ಬೆಂಗಳೂರು: ರಾಜ್ಯ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಸುದೀರ್ಘ ಟ್ವೀಟ್ ವಾರ್ ನಡೆದಿದೆ.
ಕಾಂಗ್ರೆಸ್ ಪಕ್ಷ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿದ್ದ ಹೇಳಿಕೆಯನ್ನು ಟ್ವೀಟ್ ಮಾಡಿ, ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾಗಾಂಧಿ, ಹಾಗೂ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ನಾಯಕತ್ವ, ಪಕ್ಷದ ಸಿದ್ಧಾಂತದಲ್ಲಿ ನಂಬಿಕೆ ಇರುವವರನ್ನ ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು. ರಾಷ್ಟ್ರ, ರಾಜ್ಯದಲ್ಲಿ ಜನರು ಬದಲಾವಣೆ ಬಯಸುತ್ತಿದ್ದಾರೆ. ಹಾಗಾಗಿ ಹಿರಿಯ ನಾಯಕರು ಸೇರಿದಂತೆ ಪಂಚಾಯ್ತಿ ಮಟ್ಟದವರೆಗೆ ಯಾರೇ ಪಕ್ಷಕ್ಕೆ ಸೇರಲು ಬಯಸಿದರೆ ಅವಕಾಶ ನೀಡಲಾಗುತ್ತದೆ ಎಂದಿತ್ತು.ಇದಕ್ಕೆ ಪ್ರತಿಯಾಗಿ ಟ್ವೀಟ್ ಮೂಲಕ ಲೇವಡಿ ಮಾಡಿದ್ದ ಬಿಜೆಪಿ, ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಗೊಂದಲವೇ ಬಗೆಹರಿದಿಲ್ಲ. ನಕಲಿ ಗಾಂಧಿ ಕುಟುಂಬವನ್ನು ಪ್ರಶ್ನಿಸಿದವರಿಗೆ ನೋಟಿಸ್ ನೀಡಲಾಗುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ಸಿದ್ಧಾಂತವೆಂಬುದಿಲ್ಲ, ನಕಲಿ ಗಾಂಧಿ ಕುಟುಂಬದ ಮಾತೇ ವೇದ ವಾಕ್ಯ! ಎಂದು ಹೇಳಿತ್ತು.
ಇದಕ್ಕೆ ಖಾರವಾಗಿ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್, ಅಯ್ಯೋ ರಾಜ್ಯ ಬಿಜೆಪಿ ನಾಯಕರೇ ಮುಖ್ಯಮಂತ್ರಿ ಬಿ,ಎಸ್. ಯಡಿಯೂರಪ್ಪನವರ ಕುಟುಂಬ ಹಸ್ತಕ್ಷೇಪದ ವಿಜಯೇಂದ್ರ ಸರ್ವಿಸ್ ಟ್ಯಾಕ್ಸ್ ಹಗರಣದ ಬಗ್ಗೆ ಎಳೆಎಳೆಯಾಗಿ ವಿವರಿಸಿದ್ದ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರಿಗೆ ನೋಟಿಸ್ ನೀಡಿದ್ದರಲ್ಲ ಸ್ವಾಮಿ ಏನಾಯ್ತು? ಯತ್ನಾಳ್ರನ್ನ ನಿಯಂತ್ರಿಸಲಾಗದ ರಾಜ್ಯ ಬಿಜೆಪಿ ಇತರರ ಬಗ್ಗೆ ಮಾತಾಡುವುದೇ ಹಾಸ್ಯಾಸ್ಪದ! ಎಂದಿತ್ತು.
-
◆ಸಚಿವ ಮಾಧುಸ್ವಾಮಿ ಮಹಿಳೆಗೆ "ರಾಸ್ಕಲ್" ಎಂದು ನಿಂದಿಸಿ ದೌರ್ಜನ್ಯವೆಸಗುತ್ತಾರೆ.
