ETV Bharat / state

2 ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ: ಏಪ್ರಿಲ್ 14 ರ ವರೆಗೆ ವಿಶೇಷ ರೈಲು ಸಂಚಾರ - 6th Pay Commission issued

Transportation Employees Strike
Transportation Employees Strike
author img

By

Published : Apr 8, 2021, 10:02 AM IST

Updated : Apr 8, 2021, 3:55 PM IST

15:51 April 08

bandh
ಆಟೋ ಚಾಲಕರು ಕಂಗಾಲು

ಮುಷ್ಕರದಿಂದ ಪ್ರಯಾಣಿಕರಿಲ್ಲದೇ ಆಟೋ ಚಾಲಕರು ಕೂಡ ಕಂಗಾಲಾಗಿದ್ದಾರೆ. ಮೈಸೂರಿನ ನಗರ ಬಸ್ ನಿಲ್ದಾಣಕ್ಕೆ ಪ್ರಯಾಣಿಕರು ಬಾರದ ಹಿನ್ನೆಲೆ ಆಟೋ ಚಾಲಕರು ಅತಂತ್ರರಾಗಿದ್ದಾರೆ. ಮೈಸೂರು ನಗರ ಬಸ್ ನಿಲ್ದಾಣ, ಕೇಂದ್ರೀಯ ಬಸ್ ನಿಲ್ದಾಣದ ಬಳಿ ಆಟೋಗಳು‌ ಖಾಲಿ ಖಾಲಿಯಾಗಿ ನಿಂತಿವೆ. ದಿನಾಲೂ ಅಂದಾಜು 500ರಿಂದ 600 ರೂ. ಬಾಡಿಗೆ ಪಡೆಯುತ್ತಿದ್ದ ಆಟೋದವರು ಇಂದು ಬೆಳಗ್ಗೆಯಿಂದ 100 ರೂಪಾಯಿ ರೂ. ಕೂಡ ಸಿಗದೆ ಪರದಾಡುವಂತಾಗಿದೆ.

13:28 April 08

ಬಸ್​ಗಾಗಿ ಅಜ್ಜಿಯರ ಪರದಾಟ

ಬಸ್​ಗಾಗಿ ಕಾದು ಕುಳಿತ ಅಜ್ಜಿಯರು
ಬಸ್​ಗಾಗಿ ಕಾದು ಕುಳಿತ ಅಜ್ಜಿಯರು

ಕಲಬುರಗಿ: 2ನೇ ದಿನವೂ ಸಾರಿಗೆ ನೌಕರರ ಮುಷ್ಕರ ಮುಂದುವರೆದಿರುವ ಪರಿಣಾಮ ಕಣ್ಣಿನ ಶಸ್ತ್ರಚಿಕಿತ್ಸೆಗೆಂದು ಬಂದಿದ್ದ ಇಬ್ಬರು ಅಜ್ಜಿಯರು ತೀವ್ರ ಸಂಕಷ್ಟ ಅನುಭವಿಸಿದರು.

ಕಲಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಚಿಂಚೋಳಿಗೆ ಹೋಗಲು ಅಜ್ಜಿಯರು ಪರದಾಟ ನಡೆಸುತಿದ್ದಾರೆ. ಬಸಮ್ಮ ಹಾಗೂ ಮಾರೆಮ್ಮ ಎಂಬುವರು ಕಲಬುರಗಿಯಲ್ಲಿ ನೇತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದು, ಕೇಂದ್ರ ಬಸ್ ನಿಲ್ದಾಣದಿಂದ ಚಿಂಚೋಳಿ ಹೋಗಬೇಕಾಗಿದೆ. ಒಂದಡೆ ಬಸ್ ಇಲ್ಲದೇ, ಇನ್ನೊಂದೆಡೆ ಶಸ್ತ್ರ ಚಿಕಿತ್ಸೆಯಾದ ಕಣ್ಣಿಗೆ ಗಾಳಿ ತಗುಲದಂತೆ ನೋಡಿಕೊಳ್ಳಬೇಕಾದ ಹಿನ್ನೆಲೆ ಇಬ್ಬರು ಅಜ್ಜಿಯರು ಪರದಾಡಿದರು.

13:27 April 08

ಮುಷ್ಕರ ಬಿಟ್ಟು ಸೇವೆಗೆ ಹಾಜರಾಗುವ ಸಿಬ್ಬಂದಿಗೆ ರಕ್ಷಣೆ:

ಗೃಹ ಸಚಿವ ಬಸವರಾಜ್ ಬೊಮ್ಮಾಯಿ
ಗೃಹ ಸಚಿವ ಬಸವರಾಜ್ ಬೊಮ್ಮಾಯಿ

ಬೀದರ್: ಮುಷ್ಕರ ಬಿಟ್ಟು ಸ್ವಯಂ ಪ್ರೇರಣೆಯಿಂದ ಸೇವೆಗೆ ಹಾಜರಾಗುವ ಸಾರಿಗೆ ಸಿಬ್ಬಂದಿಗೆ ಸರ್ಕಾರ ಸೂಕ್ತ ರಕ್ಷಣೆ ನೀಡಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಜಿಲ್ಲೆಯ ಹುಮನಾಬಾದ್ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಯಂಪ್ರೇರಣೆಯಿಂದ ಕರ್ತವ್ಯಕ್ಕೆ ಹಾಜರಾಗುವ ಸಾರಿಗೆ ಸಿಬ್ಬಂದಿಗೆ ಸೂಕ್ತ ಭದ್ರತೆ ಒದಗಿಸಲಾಗುವುದು.‌ ಈ ಸಂಬಂಧ ರಾಜ್ಯದಲ್ಲಿರುವ ನಾಲ್ಕು ಸಾರಿಗೆ ನಿಗಮಗಳ ವ್ಯಾಪ್ತಿಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

