ETV Bharat / state

ಫುಟ್‌ಪಾತ್ ಮೇಲೆ ಟ್ರಾನ್ಸ್‌ಫಾರ್ಮರ್ ಅಳವಡಿಕೆ: ಬೆಸ್ಕಾಂ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ - High Court upset over Bescom action

ನಗರದ ಪಾದಚಾರಿ ಮಾರ್ಗಗಳು ಹಾಗೂ ರಾಜಕಾಲುವೆಗಳ ಮೇಲಿರುವ ಟ್ರಾನ್ಸ್‌ಫಾರ್ಮರ್​ಗಳು ಅಪಾಯಕಾರಿಯಾಗಿದ್ದು, ಅವುಗಳನ್ನು ತೆರವುಗೊಳಿಸಲು ನಿರ್ದೇಶಿಸಬೇಕು ಎಂದು ಕೋರಿ ನಿವೃತ್ತ ವಿಂಗ್ ಕಮಾಂಡರ್ ಜಿ. ಬಿ. ಅತ್ರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿರುವ ಹೈಕೋರ್ಟ್ ಪಾದಚಾರಿ ಮಾರ್ಗಗಳಲ್ಲಿ ಟ್ರಾನ್ಸ್ ಫಾರ್ಮರ್​​ಗಳನ್ನು ಅಳವಡಿಸಲು ಯಾರಿಂದ ಅನುಮತಿ ಪಡೆದಿದ್ದೀರಾ ಎಂಬುದನ್ನು ಸ್ಪಷ್ಪಡಿಸಿ ಎಂದು ಬೆಸ್ಕಾಂಗೆ ತಾಕೀತು ಮಾಡಿದೆ.

Transformer adoption on footpath
ಹೈಕೋರ್ಟ್
author img

By

Published : Mar 4, 2021, 9:18 PM IST

ಬೆಂಗಳೂರು: ನಗರದ ಕೆಲವೆಡೆ ಪಾದಚಾರಿ ಮಾರ್ಗಗಳಲ್ಲೇ ಟ್ರಾನ್ಸ್‌ ಫಾರ್ಮರ್​ಗಳನ್ನು ಅಳವಡಿಸಿರುವ ಬೆಸ್ಕಾಂ ಕ್ರಮಕ್ಕೆ ಹೈಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿದೆ. ರಸ್ತೆ ಮಧ್ಯದಲ್ಲೇ ಕಂಬ ನೆಡುತ್ತೀರಾ ಎಂದು ಕೋರ್ಟ್​ ಪ್ರಶ್ನಿಸಿದೆ. ಅಲ್ಲದೇ, ಪಾದಚಾರಿ ಮಾರ್ಗಗಳಲ್ಲಿ ಟ್ರಾನ್ಸ್ ಫಾರ್ಮರ್​​ಗಳನ್ನು ಅಳವಡಿಸಲು ಯಾರಿಂದ ಅನುಮತಿ ಪಡೆದಿದ್ದೀರಾ ಎಂಬುದನ್ನು ಸ್ಪಷ್ಪಡಿಸಿ ಎಂದು ತಾಕೀತು ಮಾಡಿದೆ.

