ETV Bharat / state

ಬಿಟ್ ಕಾಯಿನ್ ಪ್ರಕರಣಕ್ಕೆ ಪ್ರಭಾವಿಗಳ ಹೆಸರು ತಳುಕು: ಪ್ರಕರಣದ ತನಿಖೆ ನಡೆದರೆ ಯಾರಿಗೆ ಉರುಳು? - Bitcoin case state political major issue

ಬಿಟ್ ಕಾಯಿನ್ ಪ್ರಕರಣ ಸಂಬಂಧ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ವಾಕ್ಸಮರ ನಡೆಯುತ್ತಿದೆ. ಇದೀಗ ಕೇಸ್​ನಲ್ಲಿ ಇಬ್ಬರು ಪ್ರಭಾವಿ ನಾಯಕರ ಹೆಸರು ಕೇಳಿ ಬರುತ್ತಿದ್ದು, ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಉಂಟು ಮಾಡಿದೆ.

Bitcoin case
ಬಿಟ್ ಕಾಯಿನ್ ಪ್ರಕರಣ
author img

By

Published : Nov 5, 2021, 10:02 PM IST

ಬೆಂಗಳೂರು: ಬಿಟ್ ಕಾಯಿನ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನ‌ ಮೂಡಿಸಿದೆ. ಕಾರಣ ಇದರ ಹಿಂದೆ ಕೆಲ ಪ್ರಭಾವಿ ರಾಜಕಾರಣಿಗಳು, ಹಿರಿಯ ನಾಯಕರ ಹೆಸರು ಕೇಳಿ ಬರುತ್ತಿದೆ. ಅದರಲ್ಲೂ ಇಬ್ಬರು ಪ್ರಭಾವಿ ರಾಜಕಾರಣಿಗಳ ಹೆಸರು ತಳುಕು ಹಾಕುತ್ತಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಬಿಟ್ ಕಾಯಿನ್ ಪ್ರಕರಣವನ್ನು ಅಗೆದರೆ ಸಾಕಷ್ಟು ಹುಳುಕುಗಳು, ಪ್ರಭಾವಿಗಳ ಹೆಸರುಗಳು ಬಟಾಬಯಲಾಗಲಿದೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಈ ಪ್ರಕರಣವೀಗ ಪ್ರತಿಪಕ್ಷ ಕಾಂಗ್ರೆಸ್​​​ಗೆ ಸರ್ಕಾರದ ವಿರುದ್ಧ ಹೊಸ ಟೀಕಾಸ್ತ್ರವನ್ನು ನೀಡಿದೆ.

ಕಾಂಗ್ರೆಸ್ ಆರೋಪ:

ಬಿಟ್ ಕಾಯಿನ್ ಪ್ರಕರಣ ವಿಚಾರವಾಗಿ ಕಾಂಗ್ರೆಸ್ ಬಿಜೆಪಿ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಕೇಸ್​ನಲ್ಲಿ ಕೇಳಿ ಬರುತ್ತಿರುವ ಇಬ್ಬರು ಪ್ರಭಾವಿಗಳ ಹೆಸರುಗಳನ್ನು ಬಹಿರಂಗಪಡಿಸುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರಕ್ಕೆ ಸವಾಲು ಹಾಕಿದ್ದು, ಸಿಎಂ ಬೊಮ್ಮಾಯಿಯವರ ಇಡಿ ತನಿಖೆ ಆದೇಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಇಡಿ ತನಿಖೆಗೆ ವಹಿಸಿರುವ ಬಗ್ಗೆ ಆದೇಶದ ಪ್ರತಿ ಬಹಿರಂಗ ಪಡಿಸಬೇಕು. ಪಾರದರ್ಶಕ ತನಿಖೆಗಾಗಿ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತಿರುವ ಕಾಂಗ್ರೆಸ್ ನಾಯಕರು, ಬಿಟ್‌ ಕಾಯಿನ್‌ ವಿಚಾರವನ್ನು ಮುಂದಿನ ಅಧಿವೇಶನದಲ್ಲೂ ಪ್ರಸ್ತಾಪ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.

