ಬೆಂಗಳೂರು : ದಕ್ಷಿಣ ರೈಲ್ವೆಯ ಕನ್ಯಾಕುಮಾರಿ-ನಾಗರಕೋಯಿಲ್-ತ್ರಿವೇಂದ್ರಂ ವಿಭಾಗಗಳಲ್ಲಿ ಭೂಕುಸಿತದ ಕಾರಣದಿಂದಾಗಿ ಇಂದು ಕೆಎಸ್‌ಆರ್ ಬೆಂಗಳೂರಿನಿಂದ ಹೊರಡಬೇಕಿದ್ದ ರೈಲು ಸೇವೆ ರದ್ದಾ(Railway service cancel)ಗಿದೆ.
ರೈಲು ನಂ. 06526 ಕೆಎಸ್‌ಆರ್ ಬೆಂಗಳೂರು-ಕನ್ಯಾಕುಮಾರಿ ಎಕ್ಸ್‌ಪ್ರೆಸ್ ವಿಶೇಷ ರೈಲು ಕೊಲ್ಲಾಮ್-ಕನ್ಯಾಕುಮಾರಿ ನಡುವೆ ಮತ್ತೆ ಸಂಚಾರ ರದ್ದುಗೊಳಿಸಲಾಗಿದೆ.
ಹಾಗೆಯೇ, ನವೆಂಬರ್ 17ರಿಂದ ಕನ್ಯಾಕುಮಾರಿಯಿಂದ ಪ್ರಾರಂಭವಾಗುವ ರೈಲು ನಂ.06527 ಕನ್ಯಾಕುಮಾರಿ-ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು ಕನ್ಯಾಕುಮಾರಿ-ಕೊಲ್ಲಂ ನಡುವೆ ರದ್ದುಗೊಳಿಸಲಾಗಿದೆ. ಈ ಕುರಿತು ಇಲಾಖೆ ಪ್ರಕಟಣೆ ಹೊರಡಿಸಿದೆ.
ಓದಿ: ಪದ್ಮಶ್ರೀ ತುಳಸಜ್ಜಿ ಸರಳತೆ ; ಚಪ್ಪಲಿ ಧರಿಸದ ಬಗ್ಗೆ ಮಾಹಿತಿ ಬಿಚ್ಚಿಟ್ಟ ವೃಕ್ಷಮಾತೆ!