ಬೆಂಗಳೂರು: ಸಾಲ ಕೊಟ್ಟ ಹಣವನ್ನ ವಾಪಸ್ ಕೇಳಲು ಹೋದ ಯುವತಿಯನ್ನೇ ನಗ್ನ ಗೊಳಿಸಿರುವ ಅಮಾನವೀಯ ಹೇಯ ಕೃತ್ಯ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಬಾಣಸಾವಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂತ್ರಸ್ತೆ ವಾಸವಾಗಿದ್ದು, ವಿನೋದ್ ಹಾಗೂ ಹರೀಶ್ ಎಬುವವರಿಗೆ ಹಣ ನೀಡಿದ್ದರು. ಇದಾದ ನಂತರ ಸಾಲ ಕೊಟ್ಟ ಹಣವನ್ನ ವಿನೋದ್ ಹಾಗೂ ಹರೀಶ್ ಮನೆಗೆ ಹೋಗಿ ಕೇಳಿದಾಗ ಸಂತ್ರಸ್ತೆಯನ್ನ ಈ ಇಬ್ಬರು ಆರೋಪಿಗಳು ಬಲವಂತವಾಗಿ ಕೂಡಿ ಹಾಕಿ, ನಗ್ನ ಗೊಳಿಸಿದ್ದಾರೆ.

ಅಷ್ಟೇ ಅಲ್ಲದೇ, ಆಕೆಯನ್ನ ಅತ್ಯಾಚಾರ ಮಾಡಲು ಯತ್ನಿಸಿದ್ದಾರೆ ಎನ್ನಲಾಗಿದೆ. ಯುವತಿ ಜೋರಾಗಿ ಕಿರುಚಿಕೊಂಡಾಗ ಸ್ಥಳೀಯರು ಆಕೆಯನ್ನ ರಕ್ಷಿಸಿದ್ದಾರೆ. ಪ್ರಕರಣ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಆರೋಪಿಗಳಿಗೆ ಶೊಧ ಮುಂದುವರೆದಿದೆ.