ETV Bharat / state

ಕರ್ನಾಟಕ - ಭಾರತ್‌ ಗೌರವ್‌ ಕಾಶಿ ದರ್ಶನಕ್ಕೆ ಎರಡು ತಿಂಗಳ ಬ್ರೇಕ್.. ಜನವರಿಯಲ್ಲಿ3ನೇ ಟ್ರಿಪ್‌: ಶಶಿಕಲಾ ಜೊಲ್ಲೆ - begaluru

ಕರ್ನಾಟಕ ಭಾರತ್‌ ಗೌರವ್‌ ಕಾಶಿ ದರ್ಶನ ರೈಲು ಯಾತ್ರೆಯ ಪ್ರಥಮ ಟ್ರಿಪ್‌ನ ಪರಿಶೀಲನೆ ಸಭೆ ನಡೆಸಿದ ಮುಜರಾಯಿ, ಹಜ್‌ ಮತ್ತು ವಕ್ಪ್‌ ಸಚಿವೆ ಶಶಿಕಲಾ ಜೊಲ್ಲೆ ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಎರಡನೇ ಟ್ರಿಪ್‌ನ ಯಾತ್ರಾರ್ಥಿಗಳಿಗೆ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದರು.

Two months break for Bharat Gaurav Kashi Darshan
ಭಾರತ್‌ ಗೌರವ್‌ ಕಾಶಿ ದರ್ಶನಕ್ಕೆ ಎರಡು ತಿಂಗಳ ಬ್ರೇಕ್
author img

By

Published : Nov 23, 2022, 7:01 PM IST

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಉದ್ಘಾಟನೆ ಮಾಡಿದ್ದ ಕರ್ನಾಟಕ ಭಾರತ್‌ ಗೌರವ್‌ ಕಾಶಿ ದರ್ಶನ ರೈಲು ಪ್ರವಾಸಕ್ಕೆ ಎರಡು ತಿಂಗಳ ಬ್ರೇಕ್ ನೀಡಲಾಗುತ್ತಿದೆ. ಉತ್ತರ ಭಾರತದಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿರುವುದರಿಂದ ಡಿಸೆಂಬರ್‌ ತಿಂಗಳ ಬದಲಾಗಿ ಜನವರಿ ತಿಂಗಳಿನಲ್ಲಿ ಮುಂದಿನ ಟ್ರಿಪ್‌ಗಳನ್ನು ನಡೆಸಲು ತೀರ್ಮಾನಿಸಲಾಗಿದೆ ಎಂದು ಮುಜರಾಯಿ, ಹಜ್‌ ಮತ್ತು ವಕ್ಪ್‌ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಕರ್ನಾಟಕ ಭಾರತ್‌ ಗೌರವ್‌ ಕಾಶಿ ದರ್ಶನ ರೈಲು ಯಾತ್ರೆಯ ಪ್ರಥಮ ಟ್ರಿಪ್‌ನ ಪರಿಶೀಲನೆ ಸಭೆ ನಡೆಸಿದ ಸಚಿವೆ ಶಶಿಕಲಾ ಜೊಲ್ಲೆ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಎರಡನೇ ಟ್ರಿಪ್‌ನ ಯಾತ್ರಾರ್ಥಿಗಳಿಗೆ ಆತ್ಮೀಯವಾಗಿ ಬೀಳ್ಕೊಡುಗೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನವರಿ ತಿಂಗಳಲ್ಲಿ ಮೂರನೇ ಟ್ರಿಪ್‌ ಆರಂಭಿಸಲಾಗುತ್ತದೆ ಎಂದರು.

ಉತ್ತರ ಭಾರತದಲ್ಲಿ ಡಿಸೆಂಬರ್‌ ಮತ್ತು ಜನವರಿ ತಿಂಗಳ ಆರಂಭದಲ್ಲಿ ಚಳಿಯ ಪ್ರಮಾಣ ಹೆಚ್ಚಾಗಿರುತ್ತದೆ. ಡಿಸೆಂಬರ್‌ 5 ರ ನಂತರ ಉಷ್ಣಾಂಶವು ರಾತ್ರಿಯ ಹೊತ್ತು 5 ಡಿಗ್ರಿ ಸೆಲ್ಸಿಯಸ್‌ ಗೆ ತಲುಪುತ್ತದೆ.