12:12 April 08

ಮುಷ್ಕರದಲ್ಲಿ ಭಾಗಿಯಾದ್ರೆ ಹುಷಾರ್:

ಕರಪತ್ರ
ಕರಪತ್ರ

ದಾವಣಗೆರೆ: ಮುಷ್ಕರದಲ್ಲಿ ಭಾಗಿಯಾದ್ರೆ ಹುಷಾರ್ ಎಂದು ದಾವಣಗೆರೆ ಕೆಎಸ್ಆರ್​ಟಿಸಿ ವಿಭಾಗದ ಅಧಿಕಾರಿಗಳು ತರಬೇತಿಯಲ್ಲಿರುವ ನೌಕರರಿಗೆ ಎಚ್ಚರಿಕೆ ಪತ್ರವೊಂದು ಪ್ರಕಟಿಸಿದ್ದಾರೆ.

ತರಬೇತಿ ನೌಕರರು ಮುಷ್ಕರದಲ್ಲಿ ಪಾಲ್ಗೊಂಡರೆ ಕ್ರಮ ಕೈಗೊಳ್ಳುವುದಾಗಿ ದಾವಣಗೆರೆ ವಿಭಾಗದ ಕೆಎಸ್ಆರ್​ಟಿಸಿ ಡಿಸಿ ಯವರು ಎಚ್ಚರಿಕೆ ಪತ್ರವನ್ನು ಹೊರಡಿಸಿದ್ದಾರೆ. ಒಂದು ವೇಳೆ ನೀವು ಮುಷ್ಕರದಲ್ಲಿ ಭಾಗಿಯಾದರೆ ಅವರನ್ನು ತರಬೇತಿ ನೌಕರರ ಆಯ್ಕೆ ಪಟ್ಟಿಯಿಂದ ತೆಗೆದುಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈಗಾಗಲೇ ಕೆಲಸಕ್ಕೆ ಹಾಜರಾಗದ ಸುಮಾರು 40 ಕ್ಕೂ ಹೆಚ್ಚು ತರಬೇತಿ ನೌಕರರಿಗೆ ನೋಟಿಸ್ ನೀಡಲಾಗಿದೆ.

12:11 April 08

ಎಸ್ಕಾರ್ಟ್‌ ಸೇವೆ ಮೂಲಕ ಬಸ್​ ಸಂಚಾರ‌ ಆರಂಭ:

ಪೊಲೀಸ್ ಭದ್ರತೆಯಲ್ಲಿ ಬಸ್​ ಸಂಚಾರ ಪ್ರಾರಂಭ
ಪೊಲೀಸ್ ಭದ್ರತೆಯಲ್ಲಿ ಬಸ್​ ಸಂಚಾರ ಪ್ರಾರಂಭ

ಕಲಬುರಗಿ: ಇಂದು ಸಹ ಜಿಲ್ಲೆಯಲ್ಲಿ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದ್ದು, ಪೊಲೀಸ್ ಎಸ್ಕಾರ್ಟ್‌ನಲ್ಲಿ ಕೆಲ ಸಾರಿಗೆ ಬಸ್​ಗಳ ಸಂಚಾರ‌ ಆರಂಭಿಸಲಾಗಿದೆ.

ಕಲಬುರಗಿ ಕೇಂದ್ರ ಬಸ್ ನಿಲ್ದಾಣದಿಂದ ಬಸ್​ಗಳನ್ನು ಪೊಲೀಸ್ ಭದ್ರತೆಯಲ್ಲಿ ಕಳುಹಿಸಿ ಕೊಡಲಾಗುತ್ತಿದೆ.‌ ಬಸ್‌ಗಳು ನಗರದಿಂದ ಹೊರಗೆ ಹೋಗುವವರೆಗೆ ನಗರ ಪೊಲೀಸರು ಭದ್ರತೆ ನೀಡುತ್ತಿದ್ದಾರೆ.  ಈಗಾಗಲೇ ಜೇವರ್ಗಿ, ಸೇಡಂ ಸೇರಿದಂತೆ ಇತರೆ ತಾಲೂಕುಗಳತ್ತ ಬಸ್ ಕಳುಹಿಸಲಾಗಿದೆ. 

12:10 April 08

ಕಾರ್ಯನಿರ್ವಹಿಸುತ್ತಿದ್ದ ಚಾಲಕ ಹೃದಯಾಘಾತದಿಂದ ಸಾವು:

ಎಸ್.ಬಿ. ಪತ್ರೇಗೌಡ
ಎಸ್.ಬಿ. ಪತ್ರೇಗೌಡ

ಹೊಸಪೇಟೆ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ ಸಮೀಪದ ಶಾಂತನಾಹಳ್ಳಿ ಗ್ರಾಮದ ಬಸ್ ಚಾಲಕ ಕಾರ್ಯನಿರ್ವಹಿಸುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ನಿನ್ನೆ‌‌ ನಡೆದಿದೆ.

