ETV Bharat / state

ಸಾರಿಗೆ ನಿಗಮಗಳು ನಷ್ಟದಿಂದ ಪಾರಾಗಲು ಹೊಸ ಪ್ಲಾನ್ : ಸಮಿತಿ ರಚಿಸಿ ವರದಿ ನೀಡಲು ಸಿಎಂ ಸೂಚನೆ

ಲಾಕ್‌ಡೌನ್ ತೆರವು ಬಳಿಕ ಬಸ್‌ಗಳು ಓಡಾಟದ ನಂತರವೂ ಆರ್ಥಿಕ ಸ್ಥಿತಿ ಹೇಳಿಕೊಳ್ಳುವಂತಿಲ್ಲ. ಹೀಗಾಗಿ, ಸಾರಿಗೆ ನಿಗಮಗಳನ್ನ ನಷ್ಟದಿಂದ ಪಾರು ಮಾಡಲು ಇದೀಗ ಸಮಿತಿ ರಚಿಸಿ ವರದಿಯನ್ನ ನೀಡುವಂತೆ ಆದೇಶಿಸಲಾಗಿದೆ..

ಸಾರಿಗೆ ನಿಗಮ
ಸಾರಿಗೆ ನಿಗಮ
author img

By

Published : Dec 1, 2021, 5:24 PM IST

ಬೆಂಗಳೂರು : ಸಾರಿಗೆ ನಿಗಮಗಳು ಸತತ ಮುಷ್ಕರ ಹಾಗೂ ಸಾಂಕ್ರಾಮಿಕ ಕೊರೊನಾದ ಸಂದರ್ಭದಲ್ಲಿ ವಿಧಿಸಿದ್ದ ಲಾಕ್‌ಡೌನ್‌ನಿಂದಾಗಿ ನಷ್ಟವನ್ನ ಅನುಭವಿಸಿದ್ದವು. ಎಷ್ಟರ ಮಟ್ಟಿಗೆ ಅಂದರೆ ನಿಗಮದ ಸಿಬ್ಬಂದಿಗೆ ವೇತನವನ್ನೂ ನೀಡಲಾಗದೇ ಸರ್ಕಾರದ ಸಹಾಯಹಸ್ತ ಚಾಚಬೇಕಾಯ್ತು.

ಲಾಕ್‌ಡೌನ್ ತೆರವಾದ ಬಳಿಕ ಬಸ್‌ಗಳು ಓಡಾಟದ ನಂತರವೂ ಆರ್ಥಿಕ ಸ್ಥಿತಿ ಹೇಳಿಕೊಳ್ಳುವಂತಿಲ್ಲ. ಹೀಗಾಗಿ, ಸಾರಿಗೆ ನಿಗಮಗಳನ್ನ ನಷ್ಟದಿಂದ ಪಾರು ಮಾಡಲು ಇದೀಗ ಸಮಿತಿ ರಚಿಸಿ ವರದಿಯನ್ನ ನೀಡುವಂತೆ ಆದೇಶಿಸಲಾಗಿದೆ.

ಮುಖ್ಯಮಂತ್ರಿಗಳ ನಿರ್ದೇಶನ ಮೇರೆಗೆ ಎಂ ಆರ್ ಶ್ರೀನಿವಾಸಮೂರ್ತಿಯವರ (ನಿವೃತ್ತ ಐಎಎಸ್) ಅಧ್ಯಕ್ಷತೆಯಲ್ಲಿ ತಜ್ಞರನ್ನೊಳಗೊಂಡಂತೆ ಒಂದು ಸಮಿತಿಯನ್ನು ರಚಿಸಿ, ರಾಜ್ಯದ ಎಲ್ಲಾ ರಸ್ತೆ ಸಾರಿಗೆ ಸಂಸ್ಥೆಗಳ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣಗಳ ಸಂಪೂರ್ಣ ಅಧ್ಯಯನ ನಡೆಸಿ ಮೂರು ತಿಂಗಳ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಆದೇಶ ಹೊರಡಿಸಲು ಸೂಚಿಸಿದ್ದಾರೆ.

ಅಂದರಂತೆ, ರಾಜ್ಯದ ರಸ್ತೆ ಸಾರಿಗೆ ಸಂಸ್ಥೆಗಳಾದ KSRTC, BMTC, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳ restructuring,asset monetisation ಆರ್ಥಿಕ ಸ್ವಾವಲಂಬನೆ ಮತ್ತು ಸಂಪನೂಲ್ಮ ಕ್ರೋಢೀಕರಣಗಳ ಸಂಪೂರ್ಣ ಅಧ್ಯಯನ ನಡೆಸಿ ಮೂರು ತಿಂಗಳೊಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲು ನಿರ್ದೇಶನ ನೀಡಲಾಗಿದೆ.

ಸಮಿತಿಯು ಅಧ್ಯಯನ ನಡೆಸಲು ನಿಗಮಗಳ ಸಹಕಾರ :

  • ಆರ್ಥಿಕ ಸ್ವಾವಲಂಬನೆ ಮತ್ತು ಸಂಪನ್ಮೂಲ ಕ್ರೋಢೀಕರಣ
  • ಸಾರಿಗೆ ಕ್ಷೇತ್ರದ ಕಾರ್ಯಕ್ಷಮತೆ ಹೆಚ್ಚಿಸುವ ನಿಟ್ಟಿನಲ್ಲಿ ಸಮಿತಿಯು ಗುರುತಿಸುವ ಇತರೆ ಯಾವುದೇ ಅಂಶಗಳನ್ನು ಒಳಗೊಂಡು ಅಧ್ಯಯನ ನಡೆಸಬಹುದು.
  • ಈ ಸಮಿತಿಯ ಅಧ್ಯಯನಕ್ಕೆ ಅವಶ್ಯವಿರುವ ಅಧಿಕಾರಿಗಳ ಸಹಕಾರ ನೀಡುವುದಕ್ಕೆ ನಾಲ್ಕು ಸಾರಿಗೆ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಮಾಹಿತಿ ನೀಡುವುದು.
  • ಸಮಿತಿಯು ಕಾರ್ಯ ನಿರ್ಹಿಸುಲು ಅಗತ್ಯವಿರುವ ಸ್ಥಳಾವಕಾಶ, ಕಚೇರಿ, ಪೀಠೋಪಕರಣಗಳು,ಸಿಬ್ಬಂದಿ ಇತರೆ ಸೌಕರ್ಯಗಳನ್ನ ನಿಗಮವೂ ಒದಗಿಸಬೇಕು.
  • ಇನ್ನು ಸಮಿತಿ ಅಧ್ಯಯನದ ಸಲುವಾಗಿ ಹೊರ ರಾಜ್ಯಕ್ಕೆ ಭೇಟಿ ನೀಡಿದಲ್ಲಿ ಪ್ರಯಾಣದ ವೆಚ್ಚ ಸೇರಿದಂತೆ ಪ್ರತಿಯೊಂದನ್ನ ನಿಗಮವೇ ಭರಿಸ ತಕ್ಕದು.
  • ಮೂರು ತಿಂಗಳೊಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.