ಜನವರಿ ತಿಂಗಳಲ್ಲಿ ಕಾಶಿ ದರ್ಶನ: ಇಷ್ಟು ತೀವ್ರ ಚಳಿಯನ್ನು ದಕ್ಷಿಣ ಭಾರತದ ಜನರು ತಡೆದುಕೊಳ್ಳುವುದು ಬಹಳ ಕಷ್ಟ. ಹಾಗೂ ಐಆರ್‌ಸಿಟಿಸಿ ಉತ್ತರ ಭಾರತದ ಕಡೆಯ ತನ್ನ ಎಲ್ಲ ಪ್ರವಾಸಿ ರೈಲುಗಳನ್ನ ದಕ್ಷಿಣ ಮತ್ತು ಪಶ್ಚಿಮ ಭಾರತದ ಕಡೆಗೆ ಮಾರ್ಪಾಡು ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಕಾಶಿ ದರ್ಶನ ರೈಲನ್ನು ಡಿಸೆಂಬರ್‌ ಬದಲಾಗಿ ಜನವರಿ ತಿಂಗಳಲ್ಲಿ ಯೋಜಿಸುವಂತೆ ಐಆರ್‌ಸಿಟಿಸಿ ಅಧಿಕಾರಿಗಳು ಇಲಾಖೆಗೆ ಪತ್ರ ಬರೆದಿದ್ದಾರೆ. ನಮ್ಮ ಯಾತ್ರಾರ್ಥಿಗಳಲ್ಲಿ ಹೆಚ್ಚಿನ ಜನರು ಹಿರಿಯ ನಾಗರೀಕರಿದ್ದು, ಅವರ ಆರೋಗ್ಯದ ದೃಷ್ಟಿಯಿಂದ ಜನವರಿ ತಿಂಗಳ 20 ರ ನಂತರ 3 ನೇ ಟ್ರಿಪ್‌ ಆಯೋಜಿಸಲು ನಿರ್ಧಾರ ಕೈಗೊಳ್ಳಲಾಯಿತು ಎಂದು ತಿಳಿಸಿದರು.

ಕಾಶಿ ದರ್ಶನ ಶೇಕಡಾ 90 ರಷ್ಟು ಹಿರಿಯ ನಾಗರಿಕರು: ಕಾಶಿ ದರ್ಶನ ರೈಲು ಯಾತ್ರೆಯ ಎರಡೂ ಟ್ರಿಪ್‌ಗಳಲ್ಲಿ ಶೇಕಡಾ 90 ರಷ್ಟು ಹಿರಿಯ ನಾಗರಿಕರು ಪಾಲ್ಗೊಂಡಿದ್ದಾರೆ. ಹಲವಾರು ಕುಟುಂಬಗಳು ತಮ್ಮ ಪೋಷಕರನ್ನ ಈ ಕಾಶಿಯಾತ್ರೆಗೆ ಕಳುಹಿಸುತ್ತಿದ್ದಾರೆ. ಎಲ್ಲ ರೀತಿಯ ಸೌಲಭ್ಯಗಳನ್ನು ಒಳಗೊಂಡ ಈ ಯಾತ್ರೆಯ ಅನುಕೂಲವನ್ನು ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳುತ್ತಿರುವುದು ಸಂತಸದ ವಿಷಯ ಎಂದು ಸಚಿವರು ತಿಳಿಸಿದರು.

ಕಾಶಿ ಯಾತ್ರೆಗೆ ಪ್ರತ್ಯೇಕ ಅನುದಾನ:ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಕಾಶಿ ದರ್ಶನ ಸಹಾಯಧನ ಹಾಗೂ ರೈಲು ಯಾತ್ರೆಗೆ ಪ್ರತ್ಯೇಕ ಅನುದಾನವಿದೆ. ಯಾವುದೇ ಇನ್ನಿತರ ಯೋಜನೆಗಳ ಅನುದಾನವನ್ನು ಇದಕ್ಕಾಗಿ ಬಳಸಿಕೊಳ್ಳಲಾಗಿಲ್ಲ. ಕಾಶಿ ಯಾತ್ರೆಗೆ ಯಾವುದೇ ರೀತಿಯ ಹಣಕಾಸಿನ ಕೊರತೆ ಇಲ್ಲ. ರೈಲು ಯಾತ್ರೆ ಯಾವುದೇ ತೊಂದರೆ ಇಲ್ಲದೇ ಮುಂದುವರೆಯಲಿದೆ ಎಂದು ಸಚಿವರ ತಿಳಿಸಿದರು.