ಎಸ್.ಬಿ. ಪತ್ರೇಗೌಡ (31) ಮೃತ ಬಸ್ ಚಾಲಕ. ಪತ್ರೇಗೌಡ ಖಾಸಗಿ ಬಸ್​ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ನಿನ್ನೆ ಬೆಳಿಗ್ಗೆ ಸಂಡೂರು ತಾಲೂಕಿನ ರಾಜಪುರದಿಂದ ಮೋಳಕಾಲ್ಮೂರು ಕಡೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಎದೆ ನೋವು ಕಾಣಿಸಿಕೊಂಡಿದೆ. ಇದರಿಂದಾಗಿ ಎಚ್ಚತ್ತ ಚಾಲಕ ಬಸ್​ ನಿಲ್ಲಿಸಿದ್ದಾನೆ. ತಕ್ಷಣ ಅವರನ್ನು ಸಮೀಪ ಮೆಟ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.

11:38 April 08

6ನೇ ವೇತನ ಆಯೋಗ ಜಾರಿ ಮಾಡುವಂತೆ ಬಾಲಕಿ ಮನವಿ:

ವೇತನ ಆಯೋಗ ಜಾರಿ ಮಾಡುವಂತೆ ಮನವಿ ಮಾಡಿದಲಲಿತಾ
ವೇತನ ಆಯೋಗ ಜಾರಿ ಮಾಡುವಂತೆ ಮನವಿ ಮಾಡಿದ ಲಲಿತಾ

ಹೊಸಪೇಟೆ: ಆರನೇ ವೇತನ ಆಯೋಗ ಜಾರಿ‌‌ ಮಾಡಬೇಕು ಎಂದು ಸಿಎಂ ಯಡಿಯೂರಪ್ಪ, ಸಾರಿಗೆ ಸಚಿವ ಲಕ್ಷ್ಮಣ ಸವದಿಗೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ನೌಕರರೊಬ್ಬರ ಪುತ್ರಿ, ಲಲಿತಾ ಬಾಗೇವಾಡಿ ಮನವಿ ಮಾಡಿಕೊಂಡಿದ್ದಾಳೆ.

ನಮ್ಮ ತಂದೆ ಸಾರಿಗೆ ನೌಕರನಾಗಿದ್ದಾರೆ. ಒಳ್ಳೆಯ ಶಾಲೆ, ಶಿಕ್ಷಣ ಪಡೆಯಬೇಕೆಂಬ ಆಸೆ ನಮಗೂ ಇದೆ. ಈಗ ಬರುವ ಸಂಬಳ ಯಾವುದಕ್ಕೂ ಸಾಲುವುದಿಲ್ಲ. ನೀವು ಆರನೇ ವೇತನ ಆಯೋಗ ಜಾರಿ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾಳೆ.

11:38 April 08

ಹಿತರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಪಾದಯಾತ್ರೆ:

ಹಿತ ರಕ್ಷಣಾ ವೇದಿಕೆ ಕಾರ್ಯಕರ್ತರ ಪಾದಯಾತ್
ಹಿತ ರಕ್ಷಣಾ ವೇದಿಕೆ ಕಾರ್ಯಕರ್ತರ ಪಾದಯಾತ್

ಧಾರವಾಡ: ಸಾರಿಗೆ ನೌಕರರ ಮುಷ್ಕರ ಎರಡನೇ ದಿನಕ್ಕೆ‌ ಕಾಲಿಟ್ಟಿದ್ದು, ಸಂಚಾರ ಸ್ತಬ್ಧಗೊಂಡಿದೆ. ಇದರ ಬೆನ್ನಲ್ಲೇ ಬಸ್ ಸಂಚಾರ ಆರಂಭಿಸಿ ಎಂದು ಆಗ್ರಹಿಸಿ ಧಾರವಾಡ ಹಿತ ರಕ್ಷಣಾ ವೇದಿಕೆ ಕಾರ್ಯಕರ್ತರು ಪಾದಯಾತ್ರೆ ನಡೆಸಿದರು.

ಧಾರವಾಡ ನಗರದ ಹಳೇ ಬಸ್ ನಿಲ್ದಾಣದಿಂದ ಆರಂಭಗೊಂಡ ಪಾದಯಾತ್ರೆ ಪ್ರಮುಖ‌ ಬೀದಿಗಳಲ್ಲಿ ಸಂಚರಿಸಿ ಡಿಪೋವರೆಗೆ‌ ನಡೆಯಿತು. ಕಳೆದ ಎರಡು ದಿನದಿಂದ ಪ್ರಯಾಣಿಕರು ಬಸ್ ಸಂಚಾರವಿಲ್ಲದೆ ಪರದಾಡುತ್ತಿದ್ದಾರೆ. ಕೂಡಲೇ ಬಸ್ ಸೇವೆ ಆರಂಭಿಸಿ ಎಂದು‌ ಮನವಿ ಮಾಡಿಕೊಂಡರು.