ಆದರೆ ಕಾಂಗ್ರೆಸ್ ತನ್ನ ಆರೋಪದ ವೇಳೆ ಎಲ್ಲೂ ಹೆಸರು ಬಹಿರಂಗ ಪಡಿಸಲು ಹೋಗಿಲ್ಲ. ಆ ಮೂಲಕ ರಾಜಕೀಯವಾಗಿ ಈ ಪ್ರಕರಣವನ್ನು ಬಳಸಲು ಮುಂದಾಗಿದೆ. ಕೇವಲ ಹಿಟ್‌ ಆಂಡ್ ರನ್ ನಡೆಯನ್ನು ಕಾಂಗ್ರೆಸ್ ಅನುಸರಿಸುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೊಂದು ಗಂಭೀರ ಸ್ವರೂಪದ ಪ್ರಕರಣವಾಗಿದ್ದು, ರಾಷ್ಟ್ರ ರಾಜಕಾರಣದಲ್ಲಿ ತಲ್ಲಣ ಮೂಡಿಸುವ ಸುದ್ದಿಯಾಗಿದೆ. ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವ ಈ ಪ್ರಕರಣದಲ್ಲಿ ಹಲವು ವಿಚಾರಗಳು ಬಹಿರಂಗಗೊಳ್ಳಬೇಕಾಗಿದೆ. ಬಿಟ್‌ ಕಾಯಿನ್ ಹಗರಣದಲ್ಲಿ ಇಬ್ಬರು ಪ್ರಭಾವಿಗಳಿದ್ದರೆ ಅವರು ಯಾರು? ಯಾವ ಪಕ್ಷದವರು ಎಂಬುವುದನ್ನು ಬಹಿರಂಗಪಡಿಸಬೇಕಾಗಿದೆ. ಆದರೆ ಕಾಂಗ್ರೆಸ್ ಈ ವಿಚಾರವಾಗಿ ಮೌನಕ್ಕೆ ಶರಣಾಗಿದ್ದು, ಹೆಸರು ಉಲ್ಲೇಖಿಸದೆ ಆರೋಪಕ್ಕೆ ಸೀಮಿತವಾಗಿದ್ದಾರೆ.

ಬಿಜೆಪಿ ನಾಯಕರ ತಿರುಗೇಟು :

ಈ ಪ್ರಕರಣ ಸಂಬಂಧ ಬಿಜೆಪಿ ನಾಯಕರೂ ತಿರುಗೇಟು ನೀಡುತ್ತಿದ್ದಾರೆ. ಇಬ್ಬರು ಪ್ರಭಾವಿ ರಾಜಕಾರಣಿಗಳೆಂದು ಬಿಜೆಪಿಯತ್ತ ಬೊಟ್ಟು ಮಾಡುತ್ತಿರುವ ಕಾಂಗ್ರೆಸ್​ಗೆ ಸಿಎಂ ಆದಿಯಾಗಿ ಸಚಿವರು ತಿರುಗೇಟು ನೀಡುತ್ತಿದ್ದಾರೆ.

ರಾಜ್ಯದ ತನಿಖಾ ಸಂಸ್ಥೆಗಳು ಪ್ರಕರಣದ ಸಮಗ್ರ ತನಿಖೆ ನಡೆಸಿವೆ. ಇದಾದ ಮೇಲೂ ಪ್ರಕರಣದ ತನಿಖೆಯನ್ನು ನಾವೇ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐಗೆ ವಹಿಸಿದ್ದೇವೆ.‌ ಪ್ರಭಾವಿ ರಾಜಕಾರಣಿಗಳಿದ್ದರೆ ಅವರ ಹೆಸರು ಬಹಿರಂಗ ಪಡಿಸಲಿ ಎಂದು ಸಿಎಂ ಕಾಂಗ್ರೆಸ್​ಗೆ ಸವಾಲು ಹಾಕಿದ್ದಾರೆ. ಪ್ರಕರಣಗಳ ಕುರಿತು ಹೆಚ್ಚಿನ ತನಿಖೆಗೆ 2021ರ ಮಾರ್ಚ್‌ .03ರಂದು ಇಡಿಗೆ ಶಿಫಾರಸು ಮಾಡಲಾಗಿತ್ತು. 2021ರ ಏಪ್ರಿಲ್‌ .28ರಂದು ಸಿಬಿಐ ಇಂಟರ್‌ ಪೋಲ್‌ ಘಟಕಕ್ಕೆ ಶಿಫಾರಸು ಮಾಡಲಾಗಿತ್ತು. ಬಳಿಕ ಅವರು ಕೆಲವು ಸ್ಪಷ್ಟನೆ ಕೋರಿದ್ದರು. ಅವುಗಳನ್ನೂ ಒದಗಿಸಲಾಗಿತ್ತು. ಈಗ ಎರಡೂ ತನಿಖಾ ಸಂಸ್ಥೆಗಳು ತನಿಖೆ ಆರಂಭಿಸಿವೆ ಎಂದು ಸಮಜಾಯಿಷಿ ನೀಡಿದ್ದಾರೆ.

ಭಾರೀ ಸದ್ದು ಮಾಡಿರುವ ಬಿಟ್ ಕಾಯಿನ್ ಪ್ರಕರಣದಲ್ಲಿ ಸಮಗ್ರ ತನಿಖೆ ನಡೆದರೆ ಕಾಂಗ್ರೆಸ್ ನಾಯಕರಿಗೆ ಅದು ತಿರುಗು ಬಾಣವಾಗಲಿದೆ ಎಂದು ಸಿಎಂ ಬಸವರಾಜ ಬೊಮ್ಮಯಿ ಕಾಂಗ್ರೆಸ್​ಗೆ ಎಚ್ಚರಿಕೆ ನೀಡಿದ್ದಾರೆ. ಆ ಮೂಲಕ ಈ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರು ಭಾಗಿಯಾಗಿರುವ ಬಗ್ಗೆನೂ ಪರೋಕ್ಷವಾಗಿ ಆರೋಪಿಸಿದ್ದಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಆಧಾರರಹಿತವಾಗಿ ಆರೋಪ ಮಾಡಬಾರದು. ನಿಮ್ಮ ಬಳಿ ದಾಖಲೆಗಳಿದ್ದರೆ ಸಾಕ್ಷಿ ಸಮೇತ ಮಾತನಾಡಬೇಕೆಂದು ಸವಾಲೆಸೆದಿದ್ದಾರೆ.

