ETV Bharat / state

ಭೂ ಪರಿವರ್ತನೆ ಮಾಡಲು ಏಕರೂಪ ನೀತಿ ಜಾರಿಗೆ ಕ್ರಮ : ಸಚಿವ ಶಿವರಾಮ್ ಹೆಬ್ಬಾರ್ - ಭೂ ಪರಿವರ್ತನೆ ಮಾಡಲು ಏಕರೂಪ ನೀತಿ

ಉಡುಪಿ ನಗರಾಭಿವೃದ್ಧಿ ವ್ಯಾಪ್ತಿಯಲ್ಲಿ ಕೃಷಿ ವಲಯದಲ್ಲಿನ 10 ಸೆಂಟ್‌ವರೆಗಿನ ಜಾಗಕ್ಕೆ ಭೂ ಪರಿವರ್ತನೆ ಮಾಡಲು ನಗರಸಭೆ ನಿರ್ಣಯ ಕೈಗೊಂಡಿತ್ತು. ಎರಡು ವರ್ಷವಾದರೂ ಇದು ಇತ್ಯರ್ಥವಾಗಿಲ್ಲ. ಸಾರ್ವಜನಕರಿಗೆ ಹೇಳಿ ಹೇಳಿ ಸಾಕಾಗಿದೆ..

ಸಚಿವ ಶಿವರಾಮ್ ಹೆಬ್ಬಾರ್
ಸಚಿವ ಶಿವರಾಮ್ ಹೆಬ್ಬಾರ್
author img

By

Published : Mar 19, 2021, 7:10 PM IST

ಬೆಂಗಳೂರು : ರಾಜ್ಯಾದ್ಯಂತ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ 10 ಸೆಂಟ್ಸ್‌ವರೆಗಿನ ಜಾಗವನ್ನು ಕೃಷಿ ವಲಯದಿಂದ ವಸತಿ ವಲಯಕ್ಕೆ ಭೂ ಪರಿವರ್ತನೆ ಮಾಡಲು ಏಕರೂಪ ನೀತಿ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಇಂದು ಪ್ರಶ್ನೋತ್ತರ ವೇಳೆ ಬಿಜೆಪಿ ಶಾಸಕ ರಘುಪತಿ ಭಟ್ ಕೇಳಿದ ಪ್ರಶ್ನೆಗೆ ನಗರಾಭಿವೃದ್ಧಿ ಸಚಿವರ ಪರ ಉತ್ತರಿಸಿದ ಹೆಬ್ಬಾರ್, ಮುಂದಿನ ಮಂಗಳವಾರ ಅಧಿಕಾರಿಗಳ ಸಭೆ ಕರೆದು ಏಕರೂಪ ನೀತಿ ಜಾರಿ ಮಾಡುವುದರಿಂದ ಈಗಿರುವ ಸಮಸ್ಯೆಗಳು ಇತ್ಯರ್ಥವಾಗಲಿವೆ ಎಂದರು.

ಉಡುಪಿ, ಮಂಗಳೂರು, ಶಿವಮೊಗ್ಗಕ್ಕೆ ಮಾತ್ರ ಅನ್ವಯವಾಗದಂತೆ ಕೃಷಿ ವಲಯದಿಂದ ವಸತಿ ವಲಯಕ್ಕೆ ಭೂ ಪರಿವರ್ತನೆ ಮಾಡಲು ಏಕರೂಪ ನೀತಿ ಜಾರಿ ಮಾಡಲು ಸಚಿವರಿಗೆ ನಿರ್ದೇಶನ ನೀಡಬೇಕೆಂದು ಶಾಸಕ ರಮೇಶ್‍ಕುಮಾರ್ ಅವರು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಸ್ಪೀಕರ್, ಈ ಸಮಸ್ಯೆ ರಾಜ್ಯಾದ್ಯಂತ ಇದೆ ಎಂಬುದನ್ನು ಶಾಸಕರು ನನ್ನ ಗಮನಕ್ಕೆ ತಂದಿದ್ದಾರೆ. ಇಂತಹ ತಾರತಮ್ಯ ಬೇಡ. ಅಧಿಕಾರ ವಿಕೇಂದ್ರೀಕರಣ ಉದ್ದೇಶವೇ ಎಲ್ಲರಿಗೂ ನ್ಯಾಯ ಸಿಗಬೇಕು ಎಂಬುದಾಗಿದೆ. ಹೀಗಾಗಿ, ಅಧಿಕಾರಿಗಳ ಜತೆ ಸಭೆ ನಡೆಸಿ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.