11:37 April 08

ಸ್ಥಳದಲ್ಲೇ ಕುಸಿದು ಬಿದ್ದ ಕಂಡಕ್ಟರ್:

ಬಸ್​ನಲ್ಲಿ ಕುಸಿದು ಬಿದ್ದ ಕಂಡಕ್ಟರ್
ಬಸ್​ನಲ್ಲಿ ಕುಸಿದು ಬಿದ್ದ ಕಂಡಕ್ಟರ್

ಚಿತ್ರದುರ್ಗ : ಹಲವು ಬೇಡಿಕೆಗಳ ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರದಲ್ಲಿ ಭಾಗವಹಿಸಿದ್ದ ಟ್ರೈನಿ ಕಂಡಕ್ಟರ್​ವೊಬ್ಬರು ಬಸ್​ನಲ್ಲಿ ಕುಸಿದು ಬಿದ್ದ ಘಟನೆ ಚಳ್ಳಕೆರೆ ನಗರದಲ್ಲಿ ನಡೆದಿದೆ.

ಶಿವರಾಜ್ ಅಸ್ವಸ್ಥನಾಗಿ ಕುಸಿದು ಬಿದ್ದ ಕಂಡಕ್ಟರ್. ಇವರಿಗೆ ಚಳ್ಳಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶಿವರಾಜ್ ಮೇಲಾಧಿಕಾರಿಗಳ ಒತ್ತಾಯಕ್ಕೆ ಮಣಿದು ಕೆಲಸಕ್ಕೆ ಹಾಜರಾಗಿದ್ದರು ಎಂದು ತಿಳಿದು ಬಂದಿದೆ.

11:22 April 08

ದ.ಕ‌. ಜಿಲ್ಲೆಯಲ್ಲಿ‌ ಹೇಗಿದೆ ಸಾರಿಗೆ ಮುಷ್ಕರ:

ಪ್ರಯಾಣ ಬೆಳೆಸಿದ ರಾಜಹಂಸ ಬಸ್
ಪ್ರಯಾಣ ಬೆಳೆಸಿದ ರಾಜಹಂಸ ಬಸ್

ಮಂಗಳೂರು: ನಗರದಲ್ಲಿ ಇಂದು ಕೂಡ ಕೆಎಸ್ಆರ್​ಟಿಸಿ ಬಸ್ ಸಂಚಾರ ಬಹುತೇಕ ಸ್ಥಗಿತಗೊಂಡಿದ್ದು, ಖಾಸಗಿ ಸಿಟಿ ಹಾಗೂ ಸರ್ವಿಸ್ ಬಸ್​ಗಳು ಎಂದಿನಂತೆ ಸಂಚಾರ ನಡೆಸುತ್ತಿವೆ. ಆದ್ದರಿಂದ ದ.ಕ‌. ಜಿಲ್ಲೆಯಲ್ಲಿ‌ ಸಾರಿಗೆ ಮುಷ್ಕರದ ಬಿಸಿ ತಟ್ಟಿಲ್ಲ.

ಇಂದು ಬೆರಳೆಣಿಕೆಯಷ್ಟು ಕೆಎಸ್ಆರ್​ಟಿಸಿ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೆರಳೆಣಿಕೆಯಷ್ಟು ಬಸ್​ಗಳು ಬೆಳಗ್ಗಿನ ಹೊತ್ತು ಸಂಚಾರ ನಡೆಸಿದೆ. ಬಸ್ ನಿಲ್ದಾಣದಲ್ಲಿ‌ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಮುಖ ಕಂಡು ಬಂದಿದ್ದು, ದೂರದ ಊರುಗಳಿಗೆ ಪ್ರಯಾಣಿಸುವವರು ಮಾತ್ರ ತೊಂದರೆಗೊಳಗಾಗಿದ್ದಾರೆ.

ಮಂಗಳೂರು ಕೆಎಸ್ಆರ್​ಟಿಸಿ ಬಸ್ ನಿಲ್ದಾಣದಿಂದ ಬೆಂಗಳೂರು ಕಡೆಗೆ ಒಂದೊಂದು ಓಲ್ವಾ ಹಾಗೂ ರಾಜಹಂಸ ಬಸ್​ಗಳು ಪ್ರಯಾಣಿಸಿವೆ. ಧರ್ಮಸ್ಥಳಕ್ಕೆ 3, ಕಾಸರಗೋಡಿಗೆ 2  ಬಸ್​ಗಳು ಪ್ರಯಾಣ ಬೆಳೆಸಿವೆ. ಅಲ್ಲದೇ, ಮಂಗಳೂರು ಕೆಎಸ್ಆರ್​ಟಿಸಿ ಬಸ್ ನಿಲ್ದಾಣಕ್ಕೆ ಮಧುರೈನಿಂದ ಬಂದ ಸಾರಿಗೆ ಬಸ್​ವೊಂದು ಬಿ.ಸಿ.ರೋಡ್ ಕಡೆಗೆ ಪ್ರಯಾಣ ಬೆಳೆಸಿದೆ.

