ಬೆಂಗಳೂರು: ಮತ್ತೆ ಇಬ್ಬರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ, ಮತ್ತೊಬ್ಬರು ಐಎಎಸ್ ಅಧಿಕಾರಿಗೆ ಹೆಚ್ಚುವರಿ ಹೊಣೆಗಾರಿಕೆ ವಹಿಸಿ ಆದೇಶ ಹೊರಡಿಸಿದೆ. ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ. ಇನ್ನು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಶೇಷ ಆಯುಕ್ತ (ಆಸ್ತಿಗಳು) ಡಾ. ವಿ. ರಾಮ್ ಪ್ರಸಾತ್ ಮನೋಹರ್ ಅವರನ್ನು ಪ್ರವಾಸೋದ್ಯಮ ಇಲಾಖೆ ನಿರ್ದೇಶಕರ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
ಬೆಳಗಾವಿ ವಲಯ ಆಯುಕ್ತ ಎಂ.ಜಿ. ಹಿರೇಮಠ್ ಅವರನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ (ಕೆಆರ್‌ಐಡಿಎಲ್) ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿ ವರ್ಗಾವಣೆ: ಇಂದು ಡಿಸಿಪಿಯೊಬ್ಬರನ್ನು ಕೆಳ ಹಂತದ ಸಿಬ್ಬಂದಿಗೆ ಕಿರುಕುಳ ನೀಡಿದ ಅರೋಪ ಎದುರಿಸುತ್ತಿದ್ದ ಹಿನ್ನೆಲೆ ವಿಧಾನಸೌಧ ಭದ್ರತಾ ವಿಭಾಗದ ಅಶೋಕ ರಾಮಪ್ಪ ಜುಂಜರವಾಡ ಸೇರಿ ಆರು ಮಂದಿ ಪೊಲೀಸ್ ಅಧೀಕ್ಷಕರನ್ನು (ಸಶಸ್ತ್ರ) ರಾಜ್ಯ ಸರ್ಕಾರ ವರ್ಗಾವಣೆ ಮಾಡಲಾಗಿದೆ. ಶಿವರಾಜ್, ಎ.ಮಾರುತಿ, ಅಶೋಕ್ ರಾಮಪ್ಪ ಜುಂಜರವಾಡ, ಚನ್ನವೀರಪ್ಪ ಬಿ ಹಡಪದ್, ಮಹದೇವಪ್ಪ ಮಾರುತಿ ಯಾದವಾಡ ಹಾಗೂ ಪಿ.ಉಮೇಶ್ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿತ್ತು.
ವಿಧಾನಸೌಧ ಭದ್ರತಾ ವಿಭಾಗದ ಡಿಸಿಪಿಯಾಗಿದ್ದ ಅಶೋಕ್ ರಾಮಪ್ಪ ಜುಂಜರವಾಡ ವಿರುದ್ಧ ಕೆಳಹಂತದ ಸಿಬ್ಬಂದಿ ವಿರುದ್ಧ ಕಿರುಕುಳ ನೀಡಿದ ಆರೋಪವಿತ್ತು. ಈ ಸಂಬಂಧ ಸಿಬ್ಬಂದಿಗಳು ದಯಾಮರಣ ಕೋರಿ ರಾಷ್ಟ್ರಪತಿಗೆ ಬರೆದಿರುವ ಪತ್ರ ವೈರಲ್ ಆಗಿತ್ತು. ಅಲ್ಲದೆ ಇದಕ್ಕೂ ಮುನ್ನ ಕಾರು ಚಾಲಕನಿಗೆ ಕಿರುಕುಳ ನೀಡಿದ ಆರೋಪವನ್ನು ಅವರು ಎದುರಿಸಿದ್ದರು.
ಇದನ್ನೂಓದಿ:ಮಹಿಳಾ ಕೋಚ್ಗೆ ಲೈಂಗಿಕ ಕಿರುಕುಳ ಆರೋಪ : ಎಸ್‌ಐಟಿಯಿಂದ ಸಚಿವ ಸಂದೀಪ್ ಸಿಂಗ್ ವಿಚಾರಣೆ