ETV Bharat / state

ಚಿಕನ್​ ರೋಲ್ ತಂದ ಆಪತ್ತು.. ಹೋಟೆಲ್​ ಹುಡುಗರ ರೂಂಗೆ ಬೆಂಕಿ ಹಚ್ಚಿದ ಇಬ್ಬರು ಖಾಕಿ ಬಲೆಗೆ! - ಈಟಿವಿ ಭಾರತ ಕನ್ನಡ

ಪ್ರಕರಣ ದಾಖಲಿಸಿಕೊಂಡಿರುವ ಹನುಮಂತನಗರ ಪೊಲೀಸರು ದೇವರಾಜ್ ಹಾಗೂ ಗಣೇಶ್ ಎಂಬುವರನ್ನು ಬಂಧಿಸಿದ್ದಾರೆ.

two-arrested-for-setting-fire-to-hotel-boys-room
ಚಿಕನ್​ ರೋಲ್ ತಂದಿತು ಆಪತ್ತು.... ಹೋಟೆಲ್​ ಹುಡುಗರ ರೂಂಗೆ ಬೆಂಕಿ ಹಚ್ಚಿದ ಇಬ್ಬರು ಖಾಕಿ ಬಲೆಗೆ!
author img

By

Published : Dec 13, 2022, 3:43 PM IST

ಬೆಂಗಳೂರು: ಚಿಕನ್ ರೋಲ್ ಕೊಟ್ಟಿಲ್ಲ ಎಂದು ಹೋಟೆಲ್ ಹುಡುಗರಿದ್ದ ರೂಂಗೆ ಬೆಂಕಿ ಇಟ್ಟಿರುವ ಆರೋಪದಡಿ ಇಬ್ಬರನ್ನು ಹನುಮಂತ ನಗರ ಪೊಲೀಸರು ಬಂಧಿಸಿದ್ದಾರೆ.

ಹನುಮಂತನಗರ ಠಾಣಾ ವ್ಯಾಪ್ತಿಯಲ್ಲಿರುವ ಕುಮಾರ್ ಹೋಟೆಲ್​ಗೆ ನಿನ್ನೆ ತಡರಾತ್ರಿ ಚಿಕನ್ ರೋಲ್​​ಗೆ ಎಂದು​ ದೇವರಾಜ್ ಮತ್ತು ಆತನ ಸಂಗಡಿಗರು ಬಂದಿದ್ದಾರೆ. ಹೊಟೇಲ್ ಮುಚ್ಚುವ ಸಮಯವಾಗಿದ್ದರಿಂದ ಚಿಕನ್ ರೋಲ್ ಇಲ್ಲ. ಈಗಾಗಲೇ ಲೇಟ್​ ಆಗಿದೆ. ಅಂಗಡಿ ಕ್ಲೋಸ್​ ಮಾಡುತ್ತಿದ್ದೇವೆ ಎಂದು ಹೊಟೇಲ್ ಸಿಬ್ಬಂದಿ ಹೇಳಿದ್ದಾನೆ.

ಇದರಿಂದ ಕುಪಿತಗೊಂಡ ದೇವರಾಜ್ ಮತ್ತು ಸಹಚರರು ಹೋಟೆಲ್ ಸಿಬ್ಬಂದಿ ಜೊತೆ ಗಲಾಟೆ ಮಾಡಿದ್ದಾರೆ. ಈ ವೇಳೆ ಕುಡಿದ ಅಮಲಿನಲ್ಲಿದ್ದ ಮೂವರನ್ನು ಹೋಟೆಲ್ ಸಿಬ್ಬಂದಿ ಥಳಿಸಿ ಕಳುಹಿಸಿದ್ದಾರೆ. ಏಟು ತಿಂದ ಬಳಿಕ ದೇವರಾಜ್ ಟೀಂ ದೇವೇಗೌಡ ಪೆಟ್ರೋಲ್ ಬಂಕ್​ಗೆ ತೆರಳಿ, ಅಲ್ಲಿಂದ ಎರಡು ಲೀಟರ್​ ಪೆಟ್ರೋಲ್ ಖರೀದಿಸಿದ್ದಾರೆ.

ಅಲ್ಲಿಂದ ಸೀದಾ ಕುಮಾರ್ ಹೋಟೆಲ್ ಪಕ್ಕದಲ್ಲೇ ಇರುವ ಹೋಟೆಲ್‌ ಸಿಬ್ಬಂದಿಯ ರೂಂಗೆ ಬೆಂಕಿಯಿಟ್ಟಿದ್ದಾರೆ. ಮನೆಯ ಬಾಗಿಲು ಮತ್ತು ಕಿಟಕಿಗೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಎಸ್ಕೇಪ್ ಆಗಿದ್ದಾರೆ. ಅದೃಷ್ಟವಶಾತ್ ಮನೆಯಲ್ಲಿ ವಾಸವಿದ್ದ ಹೋಟೆಲ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ‌.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹನುಮಂತನಗರ ಪೊಲೀಸರು ದೇವರಾಜ್ ಹಾಗೂ ಗಣೇಶ್ ಎಂಬುವರನ್ನು ಬಂಧಿಸಿ ಮತ್ತೋರ್ವನಿಗಾಗಿ ಶೋಧ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಮನೆಯೊಳಗೆ ನುಗ್ಗಲೆತ್ನಿಸಿದ ಕಳ್ಳ; ಕಾಲಿಗೆ ಗುಂಡು ಹೊಡೆದ ಮನೆ ಮಾಲೀಕ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.