ಈ ವೇಳೆ ಉತ್ತರ ನೀಡಿದ ಸಚಿವರು, ಈಗಾಗಲೇ ಇಂದು ಬೆಳಗ್ಗೆ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿದ್ದೇವೆ. ಉಡುಪಿಯಲ್ಲಿ ಇದರ ಸಮಸ್ಯೆ ಇದ್ದರೆ ತಕ್ಷಣವೇ ಪರಿಹರಿಸಲಾಗುವುದು. ಅಲ್ಲದೆ ರಾಜ್ಯದ ಯಾವ ಯಾವ ಭಾಗಗಳಲ್ಲಿ ಸಮಸ್ಯೆ ಇವೆಯೋ ಅದನ್ನು ಕಾಲಮಿತಿಯೊಳಗೆ ಪರಿಹರಿಸುತ್ತೇವೆ. ಶಾಸಕರ ಕಳಕಳಿ ನನಗೆ ಅರ್ಥವಾಗಿದೆ ಎಂದರು.

ಇದಕ್ಕೂ ಮುನ್ನ ಶಾಸಕ ರಘುಪತಿ ಭಟ್ ಮಾತನಾಡಿ, ಉಡುಪಿ ನಗರಾಭಿವೃದ್ಧಿ ವ್ಯಾಪ್ತಿಯಲ್ಲಿ ಕೃಷಿ ವಲಯದಲ್ಲಿನ 10 ಸೆಂಟ್‌ವರೆಗಿನ ಜಾಗಕ್ಕೆ ಭೂ ಪರಿವರ್ತನೆ ಮಾಡಲು ನಗರಸಭೆ ನಿರ್ಣಯ ಕೈಗೊಂಡಿತ್ತು. ಎರಡು ವರ್ಷವಾದರೂ ಇದು ಇತ್ಯರ್ಥವಾಗಿಲ್ಲ. ಸಾರ್ವಜನಕರಿಗೆ ಹೇಳಿ ಹೇಳಿ ಸಾಕಾಗಿದೆ.

ಇದನ್ನು ಇತ್ಯರ್ಥಪಡಿಸಲು ದೊಡ್ಡ ಜಾಲವಿದೆ. ಆ ಬ್ರೋಕರ್​ಗಳಿಗೆ ಲಂಚ ಕೊಟ್ಟರೆ ಕ್ಷಣಾರ್ಧದಲ್ಲೇ ಸಮಸ್ಯೆ ಇತ್ಯರ್ಥವಾಗುತ್ತದೆ. ನಾನು ಆಡಳಿತ ಪಕ್ಷದ ಶಾಸಕನಾಗಿ ಹೇಳಬಾರದು. ನನ್ನ ಕ್ಷೇತ್ರದ ಸಮಸ್ಯೆ ಇತ್ಯರ್ಥವಾಗಲಿಲ್ಲ ಎಂದು ಧರಣಿಯನ್ನೂ ಮಾಡುವಂತಿಲ್ಲ. ಆದರೆ, ನನ್ನ ನೋವನ್ನು ಯಾರ ಬಳಿ ಹೇಳಿಕೊಳ್ಳಬೇಕು ಎಂದು ಏರು ಧನಿಯಲ್ಲೇ ಕೇಳಿದರು.

ಇದಕ್ಕೆ ಸಹಮತ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಕೆ ಜಿ ಬೋಪಯ್ಯ, ಭೂಮಿ ಪರಿವರ್ತನೆಯಾಗದಿದ್ದರೆ ಬ್ಯಾಂಕಿನವರು ಸಾಲಕೊಡುವುದಿಲ್ಲ. ಸರ್ಕಾರ ಇದನ್ನು ಗಭೀರವಾಗಿ ತೆಗೆದುಕೊಳ್ಳಬೇಕೆಂದರು.

ಬಿಜೆಪಿ ಶಾಸಕ ಅಭಯ್‍ಪಾಟೀಲ್ ಮಾತನಾಡಿ, ಇದರ ಹಿಂದೆ ದೊಡ್ಡ ರಾಕೆಟ್ ಜಾಲವಿದೆ. ಸ್ವತಃ ನನ್ನ ಜಮೀನೇ ಒಂದೂವರೆ ವರ್ಷದಿಂದ ಭೂ ಪರಿವರ್ತನೆಯಾಗಿಲ್ಲ. ಶಾಸಕನಾಗಿ ನನ್ನ ಪರಿಸ್ಥಿತಿ ಹೀಗಾದರೆ ಸಾಮಾನ್ಯ ಜನರ ಪಾಡೇನು ಎಂದು ಪ್ರಶ್ನಿಸಿದರು.

ಇದನ್ನೂ ಓದಿ.. 'ಕುಟುಂಬ ವ್ಯಾಮೋಹಕ್ಕೆ ಬಲಿಯಾಗಬೇಡಿ, ಬ್ಯಾಂಡ್​ ಸೆಟ್ ನಾಯಕರನ್ನು ದೂರವಿಡಿ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.