ಬೆಂಗಳೂರು : ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ನಡೆಯುತ್ತಿರುವ ಸಾರಿಗೆ ನೌಕರರ ಪ್ರತಿಭಟನೆ ಇಂದು 5ನೇ ದಿನಕ್ಕೆ ಕಾಲಿಟ್ಟಿದೆ. ಏ.1ರಿಂದ 7ತಾರೀಖಿನವರೆಗೂ ಸಾರಿಗೆ ಕೂಟದಿಂದ ವಿನೂತನ ಧರಣಿ ಮಾಡಬೇಕೆಂದು ಸಾರಿಗೆ ನೌಕರರು ನಿರ್ಧರಿಸಿದ್ದಾರೆ. ಮೊದಲ ದಿನದಿಂದಲೂ ವಿಭಿನ್ನ ರೀತಿನ ಪ್ರತಿಭಟಿಸಿದ್ದಾರೆ.
ರಾಜ್ಯಾದ್ಯಂತ ಕರಪತ್ರಗಳ ಹಂಚುವ ಮೂಲಕ ಸಾರಿಗೆ ನೌಕರರು ಇಂದು ಧರಣಿ ನಡೆಸಿದ್ದಾರೆ. 6ನೇ ವೇತನ ಆಯೋಗ ಜಾರಿ ಮಾಡಿ ಎಂದು ಸಿಬ್ಬಂದಿ ಭಿತ್ತಿಪತ್ರ ಹಂಚಿ, ಈ ಮೂಲಕ ಸರ್ಕಾರಕ್ಕೆ ತಮ್ಮ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು.
ಸಾರಿಗೆ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ಈ ಎಲ್ಲಾ ಪ್ರತಿಭಟನೆ ನಡೆಯುತ್ತಿವೆ. ರಾಜ್ಯದ ನಾನಾ ಭಾಗಗಳಲ್ಲಿ 4 ಸಾರಿಗೆ ನಿಗಮಗಳ ನೌಕರರಿಂದ ಇದೆ ಮಾದರಿ ಇಂದು ಪ್ರತಿಭಟಿಸಲಾಗಿದೆ.
ಇನ್ನು, ಸಾರಿಗೆ ನೌಕರರ ಬೆನ್ನಿಗೆ ನಿಂತ ಆಮ್ ಆದ್ಮಿ ಪಕ್ಷ, ಏಪ್ರಿಲ್ 7ರ ಮುಷ್ಕರಕ್ಕೆ ಬೆಂಬಲ ನೀಡಿದೆ. ಸಾರಿಗೆ ನೌಕರರಿಗೆ 6ನೇ ವೇತನ ಆಯೋಗ ಜಾರಿ ಭರವಸೆ ನೀಡಲಾಗಿತ್ತು. ಆದ್ರೆ, ಸಾರಿಗೆ ಸಚಿವರು ಯಾವುದೇ ಕ್ರಮಕೈಗೊಂಡಿಲ್ಲ.
ಹೀಗಾಗಿ, ಸಾರಿಗೆ ನೌಕರರನ್ನ ಸರ್ಕಾರ ಜೀತದಾಳುಗಳಂತೆ ನೋಡುತ್ತಿದೆ. ಸರ್ಕಾರದ ನೀತಿಯನ್ನ ಆಮ್ ಆದ್ಮಿ ಪಾರ್ಟಿ ಖಂಡಿಸುತ್ತದೆ. ಜೊತೆಗೆ ಏಪ್ರಿಲ್ 7ರ ಮುಷ್ಕರ ಬೆಂಬಲಿಸೋದಾಗಿ ಹೇಳಿಕೆ ಬಿಡುಗಡೆ ಮಾಡಿದೆ.
ಓದಿ: 2ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಪ್ರತಿಭಟನೆ : ಮೆಜೆಸ್ಟಿಕ್‌ನಲ್ಲಿ ಬಜ್ಜಿ, ಬೋಂಡಾ ಮಾರಾಟ