ಬೆಂಗಳೂರು: ಅಳಿವಿನಂಚಿನಲ್ಲಿರುವ ಕಪ್ಪು ತಲೆಯ ಮ್ಯೂನಿಯಾ ಪಕ್ಷಿಗಳನ್ನ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪವನ್ (27) ಹಾಗೂ ಪ್ರಕಾಶ್ (22) ಬಂಧಿತರು. ಭುವನೇಶ್ವರಿ ನಗರದ ಆಂಧ್ರ - ಚಿತ್ತೂರು ಬಸ್ ನಿಲ್ದಾಣದ ಬಳಿ ಆರೋಪಿಗಳು ಪಕ್ಷಿಗಳನ್ನ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವೇಳೆ ದಾಳಿ ನಡೆಸಿದ ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರ ತಂಡ ಆರೋಪಿಗಳನ್ನ ಬಂಧಿಸಿದೆ. ಜೊತೆಗೆ ಬಂಧಿತರಿಂದ 36 ಮ್ಯೂನಿಯಾ ಪಕ್ಷಿಗಳನ್ನ ವಶಕ್ಕೆ ಪಡೆಯಲಾಗಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ: ಮತ ಎಣಿಕೆಗೂ ಮುನ್ನ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಾಯಕರು..