ETV Bharat / state

'ಬಿಎಂಟಿಸಿ ಟಿಕೆಟ್‌ ದರ ಏರಿಕೆ ಮಾಡುವುದು ಅನಿವಾರ್ಯ' - ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ

ಅನ್​ಲಾಕ್​ ಘೋಷಣೆಯಾಗುತ್ತಿದ್ದಂತೆ ಬಸ್​ ಟಿಕೆಟ್​ ದರದ ಹೆಚ್ಚಳದ ಬಗ್ಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಸುಳಿವು ನೀಡಿದ್ದಾರೆ.

BMTC Managing Director C Shikha
ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ
author img

By

Published : Jul 5, 2021, 5:26 PM IST

ಬೆಂಗಳೂರು: ಕಳೆದೆರಡು ತಿಂಗಳ ನಂತರ ಅನ್​ಲಾಕ್​​ ಘೋಷಣೆ ಮಾಡಿದ ಬೆನ್ನಲ್ಲೆ ಬಿಎಂಟಿಸಿ ಬಸ್​ ಟಿಕೆಟ್​ ದರ ಹೆಚ್ಚಳ ಮಾಡುವ ಸುಳಿವನ್ನು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ನೀಡಿದ್ದಾರೆ.

ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಸಿ.ಶಿಖಾ ಹೇಳಿಕೆ

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನ್​​​ಲಾಕ್ ಆದ ಬಳಿಕ ಡೀಸೆಲ್​, ಪೆಟ್ರೋಲ್​ ಬೆಲೆ ಹೆಚ್ಚಾಗಿದೆ. ಬಸ್​ಗಳ ಕಾರ್ಯಾಚರಣೆಯಿಂದ ನಿರ್ವಹಣೆ ವೆಚ್ಚ ಇನ್ನಷ್ಟು ಹೆಚ್ಚಳವಾಗಿದೆ. ಹೀಗಾಗಿ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಈ ಕುರಿತು ವಾರದೊಳಗೆ ಮತ್ತೊಂದು ಪ್ರಸ್ತಾವನೆ ಕಳಿಸಿ ಸರ್ಕಾರದ ಗಮನ ಸೆಳೆಯುತ್ತೇವೆ ಎಂದು ಹೇಳಿದರು. ‌

ಅನ್​ಲಾಕ್​ ಘೋಷಣೆ ಮಾಡಿ ಎಲ್ಲಾ ಸಾರಿಗೆ ಬಸ್​ಗಳ ಓಡಾಟಕ್ಕೆ ಸರ್ಕಾರ ಅನುಮತಿ ನೀಡಿದೆ. ಈ ಹಿನ್ನೆಲೆಯಲ್ಲಿ ಬಸ್​ ನಿಲ್ದಾಣಗಳಲ್ಲಿ ಬೆಳಗ್ಗೆಯಿಂದಲೇ ಬಸ್​ ಸೌಲಭ್ಯ ಕಲ್ಪಿಸಲಾಗಿದ್ದು, ಕೋವಿಡ್​​​​​ ನಿಯಮಗಳ ಪಾಲನೆ ಕಡ್ಡಾಯಗೊಳಿಸಲಾಗಿದೆ. ದಿನ ಕಳೆದಂತೆ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದ ಕಾರಣ ಸುಮಾರು 5000 ಸಾವಿರ ಬಸ್​ಗಳನ್ನು ಅಗತ್ಯಕ್ಕೆ ತಕ್ಕಂತೆ ಬಿಡಲಾಗಿದೆ ಎಂದು ಅವರು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.