ಬೆಂಗಳೂರು: ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕೆಂದು ಒತ್ತಾಯಿಸಿ ನಡೆದಿರುವ ಮುಷ್ಕರ ಎರಡು ದಿನದಿಂದ ಮುಂದುವರೆದಿದ್ದು, ಇಂದು ನಾಲ್ಕು ಸಾರಿಗೆ ಸೇವೆಗಳ ಸಂಚಾರ ಬಂದ್ ಮಾಡಲಾಗಿತ್ತು.
ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ ಪರಿಣಾಮ ಕೋಲಾರ, ಚಿಕ್ಕಮಗಳೂರು, ಮಂಡ್ಯ, ಮದ್ದೂರು, ಶಿವಮೊಗ್ಗ, ಚಾಮರಾಜನಗರ ಸೇರಿದಂತೆ ಹಲವು ಭಾಗದಲ್ಲಿ ಬಸ್ಗಳು ಜಖಂ ಆಗಿವೆ. ಕೆಎಸ್ಆರ್ಟಿಸಿಯಲ್ಲಿ ಇಂದು ಶೇ. 32ರಷ್ಟು ಮಾತ್ರ ಬಸ್ಸುಗಳು ಕಾರ್ಯಾಚರಣೆ ನಡೆಸಿವೆ.
ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರಿ ನೌಕರರಿಗೆ ಡ್ರೆಸ್ ಕೋಡ್ ಜಾರಿ; ಜೀನ್ಸ್, ಟಿ - ಶರ್ಟ್ ಧರಿಸುವಂತಿಲ್ಲ
ಬಿಎಂಟಿಸಿ ಸಂಪೂರ್ಣ ಬಂದ್ ಆಗಿದ್ದು, ರಾಜ್ಯ ಸಾರಿಗೆ ಹಾಗೂ ನಗರ ಸಾರಿಗೆಯ ಒಟ್ಟು 32 ಬಸ್ಗಳು ಜಖಂಗೊಂಡಿವೆ.
ಜಖಂ ವಿವರ:
ಮುಂಭಾಗದ ದೊಡ್ಡ ಗ್ಲಾಸ್-21 ಬಸ್ಗಳಿಗೆ ಹಾನಿ
ಹಿಂಭಾಗದ ದೊಡ್ಡ ಗ್ಲಾಸ್-5 ಬಸ್ಗಳಿಗೆ ಹಾನಿ
ಕಿಟಕಿ ಗ್ಲಾಸ್-4 ಬಸ್ಗಳಿಗೆ ಹಾನಿ
ಸೈಡ್ ಮಿರರ್-1 ಬಸ್ಗೆ ಹಾನಿ
ಡೂಮ್ ಗ್ಲಾಸ್- 1 ಬಸ್ಗೆ ಹಾನಿ