ETV Bharat / state

ಬೀಗ ಹಾಕಿದ ಮನೆಗಳ ಕಿಟಕಿ, ಹೂವಿನ ಕುಂಡದಲ್ಲಿಟ್ಟ ಕೀ ಎಗರಿಸಿ ಕಳ್ಳತನ; ಐನಾತಿ ಜೋಡಿ ಅರೆಸ್ಟ್

ಕಿಟಕಿಯಲ್ಲಿಟ್ಟಿದ್ದ ಕೀ ಬಳಸಿ ಮನೆಗಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕೆ. ಪಿ ಅಗ್ರಹಾರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

acused
ಪ್ರವೀಣ್ ಮತ್ತು ಸೂರ್ಯ
author img

By

Published : Oct 31, 2021, 5:43 PM IST

ಬೆಂಗಳೂರು: ಬೀಗ ಹಾಕಿದ ಮನೆಗಳ ಕಿಟಕಿ, ಹೂವಿನ ಕುಂಡದಲ್ಲಿಟ್ಟ ಕೀ ಎಗರಿಸಿ ಕಳ್ಳತನ ಮಾಡುತ್ತಿದ್ದ ಐನಾತಿ ಜೋಡಿಯನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

Million rupees worth gold siezed by police
ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದ ಪೊಲೀಸರು

19 ವರ್ಷದ ಪ್ರವೀಣ್ ಮತ್ತು ಸೂರ್ಯ ಬಂಧಿತರು. ಈ ಮಾದರಿಯಲ್ಲಿ ಹಲವೆಡೆ ಕಳ್ಳತನ ಮಾಡಿದ್ದರು. ಕೆ. ಪಿ‌ ಅಗ್ರಹಾರ ಪೊಲೀಸರು ಬಂಧಿತರಿಂದ 6.5 ಲಕ್ಷ ರೂ. ಮೌಲ್ಯದ 150 ಗ್ರಾಂ ಚಿನ್ನಾಭರಣ & 148 ಗ್ರಾಂ ಬೆಳ್ಳಿಯನ್ನು ಜಪ್ತಿ ಮಾಡಿದ್ದಾರೆ.

ಪೂರ್ತಿ ಏರಿಯಾ ವಾಚ್: ಈ ತಿಂಗಳು ಅಕ್ಟೋಬರ್ 6 ರಂದು ಇಬ್ಬರು ಆರೋಪಿಗಳು ಮನೆಗಳ್ಳತನ ಮಾಡಿದ್ದರು. ಮನೆ ಕಿಟಕಿಯಲ್ಲಿಟ್ಟಿದ್ದ ಕೀ ಬಳಸಿ ಈ ಕೃತ್ಯ ಎಸಗುತ್ತಿದ್ದರು. ಈ ಕೆಲಸಕ್ಕೆ ಇಳಿಯುವ ಮುನ್ನ ಕಿಲಾಡಿ ಜೋಡಿ ಪೂರ್ತಿ ಏರಿಯಾ ವಾಚ್ ಮಾಡಿದ್ದರು. ಬಳಿಕ ಬೀಗ ಹಾಕಿದ ಮನೆಗಳ ಸುತ್ತ ಹುಡುಕಾಟ ನಡೆಸಿದ್ದರು.

ಕಿಟಕಿ, ಫ್ಲವರ್ ಪಾಟ್​ನಲ್ಲಿ ಇಟ್ಟ ಕೀ ಸಿಕ್ಕರೆ ಕಳ್ಳತನಕ್ಕೆ ಇಳಿಯುತ್ತಿದ್ದರು. ಈ ಮಾದರಿಯಲ್ಲಿ ಮನೆಗಳ ಕಳ್ಳತನಕ್ಕೆ ಕೈ ಹಾಕಿದ್ದ ಆರೋಪಿಗಳನ್ನು ಬಂಧಿಸಿರುವ ಪೊಲೀಸ್ ಸಿಬ್ಬಂದಿ ಕೆ. ಪಿ‌ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಓದಿ: ವಿಜಯಪುರದಲ್ಲಿ ಅಕ್ರಮ ಮದ್ಯ ಸಾಗಾಟ : 10 ಲಕ್ಷ ರೂ. ಮೌಲ್ಯದ ಮದ್ಯ ವಶ, ನಾಲ್ವರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.