ETV Bharat / state

ಮಂಡ್ಯದಲ್ಲಿ ನೀರು ಪೂರೈಸುವ ಘಟಕ ಜಲಾವೃತ: ಎರಡು ದಿನ ಬೆಂಗಳೂರಿಗಿಲ್ಲ ಕಾವೇರಿ ನೀರು!

ಎರಡು ದಿನ ಬೆಂಗಳೂರಲ್ಲಿ ಕಾವೇರಿ ನೀರಿನ ಅಭಾವ. ಇಂದು ಮತ್ತು ನಾಳೆ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ.

ಬೆಂಗಳೂರಿಗೆ ಕಾವೇರಿ ನೀರು ವ್ಯತ್ಯಯ
ಬೆಂಗಳೂರಿಗೆ ಕಾವೇರಿ ನೀರು ವ್ಯತ್ಯಯ
author img

By

Published : Sep 5, 2022, 6:37 PM IST

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಇಂದು ಮತ್ತು ನಾಳೆ ನಗರದಲ್ಲಿ ನೀರು ಸರಬರಾಜಿನಲ್ಲಿ ಗಂಭೀರ ವ್ಯತ್ಯಯ ಕಂಡು ಬರಲಿದೆ ಎಂದು ಜಲಮಂಡಳಿ ಮಾಹಿತಿ ನೀಡಿದೆ. ಮಂಡ್ಯ ಜಿಲ್ಲೆಯ ಹಲಗೂರಿನಲ್ಲಿ ಧಾರಾಕಾರ ಮಳೆ ಸುರಿದಿರುವ ಹಿನ್ನೆಲೆಯಲ್ಲಿ ಮಳವಳ್ಳಿ ತಾಲೂಕು ಟಿ ಕೆ ಹಳ್ಳಿಯಲ್ಲಿರುವ ಕಾವೇರಿ ನೀರಿನ ಜಲರೇಚಕ ಯಂತ್ರಾಗಾರ (ಪಂಪ್​ಸ್ಟೇಷನ್) ಜಲಾವೃತಗೊಂಡಿದೆ. ಪರಿಣಾಮ ಬೆಂಗಳೂರಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಏರುಪೇರಾಗಲಿದೆ. ಹೀಗಾಗಿ ಸೆಪ್ಟೆಂಬರ್ 5 ಮತ್ತು 6 ರಂದು ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲ ಮಂಡಳಿ ಮಾಹಿತಿ ನೀಡಿದೆ.

ಎಲ್ಲೆಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ?: ಯಶವಂತಪುರ, ಮಲ್ಲೇಶ್ವರಂ, ಶೇಷಾದ್ರಿಪುರಂ, ಓಕಳಿಪುರ, ಶ್ರೀರಾಂಪುರ, ಮತ್ತಿಕೆರೆ ಸುತ್ತಮುತ್ತಲಿನ ಪ್ರದೇಶ, ಸದಾಶಿವನಗರ, ಪ್ಯಾಲೆಸ್ ಗುಟ್ಟಹಳ್ಳಿ, ಆರ್.ಎಂ.ವಿ. 2ನೇ ಹಂತ. ಆರ್.ಟಿ.ನಗರ, ಜಿ.ಕೆ.ವಿ.ಕೆ, ಸಂಜಯನಗರ, ನ್ಯೂ ಬಿಇಎಲ್ ರಸ್ತೆ, ಹೆಬ್ಬಾಳ, ದಿಣ್ಣೂರು, ಗಂಗಾನಗರ, ಚಿಕ್ಕಪೇಟೆ, ಮಾರ್ಕೆಟ್, ಧರ್ಮರಾಯ ಸ್ವಾಮಿ ದೇವಸ್ಥಾನ, ಅವಿನ್ಯೂ ರಸ್ತೆ, ಮೆಜೆಸ್ಟಿಕ್, ಗಾಂಧಿನಗರ, ಕಸ್ತೂರಿಬಾ ರಸ್ತೆ, ಶಿವಾಜಿ ನಗರ, ದೇವರ ಜೀವನಹಳ್ಳಿ, ಕೋಲ್ಸ್‍ಪಾರ್ಕ್, ಕಾಡುಗೋಡನಹಳ್ಳಿ, ಪಿಳ್ಳಣ್ಣ ಗಾರ್ಡನ್, ಸಗಾಯಿ ಪುರ, ಲಿಂಗರಾಜಪುರಂ, ಟ್ಯಾನರಿ ರಸ್ತೆ ಜಗಜೀವನ್ ಭೀಮಾನಗರ, ಐಟಿಐ ಕಾಲೋನಿ, ಇಂದಿರಾನಗರ 1ನೇ ಹಂತ, ಲಕ್ಷ್ಮೀಪುರ, ಆಂಧ್ರಕಾಲೋನಿ, ಕಲ್ಲಹಳ್ಳಿ, ಹೆಚ್.ಎ.ಎಲ್, ಇಂದಿರಾನಗರ ಸೇವಾಠಾಣೆ, ಹಲಸೂರು, ಓಗಿ ಗಾರ್ಡನ್, ಮರ್ಫಿ ಟೌನ್, ಚಾಮರಾಜಪೇಟೆ, ಶಾಂತಿನಗರ, ಬಿಟಿಎಂ, ಹೆಬ್ಬಾಳ, ಮಹಾಲಕ್ಷ್ಮಿ ಲೇಔಟ್, ವಿಜಯನಗರ, ಗೋವಿಂದ ರಾಜನಗರ, ಪುಲಿಕೇಶಿ ನಗರ, ಶಿವಾಜಿನಗರ, ಸಿವಿ ರಾಮನ್ ನಗರ ಸೇರಿದಂತೆ ಬಹುತೇಕ ಕಡೆ ನೀರು ಎರಡು ದಿನ ಬಂದ್ ಆಗಲಿದೆ ಎಂದು ಜಲಮಂಡಳಿ ತಿಳಿಸಿದೆ.

