ಬೆಂಗಳೂರು: ಕಳ್ಳತನ ಪ್ರಕರಣದಲ್ಲಿ ಜಾಮೀನು ಕೊಡಿಸಿದ ವಕೀಲರ ಫೀಸ್ ಕಟ್ಟಲು ಮತ್ತೆ ಕಳ್ಳತನಕ್ಕಿಳಿದ ಖದೀಮರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ.
ಸಯ್ಯದ್ ಇಮ್ರಾನ್ ಅಲಿಯಾಸ್ ಕಾಲು, ವಸೀಮ್ ಅಕ್ರಮ್ ಅಲಿಯಾಸ್ ಬ್ಲೇಡ್ ವಸೀಮ್ ಎಂಬುರವನ್ನು ಮನೆಗಳ್ಳತನ ಆರೋಪದ ಮೇಲೆ ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ 8 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿದೆ.
ಆರೋಪಿಗಳಿಬ್ಬರು ಈ ಹಿಂದೆ ಹಲವು ಕಡೆ ಮನೆಗಳ್ಳತನ ಮಾಡಿ ಜೈಲಿಗೆ ಸೇರಿದ್ರು. ಆಗ ಇವರಿಗೆ ವಕೀಲರೊಬ್ಬರು ಜಾಮೀನು ಕೊಡಿಸಿ ಬಿಡುಗಡೆ ಮಾಡಿಸಿದ್ರು. ವಕೀಲರಿಗೆ ಋಣವಾಗಿ ಫೀಸ್ ಕಟ್ಟಲಾಗದೆ, ಇಬ್ಬರೂ ಮತ್ತೆ ಕಳ್ಳನತಕ್ಕಿಳಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕೋರಮಂಗಲ, ಆಡುಗೋಡಿ, ತಿಲಕ್‌ನಗರ, ಬೊಮ್ಮನಹಳ್ಳಿ ಸೇರಿದಂತೆ ಹಲವೆಡೆ ಮನೆಗಳ್ಳತನ ಮಾಡಿ, ಅದರಿಂದ ಬಂದ ಹಣದಲ್ಲಿಯೇ ವಕೀಲರ ಫೀಸ್ ಕಟ್ಟಿದ್ದರು ಎಂದು ಹೇಳಿದ್ದಾರೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.