ಚಾರ್‌ಧಾಮ್‌ ಮತ್ತು ಮಾನಸ ಸರೋವರ ಯಾತ್ರಾರ್ಥಿಗಳ ಸಹಾಯಧನಕ್ಕೆ ಅರ್ಜಿ: ಚಾರ್‌ಧಾಮ್‌ ಯಾತ್ರೆ ಇತ್ತೀಚಿಗೆ ಮುಗಿದಿದ್ದು, ನಮ್ಮ ಇಲಾಖೆಯ ಕಾಲಾವಧಿಯಂತೆಯೇ ಅರ್ಜಿಗಳನ್ನು ಆಹ್ವಾನಿಸಲಾಗುವುದು. ಅರ್ಜಿಗಳನ್ನು ಆಹ್ವಾನಿಸುವ ಪ್ರಕ್ರಿಯೆ ಯಾವಾಗಲೂ ನವೆಂಬರ್‌ ತಿಂಗಳಲ್ಲಿ ಪ್ರಾರಂಭವಾಗಿ, ಏಪ್ರಿಲ್‌ ತಿಂಗಳವರೆಗೆ ನಡೆಯುತ್ತದೆ. ಈ ಯೋಜನೆಗೂ ಸರಕಾರದ ಸಹಾಯಧನವಿದ್ದು, ಪ್ರಕ್ರಿಯೆಯಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಚಾರ್‌ಧಾಮ್‌ ಯಾತ್ರೆ ಇತ್ತೀಚಿಗೆ ಮುಗಿದಿರುವ ಹಿನ್ನಲೆಯಲ್ಲಿ ಅರ್ಜಿಗಳನ್ನು ಅಹ್ವಾನಿಸುವ ನಿಟ್ಟಿನಲ್ಲಿ ಪ್ರಕ್ರಿಯೆ ಪ್ರಾರಂಭಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಎರಡನೇ ಟ್ರಿಪ್‌ನ ಯಾತ್ರಾರ್ಥಿಗಳಿಗೆ ಸಚಿವರಿಂದ ಆತ್ಮೀಯ ಬೀಳ್ಕೊಡುಗೆ:ಕರ್ನಾಟಕ ಭಾರತ್‌ ಗೌರವ್‌ ಕಾಶಿ ದರ್ಶನ ಯೋಜನೆಯ ಎರಡನೇ ಟ್ರಿಪ್‌ ಇಂದಿನಿಂದ ಪ್ರಾರಂಭವಾಯಿತು. ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಹೊರಟ ಯಾತ್ರಾರ್ಥಿಗಳಿಗೆ ಮಾನ್ಯ ಸಚಿವರ ನೇತೃತ್ವದಲ್ಲಿ ಅದಮ್ಯ ಚೇತನ ಮುಖ್ಯಸ್ಥೆ ಡಾ ತೇಜಸ್ವಿನಿ ಅನಂತಕುಮಾರ್‌, ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಶ್ರೀಮತಿ ತಾರಾ ಅನುರಾಧ ಶುಭ ಹಾರೈಸಿ ಬೀಳ್ಕೊಡುಗೆ ನೀಡಿದರು. ಇಂತಹ ಕಾರ್ಯಕ್ರಮದ ಮೂಲಕ ರಾಜ್ಯ ಸರಕಾರ ಉತ್ತಮ ಕಾರ್ಯನಿರ್ವಹಿಸುತ್ತಿದೆ ಎಂದು ಅತಿಥಿಗಳು ಹರ್ಷ ವ್ಯಕ್ತಪಡಿಸಿದರು.

ಇದನ್ನೂ ಓದಿ:ಬಿಬಿಎಂಪಿಯಿಂದ ವೈಟ್ ಟಾಪಿಂಗ್: ಟೆಂಡರ್ ಶ್ಯೂರ್ ರಸ್ತೆಗಳಾಯ್ತು, ಇದೀಗ ಬೆಂಗಳೂರಲ್ಲಿ "ರ‍್ಯಾಪಿಡ್ ರಸ್ತೆ”

ETV Bharat Logo

Copyright © 2025 Ushodaya Enterprises Pvt. Ltd., All Rights Reserved.