ಬೆಂಗಳೂರು: ಕಟ್ಟಡ ಕಾಂಪೌಂಡ್‌ನ ದುರಸ್ತಿ ಕೆಲಸ ನಡೆಯುತ್ತಿದ್ದಾಗ ಗೋಡೆ ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಘಟನೆ ಭಾರತಿ ನಗರ ಎಂಇಜಿ ಆಫೀಸರ್ಸ್ ಕಾಲೋನಿ ಆವರಣದಲ್ಲಿ ಇಂದು ಸಂಜೆ 6.30ರ ಸುಮಾರಿಗೆ ನಡೆದಿದೆ. ಆಶಮ್ಮ(21) ಹಾಗೂ ಅಕ್ರಮ್ ಉಲ್ ಹಕ್ (22) ಮೃತರು.
ಆಶಮ್ಮ ಚಳ್ಳಕೆರೆ ಮೂಲದವರು. ಅಕ್ರಮ್ ಉಲ್ ಹಕ್ ಪಶ್ಚಿಮ ಬಂಗಾಳದವರು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಆಶಮ್ಮ ಸಾವನ್ನಪ್ಪಿದರೆ, ಅಕ್ರಮ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಾಂಪೌಂಡ್ ಅನ್ನು ಇತ್ತೀಚೆಗಷ್ಟೇ ರಿಪೇರಿ ಮಾಡಲಾಗಿತ್ತು. ಮರ ಇರುವುದರಿಂದ ಮತ್ತೆ ದುರಸ್ತಿ ಕಾರ್ಯ ಮುಂದುವರೆಸಲಾಗಿದೆ.
ಆಶಮ್ಮ ಇತ್ತೀಚೆಗಷ್ಟೆ ಮದುವೆಯಾಗಿದ್ದರು. ವಿಷಯ ತಿಳಿದು ಬಾಣಸವಾಡಿಯಿಂದ ಬೈಕ್ನಲ್ಲಿ ತೆರಳಿದ್ದ ಆಶಮ್ಮ ಅವರ ಪತಿಗೆ ಅಪಘಾತವಾಗಿದ್ದು ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬಸ್ಥರ ದೂರಿನನ್ವಯ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹುಬ್ಬಳ್ಳಿ: ಚಿನ್ನದಾಸೆಗೆ ದೊಡ್ಡಮ್ಮನ ಕೊಲೆಗೈದ ಆರೋಪಿ ಸೆರೆ