ETV Bharat / state

ಪೊಲೀಸರ ಮಿಂಚಿನ ಕಾರ್ಯಾಚರಣೆ: ಹಲವು ಪ್ರಕರಣಗಳಲ್ಲಿ ಭಾಗಿಯಾದ ಮೂವರು ಅಂದರ್​

ಆಗ್ನೇಯ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಹಾಗೂ ವಿವಿಧ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುದ್ದಗುಂಟೆಪಾಳ್ಯದಲ್ಲಿ ಖಚಿತ ಮಾಹಿತಿ ಮೇರೆಗೆ ವ್ಯಕ್ತಿಯನ್ನು ಬಂಧಿಸಿ 30 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ ಪಡೆದಿದ್ದಾರೆ.

Ashwin alias Saifuddin
ಅಶ್ವಿನ್ ಅಲಿಯಾಸ್ ಸೈಫುದ್ದೀನ್
author img

By

Published : Oct 8, 2020, 1:07 PM IST

ಬೆಂಗಳೂರು: ಆಗ್ನೇಯ ವಿಭಾಗದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಕೋರಮಂಗಲ, ಹೆಚ್​​​​​​ಎಸ್​​​ಆರ್ ಲೇಔಟ್, ಸುದ್ದಗುಂಟೆಪಾಳ್ಯ ಸೇರಿದಂತೆ ಮೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಪ್ರಕರಣಗಳ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ನಗರದಲ್ಲಿ ಗಾಂಜಾ ದಂಧೆಕೋರರ ವಿರುದ್ಧ ಸಮರ ಸಾರಿರುವ ಪೊಲೀಸರು ಗಾಂಜಾ ಮಾರುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಅಶ್ವಿನ್ ಅಲಿಯಾಸ್ ಸೈಫುದ್ದೀನ್ ಬಂಧಿತ ಆರೋಪಿಯಾಗಿದ್ದು, ಸುದ್ದಗುಂಟೆಪಾಳ್ಯ ಪೊಲೀಸರು ಆತನಿಂದ 10 ಲಕ್ಷ ರೂ. ಬೆಲೆಯ 30 ಕೆ.ಜಿ 700 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಈತ ಮಂಗಳೂರಿನಿಂದ ಬೆಂಗಳೂರಿಗೆ ಗಾಂಜಾ ತಂದು, ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಟೆಕ್ಕಿಗಳಿಗೆ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಬಿ.ಜಿ ರಸ್ತೆಯಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಕಾರ್ಯಾಚರಣೆ ಕುರಿತು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹಾದೇವ್ ಜೋಷಿ ಮಾಹಿತಿ

ಇದಲ್ಲದೆ ಲಾಕ್​​​ಡೌನ್ ಜಾರಿಯಾದಾಗ ಸೈಲೆಂಟಾಗಿದ್ದ ಗ್ಯಾಂಗ್ ಸದ್ಯ ‌ಮತ್ತೆ ಬಾಲ ಬಿಚ್ಚಿ, ಕೋರಮಂಗಲದ ಬಳಿ ನಿಲ್ಲಿಸಿದ ದ್ವಿಚಕ್ರವಾಹನ ಮತ್ತು ಮೊಬೈಲ್ ಕಳ್ಳತನ ಮಾಡುತ್ತಿದ್ದ, ಈ ಮಾಹಿತಿ ಮೇರೆಗೆ ಮೊಹಮ್ಮದ್ ಅರ್ಬಾಜ್ ಖಾನ್ ಎಂಬಾತನನ್ನು ಬಂಧಿಸಿ 25 ಮೊಬೈಲ್ ಸೇರಿದಂತೆ 6 ಬೈಕ್ ವಶಪಡಿಸಿಕೊಂಡಿದ್ದಾರೆ.

ಹಾಗೆ ಹೆಚ್​​​​​ಎಸ್​​​ಆರ್​​​​ ಲೇಔಟ್ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಮನೆಗಳ್ಳತನ ಮಾಡುತ್ತಿದ್ದ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಕಾರ್ತಿಕ್ ಅಲಿಯಾಸ್ ಪರತಲೇ ಬಂಧಿತ ಆರೋಪಿಯಾಗಿದ್ದು, ಈತನಿಂದ 30 ಲಕ್ಷ ಮೌಲ್ಯದ 740 ಗ್ರಾಂ ಚಿನ್ನ ಜಪ್ತಿ ಮಾಡಿದ್ದಾರೆ.

ಸದ್ಯ ಈ ಬಗ್ಗೆ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹಾದೇವ್ ಜೋಷಿ ಮಾತನಾಡಿ, ಈ ಆರೋಪಿಗಳು ಪದೇ ಪದೇ ಕೃತ್ಯದಲ್ಲಿ ಭಾಗಿಯಾಗ್ತಿದ್ದ ವಿಚಾರ ಬಯಲಾಗಿತ್ತು. ಹೀಗಾಗಿ ಸದ್ಯ ಆರೋಪಿಗಳ ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ‌ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.