11:21 April 08

ಖಾಸಗಿ ಬಸ್​ ಟಾಪ್ ಮೇಲೆ ಕುಳಿತು ಪ್ರಯಾಣಿಕರು:

ಬೆಂಗಳೂರು: ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆ ಸರಿಯಾದ ಸಮಯಕ್ಕೆ ಬೇಕಾದ ಸ್ಥಳ ತಲುಪಲು ಸಾಧ್ಯವಾಗದ ಹಿನ್ನೆಲೆ ಸಾಮಾನ್ಯ ಜನರು ಹೈರಾಣಾಗಿದ್ದಾರೆ. ನಗರದಲ್ಲಿ ಸಾರಿಗೆ ಬಸ್​ಗಳು ಇಲ್ಲದ ಕಾರಣ ನೂರಾರು ರೂ. ಕೊಟ್ಟು ಆಟೋದಲ್ಲಿ ಪ್ರಯಾಣಿಸಲು ಸಾಧ್ಯವಾಗದೇ ಖಾಸಗಿ ಬಸ್​ ಮೊರೆ ಹೋಗಿದ್ದಾರೆ. ಬಸ್​ ಫುಲ್ ಆದ ಕಾರಣ ಪ್ರಯಾಣಿಕರು ಬಸ್​ನ ಟಾಪ್ ಮೇಲೆ ಕುಳಿತು ಪ್ರಯಾಣಿಸುತ್ತಿರುವ ದೃಶ್ಯ ಬೆಂಗಳೂರು ನಗರದಲ್ಲಿ ಕಂಡು ಬಂದಿತು.

11 ಸಾವಿರಕ್ಕೂ ಹೆಚ್ಚು ಖಾಸಗಿ ಬಸ್​ಗಳಿಂದ ಸೇವೆ:

ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಸಾರಿಗೆ ನೌಕರರಿಗೆ ಸೆಡ್ಡು ಹೊಡೆದು ಖಾಸಗಿ ಬಸ್​ಗಳು ರಸ್ತೆಗಿಳಿದಿವೆ.‌ ಪರ್ಯಾಯ ವ್ಯವಸ್ಥೆ ಹೆಸರಿನಲ್ಲಿ ಬರೋಬ್ಬರಿ 22 ಸಾವಿರ ಖಾಸಗಿ ಬಸ್​ಗಳಿಗೆ ಸಾರಿಗೆ ಇಲಾಖೆ ಪರ್ಮಿಟ್ ನೀಡಿದೆ. ನಿನ್ನೆ ಒಂದೇ ದಿನ 11,155 ಖಾಸಗಿ ಬಸ್​ಗಳು ಪ್ರಯಾಣಿಕರಿಗೆ ಸೇವೆ ಒದಗಿಸಿವೆ. ಕೆಎಸ್​ಆರ್​ಟಿಸಿ ವ್ಯಾಪ್ತಿಯಲ್ಲಿ 3,152 ಬಸ್​ಗಳು ಕಾರ್ಯಾಚರಣೆ ನಡೆಸಿದ್ದು, ಬಿಎಂಟಿಸಿ ಬಸ್ ನಿಲ್ದಾಣದ ಮೂಲಕ 3,124 ಬಸ್ಸುಗಳು ಬೆಂಗಳೂರಿನಲ್ಲಿ ಕಾರ್ಯಾಚರಣೆ ಮಾಡಿವೆ.

ನಿನ್ನೆ ತಮಿಳುನಾಡು-300, ಆಂಧ್ರಪ್ರದೇಶ-125, ತೆಲಂಗಾಣ-20, ಕೇರಳ- 25 ಸೇರಿದಂತೆ ಇತರೆ ರಾಜ್ಯಗಳ ಬಸ್​ಗಳು ಬೆಂಗಳೂರಿನಿಂದ ಕಾರ್ಯಾಚರಣೆ ಆಗಿದೆ.

ಇಂದು ಕೂಡ ಬೆರಳೆಣಿಕೆಯಷ್ಟು ಸಾರಿಗೆ ಬಸ್​ಗಳ ಓಡಾಟ:

ವಿವಿಧ ಭಾಗಗಳಿಗೆ ಕೆಎಸ್​ಆರ್​ಟಿಸಿಯಿಂದ 38 ಬಸ್​ಗಳು ಸಂಚಾರ ಪ್ರಾರಂಭಿಸಿದ್ದು, ಬಿಎಂಟಿಸಿ-28, ಎನ್ಇಕೆಆರ್​ಟಿಸಿ-54, ಎನ್ ಡಬ್ಲೂ ಕೆಆರ್​ಟಿಸಿ-14 ಬಸ್​ಗಳು ಬೆಳಗ್ಗೆ 10 ಗಂಟೆಯವರೆಗೆ ಕಾರ್ಯಾಚರಣೆ ಪ್ರಾರಂಭಿಸಿವೆ.

10:47 April 08

ಜನರಿಲ್ಲದೆ ಬಣಗುಡುತ್ತಿರುವ ಬಸ್ ನಿಲ್ದಾಣ

ಹಾಸನ ಬಸ್​ ನಿಲ್ದಾಣ
ಹಾಸನ ಬಸ್​ ನಿಲ್ದಾಣ

ಹಾಸನ: ಸಾರಿಗೆ ನೌಕರರು ನಡೆಸುತ್ತಿರುವ ಪ್ರತಿಭಟನೆಗೆ ಇಂದು ಕೂಡ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಹಾಸನದಲ್ಲಿ ಎರಡನೇ ದಿನವೂ ಸಾರಿಗೆ ನೌಕರರು ಮುಷ್ಕರ ಮುಂದುವರೆಸಿದ್ದರಿಂದ ಪ್ರಯಾಣಿಕರು ಪರದಾಡುವಂತಾಗಿದೆ.

