ಬೆಂಗಳೂರು: ರಾಜ್ಯದ ವಿವಿಧ ನ್ಯಾಯಾಲಯಗಳ 49 ಮಂದಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರನ್ನ ವರ್ಗಾವಣೆಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಇದೇ ವೇಳೆ 70 ಮಂದಿ ಸಿವಿಲ್ ನ್ಯಾಯಾಧೀಶರುಗಳಿಗೆ ಹಿರಿಯ ಶ್ರೇಣಿ ಸಿವಿಲ್ ಪದೋನ್ನತಿ ನೀಡಿ ವರ್ಗಾವಣೆಗೊಳಿಸಿದೆ. ಈ ವರ್ಗಾವಣೆ ಕುರಿತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ರಾಜೇಂದ್ರ ಬದಾಮಿಕರ್ ಅವರು ಏಪ್ರಿಲ್ 30ರಂದು ಅಧಿಸೂಚನೆ ಹೊರಡಿಸಿದ್ದಾರೆ.
ಎಲ್ಲ ನ್ಯಾಯಾಧೀಶರ ವರ್ಗಾವಣೆ 2020ರ ಜೂನ್ 1ರಿಂದ ಅನ್ವಯವಾಗಲಿವೆ. ವರ್ಗಾವಣೆಯಾದವರ ವಿವರವನ್ನು ಹೈಕೋರ್ಟ್ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.