ಬೆಂಗಳೂರು: ಅಸಲಿ ಅಭ್ಯರ್ಥಿಗಳ ಸೋಗಿನಲ್ಲಿ ನರ್ಸಿಂಗ್ ಪರೀಕ್ಷೆ ಬರೆಯುತ್ತಿದ್ದ ಇಬ್ಬರು ನಕಲಿ ಮಹಿಳಾ ಅಭ್ಯರ್ಥಿಗಳನ್ನು ಹನುಮಂತನಗರ ಪೊಲೀಸರು ಬಂಧಿಸಿದ್ದಾರೆ.
ನೀಲಂ ವಾಂಕರ್ ಹಾಗೂ ಎಲ್ಸಿ ಬಂಧಿತರು. ಗುಜರಾತ್ ಮೂಲದ ಇಬ್ಬರು ನಗರದಲ್ಲಿ ವಾಸವಾಗಿದ್ದರು. ಹನುಮಂತನಗರದ ಶ್ರೀ ಭವಾನಿ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ನಡೆಯುತ್ತಿದ್ದ ನರ್ಸಿಂಗ್ ಪರೀಕ್ಷೆಗೆ ಅದೇ ಕಾಲೇಜಿನಲ್ಲಿ ಮನೀಶ್ ಡೇರಿಯಾ ಹಾಗೂ ನಟೂರಿಯಾ ಸುಮೈಯಾ ಎಂಬುವರು ಹಾಜರಾಗಬೇಕಿತ್ತು.
ಆದರೆ, ಇವರ ಬದಲಿಗೆ ನಕಲಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಎಂಟ್ರಿ ಕೊಟ್ಟು ಪರೀಕ್ಷೆ ಬರೆಯುವಾಗ ಪರೀಕ್ಷಾ ಮೇಲ್ವಿಚಾರಕಿ ಚಂದ್ರಕಲಾ ಎಂಬುವರಿಗೆ ಸಿಕ್ಕಿಬಿದ್ದಿದ್ದಾರೆ. ಈಕೆಯ ದೂರಿನ ಮೇರೆಗೆ ಹನುಮಂತ ನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಓದಿ: ಲಾಭವಿಲ್ಲದೆ ಕೋಡಿಹಳ್ಳಿ ಯಾವ ಕೆಲಸವನ್ನೂ ಮಾಡಲ್ಲ: ರೈತ ಮುಖಂಡ ಸುಭಾಷ್ ಐಕೂರ