ETV Bharat / state

ಬೆಂಗಳೂರಲ್ಲಿ ಮಂಗಳಮುಖಿಯರಿಂದ ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಸುಲಿಗೆ - ಖಾಸಗಿ ಹೋಟೆಲ್​​ನಲ್ಲಿ ಈ ಘಟನೆ

ಪಾರ್ಟಿ ಮುಗಿಸಿ ಮನೆಗೆ ತೆರಳುತ್ತಿದ್ದ ವ್ಯಕ್ತಿಯೊಬ್ಬನನ್ನು ಮಂಗಳಮುಖಿಯರು ಕರೆದೊಯ್ದ ಬೆತ್ತಲೆ ಮಾಡಿ ಲಕ್ಷಾಂತರ ರೂಪಾಯಿ ಹಣ, ಚಿನ್ನಾಭರಣ ದೋಚಿರುವ ಪ್ರಕರಣ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

transgenders-extorted-money-from-a-person-in-bengaluru
ಬೆಂಗಳೂರಲ್ಲಿ ಮಂಗಳಮುಖಿಯರಿಂದ ವ್ಯಕ್ತಿಯ ಬೆತ್ತಲೆಗೊಳಿಸಿ ಸುಲಿಗೆ
author img

By

Published : Jan 4, 2023, 12:06 PM IST

ಬೆಂಗಳೂರು: ಪಾರ್ಟಿ ಮುಗಿಸಿ ಮನೆಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ಕರೆದೊಯ್ದ ಬೆತ್ತಲೆಗೊಳಿಸಿದ ಮಂಗಳಮುಖಿಯರು, ಬೆದರಿಸಿ ಹಾಕಿ ಆತನ ಬಳಿಯಿದ್ದ ಸುಮಾರು 4ಲಕ್ಷದ 30 ಸಾವಿರ ರೂಪಾಯಿ ದೋಚಿ ಪರಾರಿಯಾಗಿರುವ ಘಟನೆ ಅಶೋಕನಗರ ಪೊಲೀಸ್​​​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಂಧ್ರಪ್ರದೇಶದ ಪ್ರಕಾಶಂ ಮೂಲದ ಶೇಖ್ ಶ್ರೀನಿವಾಸನ್ (49) ಹಣ ಕಳೆದುಕೊಂಡವರು ಎಂದು ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದೇ 2022 ರ ಡಿಸೆಂಬರ್ 31ರಂದು ಬೆಳಗಿನ ಜಾವ 1 ಗಂಟೆಯಿಂದ ನಸುಕಿನ 4:30ರ ನಡುವೆ ರೆಸಿಡೆನ್ಸಿ ರಸ್ತೆಯ ಖಾಸಗಿ ಹೋಟೆಲ್​​ನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ. ಅಶೋಕ ನಗರ ಪೊಲೀಸ್​​ ಠಾಣೆಯಲ್ಲಿ ಶ್ರೀನಿವಾಸನ್ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಾಗಿದೆ. ಡಿಸೆಂಬರ್ 30ರಂದು ಮೆಹಂದಿ ಪಬ್​​ಗೆ ತೆರಳಿದ್ದ ಶ್ರೀನಿವಾಸನ್ ಬಳಿಕ ಊಟ ಮುಗಿಸಿ ನಡೆದುಕೊಂಡೇ ಮನೆಗೆ ತೆರಳುತ್ತಿದ್ದರು ಎಂದು ಹೇಳಲಾಗುತ್ತಿದೆ. ಈ ವೇಳೆ ಪರ್ಲ್ ಅಕಾಡೆಮಿ ಬಳಿ ಆಟೋದಲ್ಲಿ ಬಂದ ಇಬ್ಬರು ಮಂಗಳಮುಖಿಯರು ಕೈ ಸನ್ನೆ ಮಾಡಿ ಶ್ರೀನಿವಾಸನ್​​ರನ್ನ ತಮ್ಮ ಆಟೋದಲ್ಲಿ ಹತ್ತಿಸಿಕೊಂಡಿದ್ದಾರೆ.

ಬಳಿಕ ಆಟೋದಲ್ಲಿ ಸುತ್ತಾಡಿಸಿ ಡಿಸೆಂಬರ್ 31ರ ಬೆಳಗ್ಗಿನಜಾವ ರೆಸಿಡೆನ್ಸಿ ರಸ್ತೆಯ ಖಾಸಗಿ ಹೋಟೆಲ್​​ಗೆ ಕರೆತಂದಿದ್ದಾರೆ. ನಂತರ ಮತ್ತಿಬ್ಬರು ಮಂಗಳಮುಖಿಯರನ್ನ ಹೋಟೆಲ್​​ಗೆ ಕರೆಯಿಸಿಕೊಂಡಿದ್ದಾರೆ. ಬಳಿಕ ಶ್ರೀನಿವಾಸನ್​ರನ್ನ ಬೆತ್ತಲೆಗೊಳಿಸಿ ವಿಡಿಯೋ ಚಿತ್ರೀಕರಿಸಿಕೊಂಡು ವ್ಯಕ್ತಿಯ ಬಳಿ ಇದ್ದ ವಾಚ್, ಉಂಗುರ, ಡೆಬಿಟ್ ಕಾರ್ಡ್, ಚಿನ್ನದ ಚೈನ್​​, 40 ಸಾವಿರ ರೂ‌ಪಾಯಿ ನಗದನ್ನು ಕಸಿದುಕೊಂಡಿದ್ದಾರೆ ಎಂದು ಸಂತ್ರಸ್ತ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ ಎಂದು ಸಿಲಿಕಾನ್​ ಸಿಟಿಯ ಪೊಲೀಸರು ಮಾಹಿತಿ ನೀಡಿದ್ದಾರೆ.

ಒಂಟಿಯಾಗಿದ್ದ ವ್ಯಕ್ತಿಯನ್ನು ಹೆದರಿಸಿ, ಬೆದರಿಸಿ, ಆತನ ಬಳಿ ಇದ್ದ ಎಲ್ಲ ಹಣ ಸೇರಿದಂತೆ ಎಲ್ಲ ವಸ್ತುಗಳನ್ನು ಕಸಿದುಕೊಂಡ ಬಳಿಕ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ಗೂಗಲ್ ಪೇ ಮೂಲಕ 1 ಲಕ್ಷ ರೂಪಾಯಿ ಹಾಗೂ ಡೆಬಿಟ್ ಕಾರ್ಡ್ ಪಿನ್ ಪಡೆದು ಸುಮಾರು 2.90 ಲಕ್ಷ ರೂ. ಹಣವನ್ನು ಡ್ರಾ ಮಾಡಿಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ‌ ಉಲ್ಲೇಖಿಸಲಾಗಿದೆ. ಹೋಟೆಲ್ ಸಿಬ್ಬಂದಿಯ ಸಹಾಯದಿಂದ ಶ್ರೀನಿವಾಸನ್ ಅಶೋಕನಗರ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ದೂರು ದಾಖಲಿಸಿಕೊಂಡಿರುವ ಸಿಲಿಕಾನ್​ ಸಿಟಿಯ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸುತ್ತಿರುವ ಪೊಲೀಸರು ಕೂಷಕಂಷ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಚಹಾದಲ್ಲಿ ಸಕ್ಕರೆ ಕಡಿಮೆ ಇತ್ತೆಂದು ಹೋಟೆಲ್​​ ಮಾಲೀಕನಿಗೆ ಚಾಕುವಿನಿಂದ ಇರಿದ ಗ್ರಾಹಕ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.