ಬೆಂಗಳೂರು: ಎಲ್ಲಾ ಜಿಲ್ಲೆಗಳ ವಾಯುಮಾಲಿನ್ಯ ಗುಣಮಟ್ಟ ಸೂಚ್ಯಂಕ ಕೇಂದ್ರದ ದತ್ತಾಂಶ ಸಂಗ್ರಹ ಸರ್ವರ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೇಂದ್ರ ಕಚೇರಿಯಲ್ಲಿ ಚಾಲನೆ ನೀಡಲಾಗಿದೆ.
![Unified Server system, Unified Server system inaugurated, Unified Server system inaugurated by KSPCB, Unified Server, Unified Server news, ಏಕೀಕೃತ ಸರ್ವರ್ ವ್ಯವಸ್ಥೆ, ಏಕೀಕೃತ ಸರ್ವರ್ ವ್ಯವಸ್ಥೆ ಉದ್ಘಾಟನೆ, ಕೆಎಸ್ಪಿಸಿಬಿಯಿಂದ ಏಕೀಕೃತ ಸರ್ವರ್ ವ್ಯವಸ್ಥೆ ಉದ್ಘಾಟನೆ, ಏಕೀಕೃತ ಸರ್ವರ್, ಏಕೀಕೃತ ಸರ್ವರ್ ಸುದ್ದಿ,](https://etvbharatimages.akamaized.net/etvbharat/prod-images/kn-bng-04-kspcb-7202707_12032021225453_1203f_1615569893_783.jpg)
ರಾಜ್ಯದ 31 ಭಾಗಗಳಲ್ಲಿ ವಾಯು ಮಾಲಿನ್ಯ ಗುಣಮಟ್ಟ ಸೂಚ್ಯಂಕ ಕೇಂದ್ರಗಳ ಕಾರ್ಯವೈಖರಿ ಮತ್ತು ನಿರ್ವಹಣೆಯ ಮಾಹಿತಿಯನ್ನು ಒಂದೇ ಜಾಗದಲ್ಲಿ ಪಡೆಯುವ ಉದ್ದೇಶದಿಂದ ಏಕೀಕೃತ ಸರ್ವರ್ ಅಭಿವೃದ್ಧಿ ಪಡಿಸಲಾಗಿದೆ.
ಆಯಾ ಜಿಲ್ಲೆಗಳಲ್ಲಿ ಮಾತ್ರ ವಾಯುಮಾಲಿನ್ಯದ ನಿರ್ವಹಣೆ ಹಾಗೂ ಮೇಲ್ವಿಚಾರಣೆ ನಡೆಯುತ್ತಿತ್ತು. ಕೇಂದ್ರ ಕಚೇರಿಗೆ ಮಾಹಿತಿ ತಕ್ಷಣ ಸಿಗುತ್ತಿರಲಿಲ್ಲ. ಅಲ್ಲದೆ, ವಸ್ತುಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಸಹ ಸಮಸ್ಯೆ ಆಗುತ್ತಿತ್ತು. ಯಾವುದಾದರೂ ನಿರ್ದಿಷ್ಟ ಕೇಂದ್ರದಲ್ಲಿ ವಾಯು ಮಾಲಿನ್ಯ ಪ್ರಮಾಣ ಹೆಚ್ಚಾಗುವುದು ಅಥವಾ ಸಮಸ್ಯೆ ಉಂಟಾದರೆ ತಡವಾಗಿ ತಿಳಿಯುತ್ತಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಏಕೀಕೃತ ಸರ್ವರ್ ಅಭಿವೃದ್ಧಿಪಡಿಸಲಾಗಿದೆ.