ನಗರದ ಪಾದಚಾರಿ ಮಾರ್ಗಗಳು ಹಾಗೂ ರಾಜಕಾಲುವೆಗಳ ಮೇಲಿರುವ ಟ್ರಾನ್ಸ್‌ಫಾರ್ಮರ್​ಗಳು ಅಪಾಯಕಾರಿಯಾಗಿದ್ದು, ಅವುಗಳನ್ನು ತೆರವುಗೊಳಿಸಲು ನಿರ್ದೇಶಿಸಬೇಕು ಎಂದು ಕೋರಿ ನಿವೃತ್ತ ವಿಂಗ್ ಕಮಾಂಡರ್ ಜಿ. ಬಿ. ಅತ್ರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಬಿಬಿಎಂಪಿ ಪರ ವಕೀಲರು, ನಗರದ ಪಾದಚಾರಿ ಮಾರ್ಗಗಳ ಮೇಲೆ ವಿದ್ಯುತ್ ಕಂಬ ಹಾಗೂ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳಡಿಸಲು ಬೆಸ್ಕಾಂಗೆ ಅನುಮತಿ ನೀಡಿಲ್ಲ ಎಂದು ಪೀಠಕ್ಕೆ ತಿಳಿಸಿದರು. ಇನ್ನು ಬೆಂಸ್ಕಾ ಪರ ವಕೀಲರು, ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಸಿದ್ದಪಡಿಸಿದ್ದ ಪ್ರಮಾಣ ಪತ್ರವನ್ನು ಪೀಠಕ್ಕೆ ಸಲ್ಲಿಸಿ, ವಿದ್ಯುತ್ ಕಾಯ್ದೆ-2013ರ ಸೆಕ್ಷನ್ 67(2) ಪ್ರಕಾರ ಅಗತ್ಯವಿದ್ದರೆ ಮಾತ್ರ ವಿದ್ಯುತ್ ಲೇನ್ ಮತ್ತು ಟ್ರಾನ್ಸ್‌ಫಾರ್ಮರ್ ಅಳವಡಿಸಲು ಸ್ಥಳೀಯ ಪ್ರಾಧಿಕಾರದ ಅನುಮತಿ ಪಡೆದುಕೊಳ್ಳಬೇಕಷ್ಟೇ ಎಂದರು.

ಇದನ್ನೂ ಓದಿ: ಈ ದೇಶದ ಪ್ರಧಾನಿಯೇ RSS​ನವರು, ಆ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ: ಸದನದಲ್ಲಿ ಸಿಎಂ ಗರಂ

ಅಲ್ಲದೇ, ಈವರೆಗೆ ಯಾವುದೇ ಪ್ರದೇಶದಲ್ಲಿ ವಿದ್ಯುತ್ ಕಾಮಗಾರಿ ನಡೆಸಲು ಸ್ಥಳೀಯ ಪ್ರಾಧಿಕಾರದ ಪೂರ್ವಾನುಮತಿ ಪಡೆಯುವ ಅವಶ್ಯಕತೆ ಎದುರಾಗಿಲ್ಲ. ನಿರ್ದಿಷ್ಟ ಸಂದರ್ಭದಲ್ಲಿ ಸ್ಥಳೀಯ ಪ್ರಾಧಿಕಾರದಿಂದ ಅನುಮತಿ ಪಡೆಯವುದು ಕಡ್ಡಾಯ ಇದ್ದಾಗ ಮಾತ್ರ ನಿಯಮಾನುಸಾರ ಅನುಮತಿ ಪಡೆದು ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ವಿದ್ಯುತ್ ಕಾಮಗಾರಿ ನಡೆಸಲಾಗುತ್ತಿದೆ ಎಂದರು.

ಬೆಸ್ಕಾಂ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಹಾಗಾದರೆ ಎಲ್ಲೆಂದರಲ್ಲಿ ಕಂಬ ನೆಡುತ್ತೀರಾ, ರಸ್ತೆ ಮಧ್ಯಭಾಗದಲ್ಲೂ ವಿದ್ಯುತ್ ಕಂಬ ಹಾಗೂ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಬಹುದೇ? ಎಂದು ಪ್ರಶ್ನಿಸಿತು. ಅಲ್ಲದೆ, ವಿದ್ಯುತ್ ಲೇನ್ ಮತ್ತು ಟ್ರಾನ್ಸ್‌ಫಾರ್ಮರ್‌ಗಳನ್ನು ಅಳಡಿಸಲು ಅಗತ್ಯವಿರುವ ಕಡೆಯಲ್ಲಿ ಯಾರಿಂದ ಅನುಮತಿ ಪಡೆದಿದ್ದೀರಿ. ಹಾಗೊಂದು ವೇಳೆ ಯಾವುದೇ ಪ್ರಾಧಿಕಾರದಿಂದ ಅನುಮತಿ ಪಡೆದಿದ್ದರೆ, ಅದರ ಪ್ರತಿಯನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಸಲ್ಲಿಸಿ ಎಂದು ಬೆಸ್ಕಾಂಗೆ ತಾಕೀತು ಮಾಡಿ, ವಿಚಾರಣೆಯನ್ನು ಮಾ.15ಕ್ಕೆ ಮುಂದೂಡಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.