ETV Bharat / state

ಬೆಂಗಳೂರಿಗೂ ಬಂತು ಉಬರ್ ಗ್ರೀನ್: ಟೆಕ್ ಸಮ್ಮಿಟ್​ನಲ್ಲಿ ಲಾಂಚ್ ಮಾಡಿದ ಸಚಿವ ಪ್ರಿಯಾಂಕ್​ ಖರ್ಗೆ

Uber Green in Bengaluru: ಇಂದಿನಿಂದ ಬೆಂಗಳೂರಿನ ಅನೇಕ ಭಾಗಗಳಲ್ಲಿ ತಮ್ಮ ರೈಡ್​ಗಾಗಿ ಉಬರ್​ ಆ್ಯಪ್​ ಓಪನ್​ ಮಾಡಿದಾಗ ಗ್ರಾಹಕರಿಗೆ ಉಬರ್​ ಗ್ರೀನ್​ ಆಯ್ಕೆಯೂ ದೊರೆಯಲಿದೆ.

Minister Priyank Kharge launched it at Tech Summit
ಟೆಕ್ ಸಮ್ಮಿಟ್​ನಲ್ಲಿ ಲಾಂಚ್ ಮಾಡಿದ ಸಚಿವ ಪ್ರಿಯಾಂಕ್​ ಖರ್ಗೆ
author img

By ETV Bharat Karnataka Team

Published : Nov 30, 2023, 7:36 PM IST

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ಒದಗಿಸುತ್ತಿರುವ ಪ್ರಮುಖ ಸಂಸ್ಥೆ ಉಬರ್ ಇಂದು ಬೆಂಗಳೂರಿನಲ್ಲಿ ತನ್ನ ಜಾಗತಿಕ ಪ್ರಮುಖ ಎಲೆಕ್ಟ್ರಿಕ್ ವೆಹಿಕಲ್ ಸೇವೆ ಉಬರ್ ಗ್ರೀನ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ. ಬೆಂಗಳೂರು ಟೆಕ್ ಶೃಂಗಸಭೆಯ ಹಿನ್ನೆಲೆಯಲ್ಲಿ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಐತಿಹಾಸಿಕ ಬೆಂಗಳೂರು ಅರಮನೆಯಿಂದ ಮೊದಲ ಉಬರ್ ಗ್ರೀನ್ ವಾಹನಗಳಿಗೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಬೆಂಗಳೂರಿನಲ್ಲಿ ವಾಯು ಮಾಲಿನ್ಯ ನಿಯಂತ್ರಿಸಿ ಗಾಳಿಯ ಗುಣಮಟ್ಟವನ್ನು ಸುಧಾರಿಸುವುದು ನಮ್ಮ ಸಾಮೂಹಿಕ ಜವಾಬ್ದಾರಿಯಾಗಿದೆ. ಉಬರ್​ನ ಈ ಉಪಕ್ರಮ ಹಸಿರು ಶೃಂಗಸಭೆಗೆ ನಮ್ಮ ಬದ್ಧತೆಯನ್ನು ಅನುಮೋದಿಸುತ್ತದೆ. ದೀರ್ಘಾವಧಿಯಲ್ಲಿ ಪರಿಣಾಮಕಾರಿ ಮತ್ತು ಅರ್ಥಪೂರ್ಣ ಬದಲಾವಣೆಗಳಿಗೆ ದಾರಿ ಮಾಡಿಕೊಡುವ ಮತ್ತು ಸುಸ್ಥಿರತೆಯ ಸಂಸ್ಕೃತಿಯನ್ನು ಬೆಳೆಸುವ ಸ್ಪಷ್ಟವಾದ ಕ್ರಮಗಳನ್ನು ನಾವು ತೆಗೆದುಕೊಂಡಿದ್ದೇವೆ ಎಂದು ಉಬರ್ ಗ್ರೀನ್​ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಉಬರ್ ಗ್ರೀನ್: ಟೆಕ್ ಸಿಟಿಯ ನಿವಾಸಿಗಳು ತಮ್ಮ ಉಬರ್ ಅಪ್ಲಿಕೇಶನ್‌ನಲ್ಲಿ ಕೆಲವೇ ಟ್ಯಾಪ್‌ಗಳೊಂದಿಗೆ ಸುಸ್ಥಿರ, ಪರಿಸರ ಸ್ನೇಹಿ ಸವಾರಿಗಳನ್ನು ಬುಕ್ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಉಬರ್ ಪ್ರತಿನಿಧಿಗಳು ಮಾಹಿತಿ ನೀಡಿದರು.