— Karnataka Congress (@INCKarnataka) March 13, 2021 " class="align-text-top noRightClick twitterSection" data="
ಅವರ ವಿರುದ್ಧ ಯಾವುದೇ ಕೇಸ್ ಇಲ್ಲ.
◆ಬಿಜೆಪಿ ಶಾಸಕ ಸಿದ್ದು ಸವದಿ ದಲಿತ ಮಹಿಳೆಗೆ ಹಲ್ಲೆ ನಡೆಸುತ್ತಾರೆ.
ಅವರ ಬಂಧನವಿಲ್ಲ.
ಕಾಂಗ್ರೆಸ್ ಶಾಸಕ ಸಂಗಮೇಶ್ & ಅವರ ಕುಟುಂಬದ ವಿರುದ್ಧ ಸುಳ್ಳು ಕೇಸ್‌ಗಳು.
ಅಧಿಕಾರ ದುರುಪಯೋಗವೆಂದರೆ ಇದೆ#ShivamoggaChalo
">◆ಸಚಿವ ಮಾಧುಸ್ವಾಮಿ ಮಹಿಳೆಗೆ "ರಾಸ್ಕಲ್" ಎಂದು ನಿಂದಿಸಿ ದೌರ್ಜನ್ಯವೆಸಗುತ್ತಾರೆ.
— Karnataka Congress (@INCKarnataka) March 13, 2021
ಅವರ ವಿರುದ್ಧ ಯಾವುದೇ ಕೇಸ್ ಇಲ್ಲ.
◆ಬಿಜೆಪಿ ಶಾಸಕ ಸಿದ್ದು ಸವದಿ ದಲಿತ ಮಹಿಳೆಗೆ ಹಲ್ಲೆ ನಡೆಸುತ್ತಾರೆ.
ಅವರ ಬಂಧನವಿಲ್ಲ.
ಕಾಂಗ್ರೆಸ್ ಶಾಸಕ ಸಂಗಮೇಶ್ & ಅವರ ಕುಟುಂಬದ ವಿರುದ್ಧ ಸುಳ್ಳು ಕೇಸ್‌ಗಳು.
ಅಧಿಕಾರ ದುರುಪಯೋಗವೆಂದರೆ ಇದೆ#ShivamoggaChalo◆ಸಚಿವ ಮಾಧುಸ್ವಾಮಿ ಮಹಿಳೆಗೆ "ರಾಸ್ಕಲ್" ಎಂದು ನಿಂದಿಸಿ ದೌರ್ಜನ್ಯವೆಸಗುತ್ತಾರೆ.
— Karnataka Congress (@INCKarnataka) March 13, 2021
ಅವರ ವಿರುದ್ಧ ಯಾವುದೇ ಕೇಸ್ ಇಲ್ಲ.
◆ಬಿಜೆಪಿ ಶಾಸಕ ಸಿದ್ದು ಸವದಿ ದಲಿತ ಮಹಿಳೆಗೆ ಹಲ್ಲೆ ನಡೆಸುತ್ತಾರೆ.
ಅವರ ಬಂಧನವಿಲ್ಲ.
ಕಾಂಗ್ರೆಸ್ ಶಾಸಕ ಸಂಗಮೇಶ್ & ಅವರ ಕುಟುಂಬದ ವಿರುದ್ಧ ಸುಳ್ಳು ಕೇಸ್‌ಗಳು.
