ETV Bharat / state

ಮಹದೇವಪುರ ಸುತ್ತಮತ್ತ ಅನಧಿಕೃತ ಓಎಫ್​ಸಿ ಕೇಬಲ್ ತೆರವು

author img

By

Published : Mar 14, 2020, 8:04 AM IST

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಮಹದೇವಪುರ ವಲಯದ ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಅನಧಿಕೃತವಾಗಿ ಅಳವಡಿಸಿದ್ದ ಓಎಫ್​ಸಿ ಕೇಬಲ್​ಗಳನ್ನು ತೆರವುಗೊಳಿಸಲಾಗಿದೆ.

Unauthorized OFC cable clearance in and around Mahadevapur
ಅನಧಿಕೃತ ಓಎಫ್​ಸಿ ಕೇಬಲ್ ತೆರವು

ಬೆಂಗಳೂರು : ಬಿಬಿಎಂಪಿ ಹಾಗೂ ಹಳೆ ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗದ ಆದೇಶದ ಹಿನ್ನೆಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮಹದೇವಪುರ ವಲಯದ ವಾರ್ಡ್ ನಂ.150 ಬೆಳ್ಳಂದೂರು ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಇಬ್ಬಲೂರು ಜಂಕ್ಷನ್​ನಿಂದ ಕೈಕೊಂಡ್ರಹಳ್ಳಿ ವರೆಗಿನ ರಸ್ತೆಯಲ್ಲಿ ಅನಧಿಕೃತವಾಗಿ ಅಳವಡಿಸಿದ್ದ ಓಎಫ್​ಸಿ ಕೇಬಲ್​ಗಳನ್ನು ತೆರವುಗೊಳಿಸಲಾಗಿದೆ.

ಬಿಬಿಎಂಪಿ ಕಾರ್ಯಪಾಲ ಅಭಿಯಂತರರು ಮಹದೇವಪುರ ವಿಭಾಗ ಹಾಗೂ ವಿದ್ಯುತ್ ವಿಭಾಗ ಅವರ ನೇತೃತ್ವದಲ್ಲಿ ಓಎಫ್​ಸಿ ಕೇಬಲ್ ತೆರವು ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಸದರಿ ಕಾರ್ಯಾಚರಣೆಯಲ್ಲಿ ಒಟ್ಟು 6 ವಾರ್ಡ್​ಗಳ ಅಭಿಯಂತರರು ಹಾಗೂ ಅಧೀನದ ಸಿಬ್ಬಂದಿ ವರ್ಗದ ಸುಮಾರು 77 ಕಿಮೀ ಉದ್ದದ ಅನಧಿಕೃತ ವಿದ್ಯುತ್ ಕಂಬಗಳ ಮೇಲೆ ಹಾಕಿದ್ದ, ಮರಗಳಿಗೆ ಸುತ್ತಿದ್ದ ಹಾಗೂ ನೇತಾಡುತ್ತಿದ್ದ 6 ಟ್ರ್ಯಾಕ್ಟರ್ ಲೋಡ್ ಓಎಫ್​ಸಿ ಕೇಬಲ್ ಗಳನ್ನು ತೆರವುಗೊಳಿಸಿ ಇಂದಿರಾ ಕ್ಯಾಂಟೀನ್ ಬಳಿ ಶೇಖರಿಸಿದ್ದಾರೆ.

ರಸ್ತೆ ಬದಿಯಲ್ಲಿ ಬಿದ್ದಿರುವ 3 ಟ್ರ್ಯಾಕ್ಟರ್ ಲೋಡ್ ಡೆಬ್ರಿಸ್‌ನ್ನು ತೆರವುಗೊಳಿಸಲಾಯಿತು. ಸದರಿ ಸರ್ಜಾಪುರ ಮುಖ್ಯ ರಸ್ತೆಯು ಅತಿ ಹೆಚ್ಚು ಸಂಚಾರ ದಟ್ಟಣೆಯ ರಸ್ತೆಯಾಗಿದ್ದು, ಅನಧಿಕೃತ ಓಎಫ್​ಸಿ ಕೇಬಲ್​ ನಿಂದ ಎಲ್ಲ ರೀತಿಯ ವಾಹನಗಳಿಗೆ ಹಾಗೂ ಪಾದಚಾರಿ ಮಾರ್ಗದಲ್ಲಿ ಓಡಾಡುವ ಜನ ಸಾಮಾನ್ಯರಿಗೆ ತೊಂದರೆಯುಂಟಾಗುತಿತ್ತು. ಈ ಸಂಬಂಧ ಸಾರ್ವಜನಿಕರಿಂದಲೂ ಸಹ ಅನೇಕ ದೂರುಗಳು ಬಂದ ಹಿನ್ನೆಲೆ ಸಾರ್ವಜನಿಕರ ಸುರಕ್ಷತೆಗಾಗಿ ಓಎಫ್​ಸಿ ಕೇಬಲ್‌ಗಳನ್ನು ತೆರವುಗೊಳಿಸಲಾಗಿದೆ.

ಕೆ.ಆರ್.ಪುರ ವಿಭಾಗ ವ್ಯಾಪ್ತಿಯ ಕೆ.ಆರ್.ಪುರ ಬ್ರಿಡ್ಜ್ ನಿಂದ ಮೇಡಹಳ್ಳಿ ಬ್ರಿಡ್ಜ್​ ವರೆಗೆ ರಸ್ತೆ ಬದಿಯಲ್ಲಿ ಬಿದ್ದಿರುವ 6 ಟ್ರಾಕ್ಟರ್ ಲೋಡ್ ಡೆಬ್ರಿಸ್, ಪಾದಚಾರಿ ಮಾರ್ಗದಲ್ಲಿ ತಾತ್ಕಾಲಿಕ 16 ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಇದಲ್ಲದೆ Covid-19 ವೈರಸ್ ಹಿನ್ನೆಲೆ ರಸ್ತೆ ಬದಿಯಲ್ಲಿರುವ ತೆರೆದ ಪದಾರ್ಥ ಮಾರಾಟ ಮಾಡುವ ಅಂಗಡಿಗಳನ್ನು ತೆರವುಗೊಳಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.