ಉಬರ್ ಗ್ರೀನ್ ಈಗ ಮಧ್ಯ ಬೆಂಗಳೂರು ಸೇರಿದಂತೆ ನಗರದ ಹಲವಾರು ಭಾಗಗಳಲ್ಲಿ ಲಭ್ಯವಿದೆ. ಮತ್ತು ಭಾರತದ ಆರಂಭಿಕ ರಾಜಧಾನಿಯಲ್ಲಿ ಹೆಚ್ಚಿನ ಜಿಯೋಲೊಕೇಶನ್‌ಗಳಿಗೆ ಸೇವೆಯನ್ನು ಹೆಚ್ಚಿಸಲಿದೆ. ಇಂದಿನಿಂದ, ನಗರದ ಅನೇಕ ಭಾಗಗಳಲ್ಲಿನ ಸವಾರರು ತಮ್ಮ ರೈಡ್‌ಗಳನ್ನು ಬುಕ್ ಮಾಡಲು ತಮ್ಮ ಅಪ್ಲಿಕೇಶನ್​ನಲ್ಲಿ ಹೈರ್ ಮಾಡಿದಾಗ ಉಬರ್ ಗ್ರೀನ್ ಆಯ್ಕೆಯನ್ನು ನೋಡುತ್ತಾರೆ ಎಂದರು.

ಐಒಟಿ, ಎಐ ಬಳಕೆಯಿಂದ ಕೃಷಿ ಇಳುವರಿ ಹೆಚ್ಚಳ: ಕೃಷಿಯಲ್ಲೂ ಆಧುನಿಕತೆ ಮೈಗೂಡಿಸಿಕೊಂಡು, ಐಒಟಿ, ಎಐ ಬಳಸಿದರೆ ನಿಖರ ಗೊಬ್ಬರ ಬಳಕೆ, ನೀರಿನ ಪ್ರಶಸ್ತ ಬಳಕೆ ಹಾಗೂ ಅತಿಹೆಚ್ಚಿನ ಗುಣಮಟ್ಟದ ಇಳುವರಿ ಪಡೆಯಲು ಸಾಧ್ಯ ಎಂದು ಫಾರ್ಮ್ ಆ್ಯಂಡ್ ಫೀಲ್ಡ್, ಕ್ರಾಪ್ ಆ್ಯಂಡ್ ಡಿಜಿಟಲ್ ಸೊಲ್ಯುಷನ್ಸ್‌ ಮುಖ್ಯಸ್ಥ ಸಾಗರ್ ಎನ್. ಗುರುವಾರ ಪ್ರತಿಪಾದಿಸಿದರು.

ಇಲ್ಲಿನ ಅರಮನೆ ಆವರಣದಲ್ಲಿ ನಡೆಯುತ್ತಿರುವ "ಬೆಂಗಳೂರು ಟೆಕ್ ಮೇಳ- 2023" ದಲ್ಲಿ "ಸುಸ್ಥಿರ ಭವಿಷ್ಯಕ್ಕಾಗಿ ಟೆಕ್ ಬೆಂಬಲ" ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಕೃಷಿಯಲ್ಲಿ ತಂತ್ರಜ್ಞಾನ ಬಳಕೆ ಎಂದಾಕ್ಷಣ ಕಾರ್ಪೊರೇಟ್ ಕಪಿಮುಷ್ಟಿಯೊಳಗೆ ರೈತರು ಸಿಲುಕಿದಂತಾಗುವುದಿಲ್ಲ. ಸಣ್ಣ ರೈತರಿಗೂ ಇದರ ಅಳವಡಿಕೆ ಸಾಧ್ಯ. ತಂತ್ರಜ್ಞಾನ ಎಲ್ಲರನ್ನೂ ಸಬಲೀಕರಣಗೊಳಿಸುತ್ತದೆ. ಬೀಜ ಬಿತ್ತನೆಗೆ ಮುನ್ನ ಅದರ ಗುಣಮಟ್ಟ ನಿರ್ಣಯಿಸಬೇಕು. ಬೀಜ ಹಾಗೂ ಮಣ್ಣಿನ ಹೊಂದಾಣಿಕೆಯ ಪರೀಕ್ಷೆಯಾಗಬೇಕು. ಬೆಳೆಗೆ ಅಗತ್ಯವಾಗಿರುವ ನಿಖರ ಪೋಷಕಾಂಶ ಹಾಗೂ ನೀರಿನ ಪ್ರಮಾಣದ ಲೆಕ್ಕಾಚಾರ ನಡೆಯಬೇಕು. ಕೊನೆಗೆ ಇಳುವರಿಯ ಗುಣಮಟ್ಟವನ್ನೂ ಅಳೆಯುವಂತಾಗಬೇಕು. ಇವೆಲ್ಲವೂ ಭಾರತದಲ್ಲಿ ಸಾಧ್ಯವಾಗಿ ಕೃಷಿಯ ಗುಣಮಟ್ಟ ಹೆಚ್ಚುವ ದಿನ ದೂರವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ತ್ಯಾಜ್ಯ ನೀರು ಬಳಕೆ: ನಮ್ಮ ದೇಶದಲ್ಲಿ ಕೈಗಾರಿಕೆ ಹಾಗೂ ನಗರ ಬಳಕೆಗೆ ವಿನಿಯೋಗವಾಗುತ್ತಿರುವುದು ಶೇ.20ರಷ್ಟು ಮಾತ್ರ. ಈ ನೀರಿನ ಪೋಲು, ತ್ಯಾಜ್ಯ ಸಂಸ್ಕರಣೆ ಕುರಿತು ತುಂಬಾ ಗಮನಹರಿಸಲಾಗುತ್ತಿದೆ. ಆದರೆ ಶೇ.80ರಷ್ಟು ನೀರು ಬಳಸುವ ಕೃಷಿಯ ಕುರಿತು ಚಿಂತನೆ ನಡೆದಿಲ್ಲ. ಕೃಷಿಯಲ್ಲಿ ಪ್ರಶಸ್ತ ನೀರಿನ ಬಳಕೆ ಹಾಗೂ ಕೃಷಿಗೆ ಉಪಯುಕ್ತವಾಗಿರುವ ನೈಟ್ರೋಜನ್‌ಯುಕ್ತ ತ್ಯಾಜ್ಯ ನೀರಿನ ಬಳಕೆ ಹೇಗೆ ಸಾಧ್ಯ ಎಂಬ ಕುರಿತು ನಾವು ಆಲೋಚಿಸಬೇಕಿದೆ ಎಂದು ಅವರು ಹೇಳಿದರು.