ಅಧಿಕಾರ ದುರುಪಯೋಗವೆಂದರೆ ಇದೆ#ShivamoggaChalo
ಟ್ವೀಟ್ ಪ್ರತಿಕ್ರಿಯೆ ನೀಡಿದ ಬಿಜೆಪಿ, ಸಂಪೂರ್ಣ ಪಕ್ಷವನ್ನೇ ನಕಲಿ ಗಾಂಧಿ ನಾಮಧಾರಿಗಳ ಮನೆಯ ನಿಯಂತ್ರಣಕ್ಕೆ ಕೊಟ್ಟಿರುವ ರಾಜ್ಯ ಕಾಂಗ್ರೆಸ್ ಪಕ್ಷ ಅನ್ಯ ಪಕ್ಷದ ಬಗ್ಗೆ ಮಾತನಾಡುತ್ತಿದೆ. ದೆಹಲಿಯಲ್ಲಿ 23 ನಾಯಕರ ಕದನ, ರಾಜ್ಯದಲ್ಲಿ ಡಿಕೆಶಿ ಮತ್ತು ಸಿದ್ದರಾಮಯ್ಯ ಬಣದ ನಡುವಿನ ಕದನ ತಾರಕ್ಕೇರಿದೆ. ಇದು ಕಾಂಗ್ರೆಸ್ ಮುಕ್ತ ಭಾರತ ಆಗುವ ತನಕ ಮುಂದುವರೆಯುವುದು ಖಚಿತ ಎಂದಿದೆ.
ಕಾಂಗ್ರೆಸ್ ಮತ್ತೇ ಟ್ವೀಟ್ ಮಾಡಿ, ಬಿಜೆಪಿಯಲ್ಲಿ ನರೇಂದ್ರ ಮೋದಿ ಅವರ ಸರ್ವಾಧಿಕಾರಿ ಧೋರಣೆಗೆ ಅಡ್ವಾಣಿ ಮೂಲೆ ಗುಂಪಾದರು. ಗಡ್ಕರಿ ಬುಸುಗುಟ್ಟಿದರು. ರಾಮ್ ಜೆಟ್ಮಲಾನಿ "ರಾಸ್ಕಲ್" ಎಂದರು. ಫೋಟೋದಲ್ಲೂ ಕೂಡ ವಾಜಪೇಯಿ ಮಾಯವಾದರು. ಬಿಜೆಪಿ ಸ್ಥಾಪಕ ಸದಸ್ಯ, ವಾಜಪೇಯಿ ಸಹವರ್ತಿ ಯಶವಂತ್ ಸಿನ್ಹಾ ಬೇಸತ್ತು ಬೇರೆ ಪಕ್ಷ ಸೇರಿದರು. ಬಿಜೆಪಿ ಮುಕ್ತ ಭಾರತ ಮಾಡಲೆಂದೇ ಮೋದಿ ಬಂದಿರುವುದು! ಎಂದಿದೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ, ಕಾಂಗ್ರೆಸ್ ಸರ್ವನಾಶಕ್ಕೆ ಬಿಜೆಪಿ ಬೇಕಿಲ್ಲ! ನಕಲಿ ಗಾಂಧಿ ಕುಟುಂಬದ ನಾಯಕತ್ವವೇ ಸಾಕು! ಕಾಂಗ್ರೆಸ್ ಮುಕ್ತ ಭಾರತ ಮಾಡಲೆಂದೇ ರಾಹುಲ್ ಗಾಂಧಿ ಹುಟ್ಟಿರುವುದು! ಎಂದಿದೆ. ಇದಕ್ಕೆ ಕಾಂಗ್ರೆಸ್ ಆಕ್ರೋಶದ ಪ್ರತಿಕ್ರಿಯೆ ನೀಡಿದ್ದು, ಭಾರತವನ್ನು ಸರ್ವನಾಶ ಮಾಡಲೆಂದೇ ಫೇಕ್ ಪಕೀರ ನರೇಂದ್ರ ಮೋದಿ ಬಂದಿರುವುದು. ಆದರೆ ಅದಕ್ಕೆ ಬೆಲೆ ಏರಿಕೆಯಂತಹ ಜನವಿರೋಧಿ ನೀತಿಗಳಿಂದ ಬೇಸತ್ತ ದೇಶವಾಸಿಗಳು ಅವಕಾಶ ಕೊಡಲಾರರು, ಈಗ ರೈತರು ಬಿಜೆಪಿ ಮುಕ್ತ ಭಾರತ ಮಾಡಲು ಅಡಿ ಇಟ್ಟಿದ್ದಾರೆ. ಹಮ್ ದೋ ಹಮಾರೆ ದೋ ಆಟ ನಡೆಯದು ಎಂದಿದೆ.