ಹೊಸ ಬಸ್ ನಿಲ್ದಾಣ, ನಗರ ಸಾರಿಗೆ ಬಸ್ ನಿಲ್ದಾಣ ಜನರಿಲ್ಲದೆ ಬಣಗುಡುತ್ತಿತ್ತು. ಹಾಸನದಲ್ಲಿ ಖಾಸಗಿ ವಾಹನಗಳ ದರ್ಬಾರು ಮುಂದುವರೆದಿದ್ದು, ಮಾಲೀಕರು ದುಪ್ಪಟ್ಟು ಹಣ ವಸೂಲಿ ಮಾಡುತ್ತಿದ್ದಾರೆ.

ನಿನ್ನೆ ಒಂದು ದಿನದ ಪ್ರತಿಭಟನೆಯಿಂದಾಗಿ ಹಾಸನ ವಿಭಾಗ ಸುಮಾರು 60 ಲಕ್ಷಕ್ಕೂ ರೂ. ಅಧಿಕ ನಷ್ಟ ಅನುಭವಿಸಿದ್ದು, ಎರಡನೇ ದಿನವಾದ ಇಂದು ಮತ್ತೆ ಬಸ್​ಗಳು  ರಸ್ತೆಗಿಳಿದ ಕಾರಣ ಒಂದು ಕೋಟಿಗೂ ಅಧಿಕ ನಷ್ಟವಾಗುವ ಸಾಧ್ಯತೆ ಇದೆ.

10:46 April 08

ಏಪ್ರಿಲ್ 14 ರ ವರೆಗೆ ವಿಶೇಷ ರೈಲು ಸಂಚಾರ

ನೈರುತ್ಯ ರೈಲ್ವೆ ವಲಯ
ನೈರುತ್ಯ ರೈಲ್ವೆ ವಲಯ

ಹುಬ್ಬಳ್ಳಿ: ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ನೈರುತ್ಯ ರೈಲ್ವೆ ವಿಭಾಗದಿಂದ ಇಂದಿನಿಂದ ಏಪ್ರಿಲ್ 14 ರ ವರೆಗೆ ವಿಶೇಷ ರೈಲುಗಳ ಸಂಚಾರಕ್ಕೆ ಎಸ್.ಡಬ್ಲ್ಯೂ.ಆರ್ ಅನುಮತಿ ನೀಡಿದೆ.

ಈಗಾಗಲೇ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ವಿಶೇಷ ರೈಲು ಸಂಚಾರ ತೀರ್ಮಾನ ಕೈಗೊಂಡಿರುವ ನೈರುತ್ಯ ರೈಲ್ವೆ ವಲಯ, ಹುಬ್ಬಳ್ಳಿ - ಯಶವಂತಪುರ, ಯಶವಂತಪುರ - ವಿಜಯಪುರ, ಯಶವಂತಪುರ-ಹುಬ್ಬಳ್ಳಿ, ಮೈಸೂರು-ಬೀದರ್, ಬೀದರ್-ಯಶವಂತಪುರ, ಕಾರವಾರ - ಯಶವಂತಪುರ, ಬೆಂಗಳೂರು-ಮೈಸೂರು ನಡುವೆ 18 ವಿಶೇಷ ರೈಲುಗಳ ವ್ಯವಸ್ಥೆ ಮಾಡಿ ನೈರುತ್ಯ ರೈಲ್ವೆ ಪ್ರಕಟಣೆ ಹೊರಡಿಸಿದೆ.

10:32 April 08

ಹುಬ್ಬಳ್ಳಿಯಲ್ಲಿ ಸಂಚಾರ ಆರಂಭಿಸಿದ 2 ಬಸ್​ಗಳು

ಸಂಚಾರ ಆರಂಭಿಸಿದ 2 ಕೆಎಸ್​ಆರ್​ಟಿಸಿ ಬಸ್​
ಸಂಚಾರ ಆರಂಭಿಸಿದ 2 ಕೆಎಸ್​ಆರ್​ಟಿಸಿ ಬಸ್​

ಹುಬ್ಬಳ್ಳಿ: ರಾಜ್ಯಾದ್ಯಂತ ಸಾರಿಗೆ ನೌಕರರು ಕರೆ ನೀಡಿರುವ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಇಂದು ಕೂಡ ಸಾರಿಗೆ ಸಂಸ್ಥೆ ಬಸ್​ಗಳು ರಸ್ತೆಗಿಳಿದಿಲ್ಲ.

ಹುಬ್ಬಳ್ಳಿ ಗ್ರಾಮೀಣ ಭಾಗದಲ್ಲಿ ಬಹುತೇಕ ಸಾರ್ವಜನಿಕರು ಬಸ್ ಸೌಕರ್ಯಗಳನ್ನು ನಂಬಿಕೊಂಡು ತಮ್ಮ ದೈನಂದಿನ ಜೀವನ ನಡೆಸುತ್ತಿದ್ದಾರೆ. ಮುಷ್ಕರ ಹಿನ್ನೆಲೆ ಸ್ಥಳೀಯರು ಖಾಸಗಿ ಬಸ್​ಗಳ ಮೊರೆ ಹೋಗುತ್ತಿದ್ದಾರೆ.

ಖಾಸಗಿ ಬಸ್ ಕಾರ್ಯಾಚರಣೆ ನಡುವೆಯೂ ಅಧಿಕಾರಿಗಳು ಕೆಲವು ಸಾರಿಗೆ ನೌಕರರ ಮನವೊಲಿಸಿ ಎರಡು ಬಸ್​ಗಳನ್ನು ಕರೆ ತಂದಿದ್ದಾರೆ. ಹುಬ್ಬಳ್ಳಿ-ಕಾರವಾರ ಮತ್ತು ಹುಬ್ಬಳ್ಳಿ-ಗದಗ ನಡುವೆ ಸಾರಿಗೆ ಸಂಸ್ಥೆ ಬಸ್​ಗಳು ಸಂಚಾರ ಆರಂಭಿಸಿವೆ.