ನೀರಿನ ಮಿತ ಬಳಕೆಯಂತಹ ಜವಾಬ್ದಾರಿಯುತ ನಡವಳಿಕೆಗೆ ತಂತ್ರಜ್ಞಾನದ ಅಗತ್ಯವಿದೆ. ಶೇ.80ರಷ್ಟು ತ್ಯಾಜ್ಯ ನೀರು ಸಂಸ್ಕರಣೆಯಾಗದೆ ಜಲಮೂಲವನ್ನು ಸೇರುತ್ತಿದೆ. ನೀರಿನ ನಿರ್ವಹಣೆ ಹಾಗೂ ಮರುಬಳಕೆಗಾಗಿ ಡೇಟಾ ಸಂಗ್ರಹಣೆ ಆಗಬೇಕು. ಐಒಟಿ, ಡಿಜಿಟಲ್ ಟ್ವಿನ್ ಅನ್ನು ಜಲೋದ್ಯಮಕ್ಕೆ ಬಳಸಬಹುದಾಗಿದೆ ಎಂದು ವೋಲಿಯಾ ವಾಟರ್ ಟೆಕ್ನಾಲಜೀಸ್‌ನ ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಒಷೇನಿಯಾದ ಪ್ರಾದೇಶಿಕ ಸಿಐಒ ಸಂತೋಷ್ ಸುಬ್ರಮಣಿಯನ್ ಹೇಳಿದರು.

ಬ್ಲಾಕ್‌ಚೈನ್: ನಿತ್ಯಜೀವನದಲ್ಲಿ ತಂತ್ರಜ್ಞಾನ ಅಳವಡಿಸುವ ಬಗ್ಗೆ ಎಲ್ಲರೂ ಒಟ್ಟಾಗಿ ಸಮಗ್ರ ಚಿಂತನೆ ನಡೆಸಬೇಕು. ಬ್ಲಾಕ್‌ಚೈನ್ ತಂತ್ರಜ್ಞಾನದ ಮೂಲಕ ಸುರಕ್ಷಿತ ಡೇಟಾ ಶೇಖರಣೆ ಮಾಡಬಹುದಾಗಿದೆ. ಬಳಿಕ ಅದರ ನಿರಂತರ ಮೇಲ್ವಿಚಾರಣೆಯನ್ನೂ ನಡೆಸಬೇಕು ಎಂದು ಜ್ಯೂರಿಚ್ ಯುನಿವರ್ಸಿಟಿಯ ಇನ್ಫರ್ಮ್ಯಾಟಿಕ್ಸ್ ವಿಭಾಗದ ಪ್ರೊ.ಕ್ಲಾಡಿಯಾ ಜೆ ಟೆಸ್ಸಾನ್ ಹೇಳಿದರು. ಇನ್ಫೋಸಿಸ್‌ನ ಕ್ಲೈಮೇಟ್ ಆ್ಯಕ್ಷನ್ ಮುಖ್ಯಸ್ಥರಾದ ಗುರುಪ್ರಕಾಶ್ ಶಾಸ್ತ್ರಿ ಈ ಸಂವಾದ ನಿರ್ವಹಿಸಿದರು.

ಇದನ್ನೂ ಓದಿ: ಟೆಕ್‌ ಸಮಿಟ್‌ನಲ್ಲಿ ವಿವಿಧ ಸ್ಟಾರ್ಟ್‌ಅಪ್‌ಗಳ 35 ವಿನೂತನ ಉತ್ಪನ್ನಗಳ ಅನಾವರಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.