ETV Bharat / state

ಡಿವಿಎಸ್ ಆರೋಗ್ಯ ಸಹಜವಾಗಿದೆ, 24 ಗಂಟೆ ನಿಗಾದಲ್ಲಿರಿಸಿ ನಂತರ ಡಿಸ್ಚಾರ್ಜ್: ಡಾ.ಬೃಂದಾ - Aster Hospital Physician Dr. Brinda

ಚಿತ್ರದುರ್ಗದಲ್ಲಿ ಅಸ್ವಸ್ಥರಾದ ಕೇಂದ್ರ ಸಚಿವ ಸದಾನಂದ ಗೌಡರಿಗೆ ಅಲ್ಲಿನ ಬಸವೇಶ್ವರ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚುವರಿ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆ ತರಲಾಗಿದೆ. ಈಗಾಗಲೇ ಸಚಿವರಿಗೆ ಚಿಕಿತ್ಸೆ ನೀಡಲಾಗಿದ್ದು, ಅವರ ಹೃದಯ ಬಡಿತ ಸಹಜವಾಗಿದೆ ಎಂದು ಆಸ್ಟರ್ ಆಸ್ಪತ್ರೆ ಫಿಜಿಷಿಯನ್ ಡಾ.ಬೃಂದಾ ತಿಳಿಸಿದ್ದಾರೆ.

Dr,Brundha
ಡಾ.ಬೃಂದಾ
author img

By

Published : Jan 3, 2021, 7:12 PM IST

ಬೆಂಗಳೂರು: ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರ ಆರೋಗ್ಯ ಸ್ಥಿತಿ ಸಹಜವಾಗಿದ್ದು, ಆತಂಕಪಡುವ ಅಗತ್ಯವಿಲ್ಲ. 24 ಗಂಟೆಗಳ ಕಾಲ ನಿಗಾವಹಿಸಿ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಆಸ್ಟರ್ ಆಸ್ಪತ್ರೆ ಫಿಜಿಷಿಯನ್ ಡಾ.ಬೃಂದಾ ಮಾಹಿತಿ ನೀಡಿದ್ದಾರೆ.

ಡಾ.ಬೃಂದಾ ಅವರಿಂದ ಮಾಹಿತಿ

ಓದಿ: ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ಡಿ.ವಿ.ಸದಾನಂದ ಗೌಡ ದಾಖಲು

ಸದಾನಂದ ಗೌಡರ ಆರೋಗ್ಯದ ಕುರಿತು ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿತ್ರದುರ್ಗದಲ್ಲಿ ಅಸ್ವಸ್ಥರಾದ ಸದಾನಂದಗೌಡರಿಗೆ ಅಲ್ಲಿನ ಬಸವೇಶ್ವರ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚುವರಿ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರಲಾಗಿದೆ. ಸಚಿವರಿಗೆ ಚಿಕಿತ್ಸೆ ನೀಡಲಾಗಿದ್ದು, ಅವರ ಹೃದಯ ಬಡಿತ ಸಹಜವಾಗಿದೆ. ಇಸಿಜಿ, ಎಕೋ, ರಕ್ತ ಚಲನೆ ಎಲ್ಲವೂ ಸಹಜ ಸ್ಥಿತಿಯಲ್ಲಿದೆ. ಹೀಗಾಗಿ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದರು.

ಸದ್ಯ ತುರ್ತುನಿಗಾ ಘಟಕದಲ್ಲಿ 24 ಗಂಟೆಗಳ ಕಾಲ ಕೇಂದ್ರ ಸಚಿವರ ಆರೋಗ್ಯದ ಮೇಲೆ ನಿಗಾ ಇರಿಸಲಿದ್ದು, ನಾಳೆ ಮತ್ತೊಮ್ಮೆ ಆರೋಗ್ಯ ತಪಾಸಣೆ ನಡೆಸಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.