವ ಆಯೋಗದ ವರದಿ ಅಧ್ಯಯನ ಮಾಡಿ, ಆ ವರದಿ ಆಧಾರದ ಮೇಲೆ ಒಳ ಮೀಸಲಾತಿ ಮಾಡಬೇಕಿದೆ ಎಂದಿದ್ದರು. ಅದರಂತೆ ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ. ಈ ದಿಕ್ಕಿನಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದೇವೆ ಎಂದು ವಿವರಿಸಿದರು.

ಸಿದ್ದರಾಮಯ್ಯ ಬಿಜೆಪಿಯ ಬೂಟಾಟಿಕೆ ಬಯಲಾಗಿದೆ ಎಂದಿದ್ದಾರೆ. ಸಿದ್ದರಾಮಯ್ಯನವರು ಸ್ವಯಂ ಘೋಷಿತ ಹಿಂದುಳಿದ ವರ್ಗಗಳ ನಾಯಕರು ಹಾಗೂ ವಕೀಲರು. ಒಳ ಮೀಸಲಾತಿಗೆ ಸರ್ಕಾರ ಬದ್ಧವಿದೆ ಎಂದು ದೇಶದ ಗೃಹ ಸಚಿವರೇ ಹೇಳಿದ್ದಾರೆ. ಒಳ ಮೀಸಲಾತಿಯನ್ನು ರಾಜ್ಯ ಬಿಜೆಪಿ ಸರ್ಕಾರ ಒಪ್ಪಿಕೊಂಡಿತ್ತು. ಮಾಧುಸ್ವಾಮಿ ಸಮಿತಿ ಕೊಟ್ಟ ವರದಿ ಮೇಲೆ ಒಳ ಮೀಸಲಾತಿ ನೀಡಿದ್ದೇವೆ. ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಮೀಸಲಾತಿ ಪರಿಷ್ಕರಣೆ ಆಗಬೇಕಿದೆ. ನಿಜವಾಗಿಯೂ ಶೋಷಿತರಿಗೆ ಮೀಸಲಾತಿ ಸಿಕ್ಕಿಲ್ಲ. ಇಷ್ಟು ಹೇಳಿ ವಿಸ್ತೃತ ಪೀಠಕ್ಕೆ ಅರ್ಜಿ ವರ್ಗಾಯಿಸಿತ್ತು. ನನ್ನ ಉತ್ತರದಲ್ಲಿ ಇದನ್ನು ಪ್ರಸ್ತಾಪ ಮಾಡಿದ್ದೇನೆ. ಇದು ಗೊತ್ತಿಲ್ಲದೇ ಸಿದ್ದರಾಮಯ್ಯ ನಮ್ಮ ಬದ್ಧತೆ ಬಗ್ಗೆ ಪ್ರಶ್ನೆ ಮಾಡ್ತಿದ್ದಾರೆ ಎಂದು ಟೀಕಿಸಿದರು.

ಚುನಾವಣೆ ಪ್ರಚಾರದಲ್ಲಿ ಸಿದ್ದರಾಮಯ್ಯ ಒಳ ಮೀಸಲಾತಿಗೆ ಬದ್ಧ ಎಂದು ಹೇಳಿ, ವೇದಿಕೆಯಿಂದ ಇಳಿದ ತಕ್ಷಣ ಯಾವುದೇ ಒಳ ಮೀಸಲಾತಿ ಜಾರಿ ಮಾಡಲ್ಲ ಅಂದ್ರು. ಈಗ ಕಾಂಗ್ರೆಸ್​ ಸರ್ಕಾರ ಬಂದಿದೆ, ಒಳ ಮೀಸಲಾತಿ ಬಗ್ಗೆ ಚಕಾರ ಎತ್ತುತ್ತಿಲ್ಲ. ಕಾಂತರಾಜು ಆಯೋಗ ವರದಿ ಪುರಸ್ಕಾರ ಮಾಡಿ ಒಳ ಮೀಸಲಾತಿ ಘೋಷಣೆ ಮಾಡುವ ಮೂಲಕ ಸಿಎಂ ಸಿದ್ದರಾಮಯ್ಯ ಬದ್ಧತೆ ತೋರಿಸಲಿ. ಇದು ಸಿದ್ದರಾಮಯ್ಯ ಅವರಿಗೆ ನಮ್ಮ ಸವಾಲು. ತಮಿಳುನಾಡು, ಆಂಧ್ರಪ್ರದೇಶ ಒಳ ಮೀಸಲಾತಿ ನೀಡಿದ್ದಾರೆ. ರಾಜ್ಯದಲ್ಲೂ ನೀವು ಒಳ ಮೀಸಲಾತಿ ಕೊಡಿ. ತಮ್ಮ ಹಿಂದುಳಿದ ನಾಯಕತ್ವ ಸಾಬೀತುಪಡಿಸಿ ಎಂದು ಸವಾಲು ಹಾಕಿದರು.

ಇದನ್ನೂ ಓದಿ : ಒಳ ಮೀಸಲಾತಿ ಶಿಫಾರಸು ಆದೇಶ ಸಂಬಂಧ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ಕೇಂದ್ರದ ಗಮನಕ್ಕೆ ತರುತ್ತೇವೆ: ಉಡುಪಿ ಕಾಲೇಜಿನ ಪ್ರಕರಣವನ್ನು ರಾಜಕೀಯವಾಗಿ, ಧರ್ಮದ ವಿಷಯದಲ್ಲಿ ನೋಡೋದು ಸರಿಯಲ್ಲ. ಆದರೆ ತನಿಖಾ ಸಂಸ್ಥೆಗಳಿಗೆ ಸರ್ಕಾರ ಮುಕ್ತವಾಗಿ ಅವಕಾಶ ಕೊಡಬೇಕು. ಇಂತಹ ಪ್ರಕರಣ ನಡೆಯದ ರೀತಿಯಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ಅವಶ್ಯಕತೆ ಇದ್ದರೆ ಈ ಪ್ರಕರಣವನ್ನು ಕೇಂದ್ರದ ಗಮನಕ್ಕೆ ತರುತ್ತೇವೆ ಎಂದು ನಾರಯಣಸ್ವಾಮಿ ತಿಳಿಸಿದರು.

ಒಬ್ಬ ಜವಾಬ್ದಾರಿಯುತ ಶಾಸಕ ತನ್ವೀರ್ ಸೇಠ್ ಅಪರಾಧಿಗಳನ್ನು ಬಿಟ್ಟು ಬಿಡಿ ಎಂದು ಹೇಳುವುದು ಅವರಿಗೆ ಶೋಭೆ ತರುವುದಿಲ್ಲ. ರಾಜ್ಯದ ಜನರ ರಕ್ಷಣೆ ಮಾಡೋದು ಗೃಹ ಸಚಿವರ ಕರ್ತವ್ಯ. ಯಾವುದೇ ಪ್ರಕರಣ ಆದರೂ ಗಂಭೀರವಾಗಿ ಪರಿಗಣಿಸಬೇಕು. ಒಂದು ಸಮುದಾಯಕ್ಕಾಗಿ ತುಘಲಕ್ ಆಡಳಿತ ನಡೆಸೋದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.