ETV Bharat / state

ನಗರದಲ್ಲಿ ಮೋಡ ಕವಿದ ವಾತಾವರಣ, ತುಂತುರು ಮಳೆ: ವಾಹನ ಸವಾರರು ಮನೆ ಸೇರಲು ದೌಡು - Bengalore Rain news 2021

ಭಾರಿ ಮಳೆಗೆ ಮಲ್ಲೇಶ್ವರಂ, ಮೈಸೂರು ರಸ್ತೆ, ರಾಜಭವನ ರಸ್ತೆ, ಶಿವಾಜಿನಗರ, ರಾಜಾಜಿನಗರ, ಪ್ಯಾಲೆಸ್ ಗುಟ್ಟಹಳ್ಳಿ, ಹಲಸೂರು, ಶಿವಾನಂದ ವೃತ್ತ, ಕೆ. ಆರ್ ಪುರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿದ್ದು ಕಂಡು ಬಂತು.

rain
ಮಳೆ
author img

By

Published : Oct 5, 2021, 9:47 PM IST

ಬೆಂಗಳೂರು: ನಗರದ ಹಲವು ಭಾಗಗಳಲ್ಲಿ ಇಂದು (ಮಂಗಳವಾರ) ಸಂಜೆ 5 ರ ನಂತರ ಮಳೆ ಪ್ರಾರಂಭವಾಯಿತು. ಕೆಲವು ರಸ್ತೆ ಹಾಗೂ ತಗ್ಗುಪ್ರದೇಶಗಳಲ್ಲಿ ನೀರು ನಿಂತು ವಾಹನ ಸವಾರರು ಕೊಂಚ ಪರದಾಡುವಂತಾಯಿತು.

ಹಲವೆಡೆ ಮಳೆ: ನಗರದ ಆರ್. ಆರ್ ನಗರ, ಅಂಜನಪುರ, ಬೇಗೂರು, ಯಲಹಂಕ, ವಿದ್ಯಾರಣ್ಯಪುರ, ಮಹದೇವಪುರ, ಹೊರಮಾವು, ಪ್ಯಾಲೆಸ್ ಗುಟ್ಟಹಳ್ಳಿ, ಮಲ್ಲೇಶ್ವರಂ, ವಿಧಾನಸೌಧ, ಪುಲಕೇಶಿನಗರ, ನಾಗರಬಾವಿ, ಕೋರಮಂಗಲ, ನಾಯಂಡಹಳ್ಳಿ, ಲಕ್ಕಸಂದ್ರ, ವಿದ್ಯಾಪೀಠ, ಕೆಂಗೇರಿ ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ.

ಸದಾಶಿವನಗರ, ಯಶವಂತಪುರ, ಹೂಡಿ, ವಿಶ್ವನಾಥನಾಗೇನಹಳ್ಳಿ, ರಾಮಮೂರ್ತಿನಗರ, ಕಾಡುಗೋಡಿ, ಮನೋರಾಯನಪಾಳ್ಯ, ಹೊರಮಾವು, ಬಸವನಪುರ, ದೊಡ್ಡನೆಕುಂದಿ, ಕೊಟ್ಟಿಗೆಪಾಳ್ಯ, ಬಾಣಸವಾಡಿ, ಚೊಕ್ಕಸಂದ್ರ, ಪೀಣ್ಯ, ವಿದ್ಯಾರಣ್ಯಪುರ, ಅತ್ತೂರು, ಕೆಂಪೇಗೌಡ ವಾರ್ಡ್, ಬಾಗಲಗುಂಟೆ, ದೊಡ್ಡಬೊಮ್ಮಸಂದ್ರ, ಬ್ಯಾಟರಾಯನಪುರ, ಹೆಗ್ಗನಹಳ್ಳಿ, ಕಲ್ಯಾಣನಗರ, ಬೆಳ್ಳಂದೂರು, ಸಿಂಗಸಂದ್ರ ಸೇರಿದಂತೆ ಬಹುತೇಕ ಕಡೆ ಸಾಧಾರಣ ಮಳೆಯಾಗಿದೆ.

ಪ್ರಮುಖ ರಸ್ತೆಗಳಲ್ಲಿ ನೀರು: ಭಾರಿ ಮಳೆಗೆ ಮಲ್ಲೇಶ್ವರಂ, ಮೈಸೂರು ರಸ್ತೆ, ರಾಜಭವನ ರಸ್ತೆ, ಶಿವಾಜಿನಗರ, ರಾಜಾಜಿನಗರ, ಪ್ಯಾಲೆಸ್ ಗುಟ್ಟಹಳ್ಳಿ, ಹಲಸೂರು, ಶಿವಾನಂದ ವೃತ್ತ, ಕೆ.ಆರ್ ಪುರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿದ್ದು ಕಂಡು ಬಂತು. ಪಾಲಿಕೆಯ ವಿವಿಧ ಅಭಿವೃದ್ಧಿ ಕಾಮಗಾರಿ ಸ್ಥಳಗಳಲ್ಲಿ ನೀರು ನಿಂತಿದ್ದ ದೃಶ್ಯ ಕಂಡು ಬಂದಿದ್ದರಿಂದ ಕೆಲ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಯಿತು.

ಓದಿ: Open Book Exam: ಏನಿದು ತೆರೆದ ಪುಸ್ತಕ ಪರೀಕ್ಷೆ? ವಿಟಿಯು ಪರಿಚಯಿಸಲಿರುವ ಈ ಮಾದರಿ ನಮ್ಮ ಶಿಕ್ಷಣ ವ್ಯವಸ್ಥೆಗೆ ಎಷ್ಟು ಪ್ರಸ್ತುತ.!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.