ಕೊಡಗು: ತಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಕೆಎಸ್ಆರ್ಟಿಸಿ ನೌಕರರು ನಡೆಸುತ್ತಿರುವ ಮುಷ್ಕರದಿಂದಾಗಿ ಮಡಿಕೇರಿಯಲ್ಲೂ ಸಾರಿಗೆ ಬಸ್ ಸಂಚಾರ ಸಂಪೂರ್ಣ ಸ್ಥಬ್ಧವಾಗಿತ್ತು.
ಬೆಳಿಗ್ಗೆ ಏಳುಗಂಟೆಯಿಂದಲೇ ಪ್ರತಿಭಟನೆ ಆರಂಭಿಸಿದ ನಾಲ್ಕು ನೂರಕ್ಕೂ ಹೆಚ್ಚು ನೌಕರರು ಒಂದೇ ಒಂದೂ ಬಸ್ಸನ್ನು ನಿಲ್ದಾಣದಿಂದ ಹೊರ ಬಿಟ್ಟಿಲ್ಲ. ಹೊರ ಜಿಲ್ಲೆಯಿಂದ ಮಡಿಕೇರಿ ಮೂಲಕ ಮತ್ತೊಂದು ಜಿಲ್ಲೆಗೆ ಹೋಗಲು ಬಂದಿದ್ದ ಪ್ರಯಾಣಿಕರನ್ನು ಇಳಿಸಿ ತೀವ್ರ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಪ್ರಯಾಣಿಕರು ತಮ್ಮ ಊರುಗಳಿಗೆ ತೆರಳಲಾಗದೆ ಪರದಾಡಿದ್ರು. ಮಧ್ಯಾಹ್ನದ ಬಳಿಕ ಬಸ್ ನಿಲ್ದಾಣದಲ್ಲಿಯೇ ಅಡುಗೆ ಮಾಡಲು ಆರಂಭಿಸಿ ಪ್ರತಿಭಟನಾಕಾರರು ಅಲ್ಲಿಯೇ ಊಟ ಮಾಡಿದ್ರು. ನಿಲ್ದಾಣದ ಒಳಗೆ ಉರುಳು ಸೇವೆ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.