ಬೆಂಗಳೂರು: ಗೃಹಪ್ರವೇಶದ ಮನೆಗೆ ನುಗ್ಗಿ ಮಂಗಳಮುಖಿಯರು ದಾಂಧಲೆ ನಡೆಸಿ ಹಣ ಕೊಡುವಂತೆ ಒತ್ತಾಯಿಸಿ ಅಸಭ್ಯವಾಗಿ ವರ್ತಿಸಿರುವ ಘಟನೆ ಕನಕಪುರ ರಸ್ತೆಯ ಗುಬ್ಬಲಾಳದಲ್ಲಿ ನಡೆದಿದೆ.
ಹಣ ನೀಡಲು ನಿರಾಕರಿಸಿದ್ದಕ್ಕೆ ಬಟ್ಟೆ ಬಿಚ್ಚಲು ಮುಂದಾದ ಮಂಗಳಮುಖಿಯರು ದುರ್ವರ್ತನೆ ತೋರಿದ್ದು, ಯಾವ ಪೊಲೀಸ್ ಬಂದರೂ ಏನು ಮಾಡುತ್ತಾರೆ ಎಂದು ಆವಾಜ್ ಹಾಕಿ, ನಾವು ಹಣ ಪಡೆಯದೇ ಇಲ್ಲಿಂದ ಹೋಗಲ್ಲ ಎಂದು ಗುಂಡಾವರ್ತನೆ ತೋರಿದ್ದಾರೆಂದು ಮನೆಯವರು ಆರೋಪಿಸಿದ್ದಾರೆ.
ಮಂಗಳಮುಖಿಯರ ವರ್ತನೆಗೆ ಬೇಸತ್ತ ಮನೆ ಮಾಲೀಕ ವೆಂಕಟೇಶ್ ಅಡಿಗ ಈ ಕುರಿತು ಟ್ವಿಟರ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಸಿಎಂ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಹಾಗೂ ಕಮಿಷನರ್ಗೆ ಟ್ಯಾಗ್ ಮಾಡಿದ್ದಾರೆ.
ಇದನ್ನೂ ಓದಿ: ಬೈಕ್ ಸವಾರನ ಸುಲಿಗೆ: ಮಂಗಳಮುಖಿಯ ಬಂಧನ