ಬಸವರಾಜ ಬೊಮ್ಮಾಯಿ ಸ್ಥಳಕ್ಕೆ ದೌಡು: ಇದೇ ಟಿ.ಕೆ.ಹಳ್ಳಿ ಪಂಪ್ ಸ್ಟೇಷನ್​​ನಿಂದಲೇ ಬೆಂಗಳೂರಿಗೆ ಕುಡಿವ ನೀರು ಸರಬರಾಜು ಆಗುತ್ತಿದೆ. ಇದೀಗ ಮೂರನೇ ಮತ್ತು ನಾಲ್ಕನೇ ಘಟಕಗಳ ಯಂತ್ರಾಗಾರಕ್ಕೆ ಹಾನಿಯಾಗಿದ್ದು, ಸ್ಥಳಕ್ಕೆ ದೌಡಾಯಿಸಿರುವ ಅಧಿಕಾರಿಗಳು ದುರಸ್ತಿ ಕಾರ್ಯ ನಡೆಸಿದ್ದಾರೆ. ಇನ್ನು ವಿಚಾರ ತಿಳಿದ ತಕ್ಷಣ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುರ್ತು ಪ್ರವಾಸ ಕೈಗೊಂಡಿದ್ದು, ಟಿ.ಕೆ.ಹಳ್ಳಿಗೆ ಆಗಮಿಸುತ್ತಿದ್ದಾರೆ.

10.15 ಲಕ್ಷ ಮನೆಗಳಿಗೆ ನೀರು ಸರಬರಾಜು: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಜಾಲತಾಣದ ಪ್ರಕಾರ ಬೆಂಗಳೂರಿಗೆ ಕಾವೇರಿಯಿಂದ ಪ್ರತಿದಿನ 1,450 ದಶಲಕ್ಷ ಲೀಟರ್ ನೀರು ಸರಬರಾಜಾಗುತ್ತಿದೆ. 57 ನೆಲಮಟ್ಟದ ಜಲಾಶಯಗಳು ಹಾಗೂ 39 ಓವರ್​ಹೆಡ್​ ಟ್ಯಾಂಕ್​ಗಳು ಇವೆ. ಒಂದು ದಿನಕ್ಕೆ ಸರಾಸರಿ 10.15 ಲಕ್ಷ ಮನೆಗಳಿಗೆ ನೀರು ಸರಬರಾಜಾಗುತ್ತಿದೆ.

(ಇದನ್ನೂ ಓದಿ: ಬೆಂಗಳೂರಿಗೆ ನೀರು ಪೂರೈಸುವ ಘಟಕ ಜಲಾವೃತ : ಮಂಡ್ಯಕ್ಕೆ ಸಿಎಂ ಭೇಟಿ ಸಾಧ್ಯತೆ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.