ETV Bharat / state

ಪಾದರಾಯನಪುರ ಘಟನೆ ದುರಾದೃಷ್ಟಕರ, ಅಪರಾಧಿಗಳನ್ನು ಮಟ್ಟ ಹಾಕುತ್ತೇವೆ: ಸಚಿವ ಆರ್.ಅಶೋಕ್ - ಪಾದರಾಯನಪುರದಲ್ಲಿ ನಡೆದ ಘಟನೆ

ಪಾದರಾಯನಪುರ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವ ಆರ್. ಅಶೋಕ್​, ನಿಮ್ಮ ಕುಟುಂಬ ಹಾಗೂ ನಿಮ್ಮನ್ನು ರಕ್ಷಣೆ ಮಾಡಲು ಬರುವವರನ್ನು ಅವ್ಯಾಚ್ಯ ಶಬ್ಧಗಳಿಂದ ನಿಂದಿಸುವುದು, ಹೊಡೆಯಲು ಯತ್ನಿಸುವುದು ರಾಕ್ಷಸ ಪ್ರವೃತ್ತಿ. ಅಪರಾಧಿಗಳನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

minister-ashok
ಸಚಿವ ಆರ್.ಅಶೋಕ್
author img

By

Published : Apr 20, 2020, 5:05 PM IST

ಬೆಂಗಳೂರು: ಪಾದರಾಯನಪುರದಲ್ಲಿ ನಡೆದ ಘಟನೆ ದುರಾದೃಷ್ಟಕರ, ಇಂತವರನ್ನು ಪ್ರಾರಂಭದಲ್ಲೇ ಮಟ್ಟ ಹಾಕುವ ಕೆಲಸ ಆಗಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಕೆಲ ಕಿಡಿಗೇಡಿಗಳು ಸರ್ಕಾರದ ಸ್ವತ್ತನ್ನು ನಾಶ ಮಾಡುವ ಪ್ರಯತ್ನ ಮಾಡುವ ಮೂಲಕ ಗೂಂಡಾಗಿರಿ ವರ್ತನೆ ತೋರುತ್ತಿದ್ದಾರೆ. ಸರ್ಕಾರ ಕೊರೊನಾ ಸೋಂಕಿತರನ್ನು ಕ್ವಾರಂಟೈನ್​​ನಲ್ಲಿರಿಸಿ ಅವರಿಗೆ ಚಿಕಿತ್ಸೆ ನೀಡುತ್ತಿದೆ. ನಿಮ್ಮ ಕುಟುಂಬ ಹಾಗೂ ನಿಮ್ಮನ್ನು ರಕ್ಷಣೆ ಮಾಡಲು ಬರುವವರನ್ನು ಅವ್ಯಾಚ್ಯ ಶಬ್ಧಗಳಿಂದ ನಿಂದಿಸುವುದು, ಹೊಡೆಯಲು ಯತ್ನಿಸುವುದು ರಾಕ್ಷಸ ಪ್ರವೃತ್ತಿ ಎಂದು ಕಿಡಿ ಕಾರಿದರು.

ಸಚಿವ ಆರ್.ಅಶೋಕ್
ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿದ್ದೇನೆ. ಕೊರೊನಾ ವಿರುದ್ಧ ಹೋರಾಟ ಒಂದು ಕಡೆಯಾದ್ರೆ, ಇಂತಹ ಗೂಂಡಾಗಳನ್ನು ಮಟ್ಟ ಹಾಕುವುದು ಕೂಡಾ ಇನ್ನೊಂದು ಕೆಲಸ. ಇದನ್ನು ಆರಂಭಿಕ ಹಂತದಲ್ಲೇ ಮಟ್ಟ ಹಾಕಬೇಕು. ಇಂತವರ ವಿರುದ್ಧ ಕಾನೂನು ಸಮರ ಸಾರುತ್ತೇವೆ. ಯಾವುದೇ ಕಾರಣಕ್ಕೂ ಬಿಡುವ ಪ್ರಶ್ನೆಯೇ ಇಲ್ಲ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.