ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮರಗಳ ರಕ್ಷಣೆ ಕುರಿತು ನಿರ್ಲಕ್ಷ್ಯ ವಹಿಸಿ ಪರಿಸರ ತಜ್ಞ ಯಲ್ಲಪ್ಪ ರೆಡ್ಡಿಯವರ ಸಮಿತಿ ನೀಡಿದ ವರದಿಯನ್ನು ನಿರ್ಲಕ್ಷಿಸಿದೆ ಎಂದು 'ಈಟಿವಿ ಭಾರತ್' ವರದಿ ಮಾಡಿತ್ತು. ಇದರಿಂದ ಎಚ್ಚೆತ್ತ ಮೇಯರ್ ಗಂಗಾಂಬಿಕೆ ಯಲ್ಲಪ್ಪ ರೆಡ್ಡಿಯವರನ್ನು ಪಾಲಿಕೆಗೆ ಆಹ್ವಾನಿಸಿ ಸಮಿತಿ ರಚನೆ ಮಾಡಿ ಮರ ಗಣತಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
ನಗರದಲ್ಲಿ ಮರಗಳ ಬಗ್ಗೆ ಮಹಾನಗರ ಪಾಲಿಕೆ ದಿವ್ಯ ನಿರ್ಲಕ್ಷ್ಯ ವಹಿಸುತ್ತಿದ್ದು, ಪ್ರತಿ ವರ್ಷವೂ ಮಳೆಗಾಲಕ್ಕೆ ನೂರಾರೂ ಮರಗಳು ಬುಡಸಮೇತ ಧರೆಗುರುಳಿ ಸಾವು ನೋವು ಸಂಭವಿಸುತ್ತಿದೆ. ಆದರೆ ಈ ಕುರಿತು ಬಿಬಿಎಂಪಿ ಮಾತ್ರ ಯಾವೂದೇ ಕ್ರಮಕ್ಕೆ ಮುಂದಾಗಿರಲಿಲ್ಲ.
ಈ ಕುರಿತಂತೆ ಮರಗಳ ರಕ್ಷಣೆ ಬಗ್ಗೆ 15 ವರ್ಷಗಳ ಹಿಂದೆಯೇ ಪರಿಸರ ತಜ್ಞ ಯಲ್ಲಪ್ಪ ರೆಡ್ಡಿಯವರ ಸಮಿತಿ ನೀಡಿದ ವರದಿಯನ್ನು ನಿರ್ಲಕ್ಷಿಸಲಾಗಿದೆ ಎಂದು 'ಈಟಿವಿ ಭಾರತ್' ವರದಿ ಮಾಡಿತ್ತು. ಈ ವರದಿಯಿಂದ ಎಚ್ಚೆತ್ತ ಬಿಬಿಎಂಪಿ ಈ ಬಾರಿ ಪಾಲಿಕೆಯ ಬಜೆಟ್ನಲ್ಲಿ 2 ಕೋಟಿ ರೂಪಾಯಿ ಮರ ಗಣತಿಗಾಗಿ ಮೀಸಲಿಡಲಾಗಿದೆ. ಯಲ್ಲಪ್ಪ ರೆಡ್ಡಿಯವರನ್ನು ಪಾಲಿಕೆಗೆ ಆಹ್ವಾನಿಸಿ ಸಮಿತಿ ರಚನೆ ಮಾಡಿ ಮರ ಗಣತಿಗೆ ಚಾಲನೆ ನೀಡಲಾಗುವುದು ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.
ಬಿಬಿಎಂಪಿಗೆ ಈವರೆಗೆ ಅನುದಾನದ ಕೊರತೆ ಇತ್ತು. ಹೀಗಾಗಿ ಮರಗಳ ಗಣತಿ, ರಕ್ಷಣೆ, ಬಗ್ಗೆ ಕ್ರಮ ವಹಿಸಿರಲಿಲ್ಲ. ಆದರೆ ಪಾಲಿಕೆಗೂ ಮರಗಳ ಬಗ್ಗೆ ಅಧ್ಯಯನ ನಡೆಸಿರುವ ತಜ್ಞರ ಅವಶ್ಯಕತೆ ಇತ್ತು. ಈಟಿವಿ ಭಾರತ್ ಈ ಬಗ್ಗೆ ಬೆಳಕು ಚೆಲ್ಲಿರೋದ್ರಿಂದ ಯಲ್ಲಪ್ಪ ರೆಡ್ಡಿಯವರು ಹಿಂದೆ ಕೊಟ್ಟ ವರದಿ ಬಗ್ಗೆ ಚರ್ಚಿಸಲಾಗುವುದು. ಅಲ್ಲದೆ ಬಜೆಟ್ ಅನುಮೋದನೆ ಸಿಕ್ಕ ಕೂಡಲೇ ಸಮಿತಿ ರಚಿಸಿ ಮರ ಗಣತಿಗೆ ಆರಂಭಿಸಲಾಗುವುದು ಎಂದರು.