ಬೆಂಗಳೂರು: ಫಾರಿನ್ ಪೋಸ್ಟ್ ಆಫೀಸ್ನಲ್ಲಿ ಬಟ್ಟೆಯಲ್ಲಿ ಮಾದಕ ವಸ್ತುಗಳನ್ನ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಎನ್ಸಿಬಿ ಅಧಿಕಾರಿಗಳು ಹೆಡೆಮುರಿ ಕಟ್ಟಿದ್ದಾರೆ.
ರಾಮ್ಲಾ ಷಡಾಫಿ ಹಾಗೂ ಇಮ್ಯಾನ್ಯುವಲ್ ಮೈಕಲ್ ಬಂಧಿತರು. ಈ ಆರೋಪಿಗಳು ನೆದರ್ ಲ್ಯಾಂಡ್ನಿಂದ ಬೆಂಗಳೂರಿಗೆ ಮಾದಕ ವಸ್ತುಗಳನ್ನ ಸಾಗಿಸುತ್ತಿದ್ದರು ಎನ್ನಲಾಗ್ತಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಎನ್ಸಿಬಿ ಅಧಿಕಾರಿಗಳು ದಾಳಿ ಮಾಡಿ ಆರೋಪಿಗಳನ್ನ ಖೆಡ್ಡಾಕ್ಕೆ ಕೆಡವಿದ್ದಾರೆ. ಬಂಧಿತರಿಂದ 3 ಸಾವಿರ ಮಾತ್ರೆಗಳು ಹಾಗೂ 240 ಗ್ರಾಂ ಕೊಕೇನ್ ಜಪ್ತಿ ಮಾಡಿದ್ದಾರೆ.
ಓದಿ: 3 ತಿಂಗಳು ಬಂಧಿಯಾಗಿದ್ದ ಅಮಾಯಕ: ಗಾಂಜಾ ಅಮಲಿನಲ್ಲಿ ಯುವಕನ ದರ್ಪ
ಸದ್ಯ ಆರೋಪಿಗಳನ್ನ ವಶಕ್ಕೆ ಪಡೆದ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.