10:31 April 08

ಶ್ರೀಶೈಲ ಯಾತ್ರಿಗಳಿಗೆ ತಟ್ಟಿದ ಬಂದ್ ಬಿಸಿ

ಪಾದಯಾತ್ರೆ ಮುಗಿಸಿ ವಾಪಾಸ್ ಆಗುತ್ತಿರುವ ಭಕ್ತರು

ರಾಯಚೂರು: ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ 2 ನೇ ದಿನಕ್ಕೆ ಕಾಲಿಟ್ಟಿದ್ದು, ರಾಯಚೂರು ಜಿಲ್ಲೆಯಲ್ಲಿ ಬಂದ್ ಬಿಸಿ ಸಾರ್ವಜನಿಕರಿಗೆ ತಟ್ಟಿದೆ.

ನಗರದಲ್ಲಿನ ಕೇಂದ್ರೀಯ ಬಸ್ ನಿಲ್ದಾಣ ಬಸ್​ ಇಲ್ಲದೆ ಬಿಕೋ ಎನ್ನುತ್ತಿದ್ದು, ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ. ಜತೆಗೆ ಶ್ರೀಶೈಲದ ಶ್ರೀಮಲ್ಲಿಕಾರ್ಜುನ ಸ್ವಾಮಿ ದರ್ಶನಕ್ಕೆ ಪಾದಯಾತ್ರೆ ಮುಗಿಸಿ ವಾಪಾಸ್ ಆಗುತ್ತಿರುವ ಭಕ್ತರಿಗೆ ಬಸ್‌ ಇಲ್ಲದಿರುವುದರಿಂದ ನಿಲ್ದಾಣದಲ್ಲಿ ಬಸ್‌ಗಾಗಿ ಕಾದು ನಂತರ ಖಾಸಗಿ ವಾಹನಗಳಲ್ಲಿ ತೆರಳುತ್ತಿದ್ದಾರೆ.

10:30 April 08

ಸಾರಿಗೆ ನೌಕರರಿಗೆ ಸಿಎಂ ಎಚ್ಚರಿಕೆ

ಸಿಎಂ ಬಿ.ಎಸ್.​ ಯಡಿಯೂರಪ್ಪ
ಸಿಎಂ ಬಿ.ಎಸ್.​ ಯಡಿಯೂರಪ್ಪ

6ನೇ ವೇತನ ಆಯೋಗದ ಪ್ರಕಾರ ವೇತನ ನೀಡಲು ಆಗುವುದಿಲ್ಲ. ಶೇ 8 ರಷ್ಟು ವೇತನ ಹೆಚ್ಚಳ ಮಾಡುವುದಕ್ಕೆ ಸೂಚಿಸಲಾಗಿದೆ. ವೇತನ ಏರಿಕೆ ಒಪ್ಪಿಕೊಂಡು ಕೆಲಸ ಮಾಡಬೇಕು. ಇಲ್ಲವಾದರೇ ಕಠಿಣ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ‌ನಿರ್ಧಾರ ಮಾಡಿದ್ದೇವೆ. ಇಂದು ಬೆಂಗಳೂರನಲ್ಲಿ ಮತ್ತೊಂದು ಸುತ್ತಿನ ಪ್ರಯತ್ನ ಮಾಡುತ್ತೇನೆ. ಒಪ್ಪದಿದ್ದರೆ ಕಾನೂನಿನಡಿ ಕ್ರಮ ಕೈಗೊಳ್ಳುತ್ತೇವೆ ಎಂದ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

09:45 April 08

ಖಾಸಗಿ ಬಸ್ ಮೊರೆ ಹೋದ ಪ್ರಯಾಣಿಕರು:

ನಿಲ್ದಾಣದಲ್ಲೇ ನಿಂತ ಬಿಎಂಟಿಸಿ ಬಸ್​ಗಳು
ನಿಲ್ದಾಣದಲ್ಲೇ ನಿಂತ ಬಿಎಂಟಿಸಿ ಬಸ್​ಗಳು

ಆನೇಕಲ್: ಆನೇಕಲ್​ನಲ್ಲಿ ಇಂದು ಬಿಎಂಟಿಸಿ ಮತ್ತು ಕೆಎಸ್​ಆರ್​ಟಿಸಿ ಬಸ್​ಗಳು ಸಂಚಾರ ಪ್ರಾರಂಭಿಸಿದ ಹಿನ್ನೆಲೆ ಪ್ರಯಾಣಿಕರು ಆಟೋ-ಖಾಸಗಿ ವಾಹನಗಳ ಮೊರೆ ಹೋಗಿದ್ದಾರೆ.

ಎರಡನೇ ದಿನವೂ ಕರ್ತವ್ಯಕ್ಕೆ ಗೈರಾದ ಸಾರಿಗೆ ನೌಕರರು ಮನೆಯಲ್ಲಿಯೇ ಕುಳಿತು ಸಂಘಟಕರಿಂದ ಬರುವ ಸಂದೇಶಗಳನ್ನು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದ್ದಾರೆ. ಇದರಿಂದಾಗಿ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದು, ಖಾಸಗಿ ಬಸ್​ಗಳು, ಟಿಟಿ, ಮಿನಿ ಬಸ್​ಗಳು, ಆಟೋ, ಕ್ಯಾಬ್ ನಡುವೆ ಪೈಪೋಟಿ ಉಂಟಾಗಿದೆ.

