ETV Bharat / state

ಸಿಎಂ ಮನೆ ಮುಂದೆ ಕಾನ್ಸ್​ಟೇಬಲ್​ಗಳಿಂದ ಗಾಂಜಾ ಮಾರಾಟ : ಇನ್ಸ್​ಪೆಕ್ಟರ್, ಸಬ್ ಇನ್ಸ್​ಪೆಕ್ಟರ್ ಅಮಾನತು - constables deputed for security at CM residence arrest

ಜನವರಿ 13ರಂದು ಸಿಎಂ ಮನೆ ಮುಂದೆ ಭದ್ರತೆಗೆ ನಿಯೋಜನೆಯಾಗಿದ್ದ ಕೋರಮಂಗಲ ಪೊಲೀಸ್ ಠಾಣೆಯ ಕಾನ್ಸ್​ಟೇಬಲ್​ಗಳಾದ ಸಂತೋಷ್‌ ಕುಮಾರ್ ಹಾಗೂ ಶಿವಕುಮಾರ್ ಎಂಬುವರನ್ನು ಬಂಧಿಸಲಾಗಿತ್ತು. ಆರ್.ಟಿ.ನಗರದ 80ನೇ ಅಡಿ ರಸ್ತೆಯಲ್ಲಿ ಗಾಂಜಾ ಮಾರಾಟ ಆರೋಪದಡಿ ಈ ಇಬ್ಬರು ಕಾನ್ಸ್​ಟೇಬಲ್​ಗಳು ಸೇರಿ ಐವರ ಬಂಧನವಾಗಿತ್ತು..

Two police officers suspended in constables Marijuana sell case
ಸಿಎಂ ಮನೆ ಮುಂದೆ ಗಾಂಜಾ ಮಾರಾಟ ಪ್ರಕರಣ
author img

By

Published : Jan 19, 2022, 5:14 PM IST

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿವಾಸದ ಮುಂದಿನ‌ ರಸ್ತೆಯಲ್ಲಿ ಇಬ್ಬರು ಕಾನ್ಸ್​ಟೇಬಲ್‌ ಗಾಂಜಾ ಮಾರಾಟ ಪ್ರಕರಣ ಸಂಬಂಧ‌ ಆರ್.ಟಿ.ನಗರ ಇನ್ಸ್​ಪೆಕ್ಟರ್ ಹಾಗೂ ಸಬ್ ಇನ್ಸ್​ಪೆಕ್ಟರ್ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಪ್ರಕರಣದ ಬಗ್ಗೆ ಸಮರ್ಪಕವಾಗಿ ತನಿಖೆ ನಡೆಸಿಲ್ಲ‌ ಎಂದು ಇನ್ಸ್​ಪೆಕ್ಟರ್ ಅಶ್ವತ್ಥ್ ಗೌಡ ಹಾಗೂ ಸಬ್ ಇನ್ಸ್​ಪೆಕ್ಟರ್ ವೀರಭದ್ರಯ್ಯ ಅವರನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ಖಚಿತಪಡಿಸಿವೆ.

ಜನವರಿ 13ರಂದು ಸಿಎಂ ಮನೆ ಮುಂದೆ ಭದ್ರತೆಗೆ ನಿಯೋಜನೆಯಾಗಿದ್ದ ಕೋರಮಂಗಲ ಪೊಲೀಸ್ ಠಾಣೆಯ ಕಾನ್ಸ್​ಟೇಬಲ್​ಗಳಾದ ಸಂತೋಷ್‌ ಕುಮಾರ್ ಹಾಗೂ ಶಿವಕುಮಾರ್ ಎಂಬುವರನ್ನು ಬಂಧಿಸಲಾಗಿತ್ತು. ಆರ್.ಟಿ.ನಗರದ 80ನೇ ಅಡಿ ರಸ್ತೆಯಲ್ಲಿ ಗಾಂಜಾ ಮಾರಾಟ ಆರೋಪದಡಿ ಈ ಇಬ್ಬರು ಕಾನ್ಸ್​ಟೇಬಲ್​ಗಳು ಸೇರಿ ಐವರ ಬಂಧನವಾಗಿತ್ತು.

two-police-officers-suspended-in-constables-marijuana-selling-case
ಬಂಧಿತರಾಗಿದ್ದ ಕಾನ್ಸ್​ಟೇಬಲ್​ಗಳು

ಡ್ರಗ್ಸ್ ಡೀಲ್ಲ್​ನಲ್ಲಿ ಭಾಗಿಯಾಗಿದ್ದ ಸಿಬ್ಬಂದಿಯ ಪೂರ್ವಾಪರ ಪರಿಶೀಲಿಸದೆ ಸಿಎಂ ನಿವಾಸಕ್ಕೆ ನಿಯೋಜಿಸಿದ್ದ ಕಾರಣ ಆಗ್ನೇಯ ವಲಯ ಡಿಸಿಪಿ ಶ್ರೀನಾಥ್ ಜೋಶಿ ಹಾಗೂ ಸಿಎಂ ನಿವಾಸದ ಭದ್ರತೆ ಮತ್ತು ನಿಯೋಜಿತ ಸಿಬ್ಬಂದಿ ಮೇಲೆ ನಿಗಾ ಇರಿಸುವುದು ಹಾಗೂ ಸರಿಯಾದ ರೀತಿ ಭದ್ರತೆ ನೀಡದ ಕಾರಣ ವಿಐಪಿ ಡಿಸಿಪಿ ಮಂಜುನಾಥ್ ಬಾಬು ಅವರಿಗೂ ನಗರ ಪೊಲೀಸ್ ಆಯುಕ್ತರಾದ ಕಮಲ್ ಪಂತ್ ಮೆಮೊ ನೀಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ನೀರಿನ ಸಂಪ್‌ ಸ್ವಚ್ಛಗೊಳಿಸುವಾಗ ದುರಂತ.. ಬೆಂಗಳೂರಲ್ಲಿ ತಂದೆ-ಮಗ ದಾರುಣ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.