ETV Bharat / state

ನಂದಿನಿ ಉತ್ಪನ್ನಗಳಿಗೆ ಕನ್ನಡ ಸಂಸ್ಕೃತಿ ಪರಿಚಯಿಸುವ ಹೆಸರಿಡಿ: ಟಿ.ಎಸ್.ನಾಗಾಭರಣ ಸಲಹೆ - KMF

ಕೆ.ಎಂ.ಎಫ್ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆ ಇಂದು ನಡೆಯಿತು.

TS Nagabharana
TS Nagabharana
author img

By

Published : Aug 25, 2020, 3:45 PM IST

ಬೆಂಗಳೂರು: ನಂದಿನಿ ಉತ್ಪನ್ನಗಳ ಮೇಲೆ ಕನ್ನಡ ಬಳಸುವ ಮೂಲಕ ಕನ್ನಡದ ರಾಯಭಾರಿಯಾಗಿ ಕರ್ನಾಟಕ ಸಹಕಾರಿ ಹಾಲು ಮಹಾ ಮಂಡಳಿಯ ಜವಾಬ್ದಾರಿ ಹೆಚ್ಚಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದರು.

ಕರ್ನಾಟಕ ಸಹಕಾರಿ ಹಾಲು ಮಹಾ ಮಂಡಳಿಯ ನಿಯಮಿತದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ತಮಿಳುನಾಡು, ಆಂಧ್ರಪ್ರದೇಶ, ದಕ್ಷಿಣ ಭಾರತ ಸೇರಿದಂತೆ ಹಲವೆಡೆ ಕೆ.ಎಂ.ಎಫ್‌ ಉತ್ನನ್ನಗಳು ರಫ್ತಾಗುತ್ತಿವೆ. ಈ ಮೂಲಕ ಕನ್ನಡ ಸಂಸ್ಕೃತಿಯನ್ನು ಪರಿಚಯಿಸುವ ಹೆಸರುಗಳನ್ನು ಇಡಬೇಕು. ಇದರಿಂದ ನಂದಿನಿ ಜತೆ ಕನ್ನಡವನ್ನು ಬ್ರಾಂಡ್ ಮಾಡುವಂತೆ ಸಲಹೆ ನೀಡಿದರು.

ದಕ್ಷಿಣ ಭಾರತದ ಅತಿ ದೊಡ್ಡ ಸಂಸ್ಥೆಯಾಗಿರುವ ಕೆ.ಎಂ.ಎಫ್, 130ಕ್ಕೂ ಹೆಚ್ಚು ಹಾಲು ಮತ್ತು ಹಾಲಿನ ಉತ್ಪನ್ನಗಳ ವ್ಯಾಪಾರ ವಹಿವಾಟು ನಡೆಸುತ್ತಿದೆ. ಸಿಂಗಪೂರ್, ಮಲೇಶಿಯಾ ಸೇರಿದಂತೆ ವಿಶ್ವದೆಲ್ಲೆಡೆ ರಫ್ತಾಗುತ್ತಿದೆ. ಹಾಗಾಗಿ ಪ್ರತಿ ಉತ್ಪನ್ನದ ಮೇಲೂ ಕನ್ನಡವನ್ನು ಬಳಸುವ ಹಾಗೂ ಕನ್ನಡದ ವಿಶಿಷ್ಟ ಹೆಸರುಗಳನ್ನು ಇಡುವುದರಿಂದ ಕಸ್ತೂರಿ ಕನ್ನಡದ ಕಂಪನ್ನು ವಿಶ್ವದೆಲ್ಲೆಡೆ ಪಸರಿಸುವ ರಾಯಭಾರಿಯಾಗುವಂತೆ ಸೂಚಿಸಿದರು.

ಕೆಲವು ನಂದಿನಿ ಅಂಗಡಿಗಳ ಹೆಸರು ಇಂಗ್ಲಿಷ್ನಲ್ಲಿರುವ ಬಗ್ಗೆ ಹಾಗೂ ಉತ್ಪನ್ನವೊಂದಕ್ಕೆ ಕನ್ನಡೇತರ ಹೆಸರಾದ “ಚಕ್ಕಿ ಲಾಡು” ಎಂದು ಹೆಸರಿಟ್ಟಿರುವ ಬಗ್ಗೆ ಪ್ರಾಧಿಕಾರಕ್ಕೆ ದೂರುಗಳು ಬಂದಿವೆ. ಈ ಕುರಿತ ಮಾಹಿತಿಯನ್ನು ಆನ್ ಲೈನ್ ನಲ್ಲಿ ಪ್ರದರ್ಶಿಸಿ, ನಮ್ಮ ನೆಲದ ಸಂಸ್ಥೆ, ರೈತರ ಒಡನಾಡಿಯಾದ ಸಂಸ್ಥೆ ಇಂಗ್ಲಿಷ್ ಭಾಷೆಗೆ ಹೆಚ್ಚು ಮಹತ್ವ ನೀಡುವುದು ಎಷ್ಟು ಸರಿ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಿ. ಜತೆಗೆ ಇದಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರದಿಂದ ಕ್ರಮವಹಿಸುವಂತೆ ಪತ್ರ ಬರೆಯಲಾಗಿದೆ ಎಂದರು.

ಈ ಬಗ್ಗೆ ಯಾವ ಅಧಿಕಾರಿ ಅಥವಾ ನೌಕರರ ಬಗ್ಗೆ ಕ್ರಮವಹಿಸಿದ್ದೀರಿ ಎಂಬ ಬಗ್ಗೆ ಸಭೆಗೆ ಮಾಹಿತಿ ನೀಡುವಂತೆ ಕೆ.ಎಂ.ಎಫ್ ನ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದರು.
ಭಾರತದಲ್ಲಿ 2ನೇ ದೊಡ್ಡ ಮಹಾಮಂಡಳವಾಗಿರುವ ಕೆ.ಎಂ.ಎಫ್, ರೈತರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಿದೆ. ಆದರೆ ತಮ್ಮ ಅಧೀನದ ಜಿಲ್ಲಾ ಒಕ್ಕೂಟಗಳ ಜಾಲತಾಣಗಳು ಇಂಗ್ಲಿಷಿನಲ್ಲಿದ್ದು, ಇವುಗಳನ್ನು ಕೂಡಲೇ ರಾಜ್ಯ ಸರ್ಕಾರದ ಆದೇಶದನ್ವಯ ಮಾದರಿ ಜಾಲತಾಣವಾಗಿ ರೂಪಿಸುವಂತೆ ನಿರ್ದೇಶನ ನೀಡಿದರು.

ಕರ್ನಾಟಕ ಸಹಕಾರಿ ಹಾಲು ಮಹಾ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಸಿ.ಸತೀಶ್, ಇನ್ನು ಮುಂದೆ ತಯಾರಾಗುವ ಉತ್ಪನ್ನಗಳ ಮೇಲೆ ಕನ್ನಡವನ್ನು ಬಳಸುವಂತೆ ನಿರ್ದೇಶನ ನೀಡಲಾಗುವುದು ಮತ್ತು ನವೆಂಬರ್ ಒಳಗೆ ಜಾಲತಾಣವನ್ನು ಕನ್ನಡೀಕರಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.