09:45 April 08

ಬಿಕೋ ಎನ್ನುತ್ತಿರುವ ಬಸ್ ನಿಲ್ದಾಣಗಳು:

ಖಾಸಗಿ ಬಸ್​ ಸಂಚಾರ ಪ್ರಾರಂಭ
ಮಂಡ್ಯದಲ್ಲಿ ಖಾಸಗಿ ಬಸ್​ ಸಂಚಾರ ಪ್ರಾರಂಭ

ಮಂಡ್ಯ: ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸಾರಿಗೆ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಸಾರಿಗೆ ಮುಷ್ಕರ ಹಿನ್ನೆಲೆಯಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಖಾಸಗಿ ಬಸ್‌ಗಳ ದರ್ಬಾರು ಮುಂದುವರೆದಿದ್ದು, ನಿನ್ನೆಯಿಂದ ಒಂದೇ ಒಂದು ಕೆಎಸ್​ಆರ್​ಟಿಸಿ ಬಸ್ ಕೂಡ ಸಂಚಾರಕ್ಕೆ ಇಳಿದಿಲ್ಲ. ಇಂದು ಕೂಡ ಸಾರಿಗೆ ಬಸ್ ನಿಲ್ದಾಣಗಳು ಪ್ರಯಾಣಿಕರು ಹಾಗೂ ಬಸ್​ಗಳಿಲ್ಲದೆ ಬಿಕೋ ಎನ್ನುತ್ತಿದೆ.  

ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿಪೋ ಅಥವಾ ಸಾರಿಗೆ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸದೆ ಸಾರಿಗೆ ನೌಕರರು ಮನೆ ಸೇರಿಕೊಂಡಿರುವುದು ಕುತೂಹಲ ಉಂಟು ಮಾಡಿದೆ.

ಇತ್ತ ಮಂಡ್ಯದಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್‌ಗಳು ರಸ್ತೆಗಿಳಿಯದ ಹಿನ್ನೆಲೆ ಖಾಸಗಿ ಬಸ್‌ಗಳು ನಿನ್ನೆಯಿಂದ ಪ್ರಯಾಣಿಕರ ಬಳಿ ಹೆಚ್ಚಿನ ದರ ಸುಲಿಗೆ ಮಾಡುತ್ತಿದ್ದಾರೆ. ಕಾಲೇಜು ವಿದ್ಯಾರ್ಥಿಗಳು, ಸರ್ಕಾರಿ ಇಲಾಖೆ ನೌಕರರು ಅನಿವಾರ್ಯವಾಗಿ ಖಾಸಗಿ ಬಸ್​ಗಳು ಮತ್ತು ವಾಹನಗಳನ್ನು ಆಶ್ರಯಿಸಿದ್ದಾರೆ. 

09:44 April 08

ರಸ್ತೆಗಿಳಿಯದ ಸಾರಿಗೆ ಸಂಸ್ಥೆ ಬಸ್​ಗಳು:

ರಸ್ತೆಗಿಳಿಯದ ಬಸ್​ಗಳು
ರಸ್ತೆಗಿಳಿಯದ ಬಸ್​ಗಳು

ಚಾಮರಾಜನಗರ: ಎರಡನೇ ದಿನವೂ ಸಾರಿಗೆ ಸಂಸ್ಥೆ ನೌಕರರು ಕರ್ತವ್ಯಕ್ಕೆ ಹಾಜರಾಗದಿರುವುದರಿಂದ ಖಾಸಗಿ ಬಸ್​ಗಳೇ ಕೆಎಸ್​ಆರ್​ಟಿಸಿ ಬಸ್ ನಿಲ್ದಾಣದಿಂದ ಸಂಚಾರ ಆರಂಭಿಸಿದೆ. ಅಂದಾಜು 200ಕ್ಕೂ ಹೆಚ್ಚು ಖಾಸಗಿ ಬಸ್​ಗಳು ಸಂಚಾರ ಪ್ರಾರಂಭಿಸಲು ಸಿದ್ಧವಾಗಿವೆ.  

ಇನ್ನೊಂದೆಡೆ ಕೆಎಸ್​ಆರ್​ಟಿಸಿ ಅಧಿಕಾರಿಗಳು‌ ಚಾಲಕರು ಹಾಗೂ‌ ನಿರ್ವಾಹಕರ ಮನವೊಲಿಕೆಗೆ ಕಸರತ್ತು ನಡೆಸುತ್ತಿದ್ದು, ಇದುವರೆಗೂ ಯಾರೊಬ್ಬ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿಲ್ಲ. 

09:10 April 08

ಸಾರಿಗೆ ನೌಕರರ ಮುಷ್ಕರ

6ನೇ ವೇತನ ಆಯೋಗ ಜಾರಿ ಸೇರಿದಂತೆ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಸಿಬ್ಬಂದಿ ನಿನ್ನೆಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದು, ಇಂದು ನೌಕರರ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದೆ. ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.

Last Updated : Apr 8, 2021, 3:55 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.