2018ರಲ್ಲಿ ಯುಬಿ ಸಿಟಿ ಹೋಟೆಲ್‌ನಲ್ಲಿ ಗಲಾಟೆಯಾದಾಗ ನಲಪಾಡ್ ಮಿತ್ರರ ಜೊತೆ ಶ್ರೀಕೃಷ್ಣ ಸಿಕ್ಕಿಬಿದ್ದಿದ್ದನು. ವಿದ್ವತ್ ಎನ್ನುವವರಿಗೆ ಹೊಡೆದು ಎಲ್ಲರನ್ನು ಬಂಧಿಸಲಾಗಿತ್ತು. ಆಗ ಶ್ರೀಕೃಷ್ಣನನ್ನು ಬಂಧಿಸಿರಲಿಲ್ಲ. ಸರ್ಕಾರ ಉದ್ದೇಶಪೂರ್ವಕವಾಗಿ ಆರೋಪಿಯನ್ನು ಬಿಟ್ಟಿತ್ತು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಆರೋಪಿಸಿದ್ದಾರೆ. 2018ರಲ್ಲಿ ಯುಬಿ ಹೋಟೆಲ್ ಗಲಾಟೆಯಲ್ಲಿ ಬಿಟ್ ಕಾಯಿನ್ ಆರೋಪಿ ಶ್ರೀಕೃಷ್ಣ ಬೆಳಕಿಗೆ ಬಂದಿದ್ದನು. ಆಗ ಸರ್ಕಾರ ಈತನನ್ನು ಯಾಕೆ ಬಂಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.

ಈ ಬಗ್ಗೆ ಯಾಕೆ ವಿಚಾರಣೆ ಮಾಡಿಲ್ಲ ಎನ್ನುವುದನ್ನು ಸಿದ್ದರಾಮಯ್ಯ ಹೇಳಬೇಕು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮಾಜಿ ಶಾಸಕರ ಪುತ್ರ, ಶ್ರೀಕೃಷ್ಣನನ್ನು ಡ್ರಗ್ ಪ್ರಕರಣವೊಂದರಲ್ಲಿ ವಶಕ್ಕೆ ಪಡೆಯಲಾಗಿತ್ತು. ಆಗ ಶ್ರೀಕೃಷ್ಣ ಬಿಟ್ ಕಾಯಿನ್ ಪ್ರಕರಣದ ಬಗ್ಗೆ ಬಾಯಿ ಬಿಟ್ಟಿದ್ದಾನೆ ಎಂದು ಕಾಂಗ್ರೆಸ್ ವಿರುದ್ಧ ಬೊಟ್ಟು ಮಾಡಿದ್ದಾರೆ. ಇಬ್ಬರು ಕಾಂಗ್ರೆಸ್ ಮುಖಂಡರ ಮಕ್ಕಳ ಜೊತೆ ಬಿಟ್ ಕಾಯಿನ್ ಆರೋಪಿ ಇದ್ದಾನೆ. ಸಿದ್ದರಾಮಯ್ಯ ಅವರು ಪ್ರಕರಣದಲ್ಲಿ ಯಾವ್ಯಾವ ರಾಜಕಾರಣಿಗಳ ಮಕ್ಕಳು ಇದ್ದಾರೆ ಎಂದು ಹೇಳಲಿ ಎಂದು ಸವಾಲು ಹಾಕಿದ್ದಾರೆ.

ಒಟ್ಟಿನಲ್ಲಿ ಬಿಟ್ ಕಾಯಿನ್ ಪ್ರಕರಣ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿದ್ದಾರೆ. ಎರಡೂ ಪಕ್ಷಗಳು ಒಬ್ಬರ ಪರಸ್ಪರ ಬೊಟ್ಟು ಮಾಡುತ್ತಿದ್ದಾರೆ. ಸಮಗ್ರ ತನಿಖೆ ನಡೆದರೆ ಮಾತ್ರ ಆ ಪ್ರಭಾವಿ ರಾಜಕಾರಣಿಗಳ ಹೆಸರು ಬಹಿರಂಗವಾಗಲಿದೆ. ಇಲ್ಲವಾದರೆ ಈ ಪ್ರಕರಣ ಕೇವಲ ರಾಜಕೀಯ ಹಗ್ಗ-ಜಗ್ಗಾಟಕ್ಕೆ ಮಾತ್ರ ಸೀಮಿತವಾಗಲಿದೆ.

ಇದನ್ನೂ ಓದಿ: ಲಿವಿಂಗ್ ಟುಗೆದರ್​ಗೆ ವಿವಾಹದ ಯಾವುದೇ ಹಕ್ಕುಗಳೂ ಸಿಗುವುದಿಲ್ಲ: ಮದ್ರಾಸ್ ಹೈಕೋರ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.